ಶ್ರೀ. ನಾಗೇಶ್ವರರಾವ್ |
ಸೌ. ಸತ್ಯವಾಣಿ ಚೌಧರಿ |
ಶ್ರೀ. ಶ್ರೀಕಾಂತ ಚೌಧರಿ |
ಸೌ. ಸಂಗೀತಾ ಚೌಧರಿ |
‘ನಾನು ಮತ್ತು ನನ್ನ ಯಜಮಾನರು (ಶ್ರೀ. ಶ್ರೀಕಾಂತ ಚೌಧರಿ) ಕಳೆದ ೧೪ ವರ್ಷಗಳಿಂದ ಸನಾತನ ಸಂಸ್ಥೆಯ ಮಾರ್ಗದರ್ಶನಗನುಸಾರ ಪೂರ್ಣವೇಳೆ ಸಾಧನೆಯನ್ನು ಮಾಡುತ್ತಿದ್ದೇವೆ. ನನ್ನ ಅತ್ತೆ-ಮಾವನವರು (ಸೌ. ಸತ್ಯವಾಣಿ ಚೌಧರಿ (ವಯಸ್ಸು ೬೫ ವರ್ಷಗಳು) ಮತ್ತು ಶ್ರೀ. ನಾಗೇಶ್ವರರಾವ್ ಚೌಧರಿ (ವಯಸ್ಸು ೭೧ ವರ್ಷಗಳು)) ರಾಯಚೂರಿನಲ್ಲಿರುತ್ತಾರೆ. ನಾನು ರಾಮನಾಥಿ (ಗೋವಾದ ಸನಾತನ ಆಶ್ರಮದಲ್ಲಿದ್ದು ಸೇವೆಯನ್ನು ಮಾಡುತ್ತೇನೆ ಮತ್ತು ಯಜಮಾನರು ಬೆಂಗಳೂರಿನಲ್ಲಿ ಸೇವೆ ಮಾಡುತ್ತಾರೆ.) ನಾವು ೬-೮ ತಿಂಗಳಿಗೊಮ್ಮೆ ಮನೆಗೆ ಹೋಗುತ್ತೇವೆ ಮತ್ತು ಸುಮಾರು ೮-೧೦ ದಿನಗಳವರೆಗೆ ಮನೆಯಲ್ಲಿರುತ್ತೇವೆ. ೨೦೦೫ ರಲ್ಲಿ ನನ್ನ ಮದುವೆ ಆಯಿತು. ಈ ಮೊದಲು ಅತ್ತೆ-ಮಾವನವರಿಗೆ ಸನಾತನ ಸಂಸ್ಥೆಯ ಬಗ್ಗೆ ಮಾಹಿತಿ ಇತ್ತು. ಅವರು ನಾಮಜಪವನ್ನು ಮಾಡುತ್ತಿದ್ದರು. ಮದುವೆಯ ನಂತರ ನನ್ನ ಸೇವೆಯಲ್ಲಿ ಅಡಚಣೆ ಬರಬಾರದು; ಎಂದು ಅವರು ನನ್ನನ್ನು ಎಲ್ಲ ರೀತಿಯಿಂದ ನೋಡಿಕೊಂಡರು. ಅವರು ಸೊಸೆಯೆಂದು ನನ್ನಿಂದ ಯಾವುದೇ ಅಪೇಕ್ಷೆಯನ್ನು ಇಡಲಿಲ್ಲ ಮತ್ತು ನನಗೆ ತಾಯಿ-ತಂದೆಯ ಪ್ರೀತಿಯನ್ನೂ ನೀಡಿದರು. ನನಗೆ ಅರಿವಾದ ಅವರ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.
೧. ನಿರಪೇಕ್ಷತೆ
೧ ಅ. ಸೊಸೆ ಮತ್ತು ಮಗನು ‘ಮನೆಯ ಸಮಾರಂಭಗಳಿಗೆ ಬರಬೇಕು’, ಎಂದು ಒತ್ತಾಯಿಸದೇ ಸಾಧನೆ ಮತ್ತು ಸೇವೆಗೆ ಆದ್ಯತೆ ನೀಡಲು ಹೇಳುವುದು : ಇಷ್ಟು ವರ್ಷಗಳಲ್ಲಿ ಅತ್ತೆ-ಮಾವ ನವರು ನಮಗೆ ಮನೆಗೆ ಬರಬೇಕೆಂದು ಯಾವತ್ತೂ ಒತ್ತಾಯ ಮಾಡಲಿಲ್ಲ. ಯಾವುದಾದರೊಂದು ಹಬ್ಬವಿದ್ದರೆ, ಅವರು ನಮಗೆ ‘ನಿಮ್ಮ ಆಯೋಜನೆ ಏನಿದೆ ?’, ಎಂದು ಕೇಳುತ್ತಾರೆ. ನಾವು ನಮ್ಮ ಸೇವೆಯ ಆಯೋಜನೆಯನ್ನು ಹೇಳಿದ ನಂತರ ಅವರು ಸಹಜವಾಗಿ, ‘ಸರಿ’ ಎಂದು ಹೇಳುತ್ತಾರೆ. ಮನೆಯಲ್ಲಿ ಯಾವುದಾದರೊಂದು ಸಮಾರಂಭವಿದ್ದರೆ, ಅವರು ನನಗೆ ‘ಸಮಾರಂಭಕ್ಕಾಗಿ ಬರಲೇ ಬೇಕು’, ಎಂದು ಎಂದಿಗೂ ಒತ್ತಾಯ ಮಾಡಲಿಲ್ಲ. ಅವರು ಯಾವಾಗಲೂ, ‘ನಿಮ್ಮ ಸಾಧನೆ ಮತ್ತು ಸೇವೆಗಾಗಿಯೇ ಪ್ರಾಧಾನ್ಯತೆ ನೀಡಿ’ ಎಂದು ಹೇಳುತ್ತಾರೆ. ನಾವು ಮಾಡುತ್ತಿರುವ ಸಾಧನೆ ಮತ್ತು ಸೇವೆಯ ಬಗ್ಗೆ ಅವರು ಯಾವಾಗಲೂ ಗೌರವದಿಂದ ಮಾತನಾಡುತ್ತಾರೆ. ಅವರು ನಮ್ಮೊಂದಿಗೆ ಅಧಿಕಾರವಾಣಿಯಿಂದ ಎಂದಿಗೂ ಮಾತನಾಡಲಿಲ್ಲ. ಮನೆಯಲ್ಲಿ ನಮ್ಮ ಸಾಧನೆಗೆ ಅನುಕೂಲ ವಾತಾವರಣವಿದೆ.
೧ ಆ. ಸೊಸೆಯು ಆಶ್ರಮದಿಂದ ಮನೆಗೆ ಬಂದನಂತರ ‘ಅವಳು ಮನೆಗೆಲಸಗಳನ್ನು ಮಾಡಬೇಕು’, ಎಂದು ಅತ್ತೆ-ಮಾವನವರಿಗೆ ಅಪೇಕ್ಷೆ ಇಲ್ಲದಿರುವುದು ಮತ್ತು ಆಗ ಮನೆಕೆಲಸಗಳನ್ನೆಲ್ಲ ಅವರು ಸ್ವತಃ ಮಾಡುವುದು : ನಾನು ಕೆಲವೊಮ್ಮೆ ಆಶ್ರಮದಿಂದ ಮನೆಗೆ ಹೋಗುತ್ತೇನೆ. ಆದ್ದರಿಂದ ‘ನನಗೆ ವಿಶ್ರಾಂತಿ ಸಿಗಬೇಕು, ಹಾಗೆಯೇ ವೈಯಕ್ತಿಕ ಕೆಲಸಗಳಿಗಾಗಿ ಸಮಯ ಸಿಗಬೇಕು’, ಎಂದು ಮನೆ ಕೆಲಸಗಳನ್ನೆಲ್ಲ ಅತ್ತೆ-ಮಾವನವರೇ ಮಾಡುತ್ತಾರೆ. ‘ನಾನು ಮನೆಯಲ್ಲಿನ ಕೆಲಸಗಳನ್ನು ಮಾಡಲೇ ಬೇಕು’, ಎಂದು ಅವರು ಎಂದಿಗೂ ಅಪೇಕ್ಷೆ ಮಾಡಲಿಲ್ಲ. ಅವರು ಮನೆಗೆಲಸಗಳನ್ನು ಸಹಜವಾಗಿ ಮಾಡುತ್ತಾರೆ. ಅತ್ತೆಯವರು ನನಗೆ, ಯಾವುದಾದರೊಂದು ಪದಾರ್ಥವನ್ನು ಮಾಡಬೇಕಾದರೆ, ‘ಅದನ್ನು ಯಾವಾಗ ಮಾಡೋಣ ? ಹೇಗೆ ಮಾಡೋಣ ?’, ಎಂದು ವಿಚಾರಿಸುತ್ತಾರೆ. ಆಗ ನನಗೆ ‘ನಾವು ಆಶ್ರಮದಲ್ಲಿಯೇ ಇದ್ದೇವೆ’, ಎಂದು ಎನಿಸುತ್ತದೆ.
೨. ಪ್ರೇಮಭಾವ
೨ ಅ. ಅತ್ತೆಯವರು ಸೊಸೆಗೆ ಇಷ್ಟವಾದ ತಿಂಡಿಯನ್ನು ತಯಾರಿಸಿ ಆಶ್ರಮಕ್ಕೆ ಕಳುಹಿಸಿಕೊಡುವುದು : ಅತ್ತೆ-ಮಾವನವರಲ್ಲಿ ತುಂಬಾ ಪ್ರೇಮಭಾವವಿದೆ. ಕಳೆದ ೧೪-೧೫ ವರ್ಷಗಳಲ್ಲಿ ರಾಯಚೂರಿನಿಂದ ಸಾಧಕರು ಗೋವಾಕ್ಕೆ ಬರುವರಿದ್ದರೆ, ಅತ್ತೆಯವರು ಆ ಸಾಧಕನೊಂದಿಗೆ ನನಗಾಗಿ ತಿನಿಸು ಮಾಡಿ ಕಳುಹಿಸುತ್ತಾರೆ. ತಿನಿಸನ್ನು ಮಾಡುವ ಮೊದಲು ಅವರು ‘ನಿನಗೆ ಏನು ಇಷ್ಟವಾಗುತ್ತದೆ ?’, ಎಂದು ನನ್ನಲ್ಲಿ ಕೇಳುತ್ತಾರೆ ಮತ್ತು ಆ ತಿಂಡಿಯನ್ನೇ ಮಾಡಿ ಕಳುಹಿಸುತ್ತಾರೆ. ನಾನು ಮನೆಗೆ ಹೋಗುವ ಮೊದಲು ನನಗೆ ಇಷ್ಟವಾಗುವ ಪದಾರ್ಥಗಳಿಗಾಗಿ ಬೇಕಾಗುವ ವಸ್ತುಗಳನ್ನು ತಂದಿಡುತ್ತಾರೆ ಮತ್ತು ಪೂರ್ವಸಿದ್ಧತೆ ಮಾಡಿ ಇಡುತ್ತಾರೆ. ಅವರ ಈ ಎಲ್ಲ ಪ್ರಯತ್ನಗಳು ವ್ಯಾವಹಾರಿಕ ಮಟ್ಟದಲ್ಲಿರುವುದಿಲ್ಲ. ಅವರಲ್ಲಿ ಮೂಲದಲ್ಲಿಯೇ ಪ್ರೇಮ ಭಾವವಿದೆ ಮತ್ತು ‘ಅವರಿಗೆ ತಿಳಿದಿರುವ ಸಾಧನೆಯ ಪ್ರಯತ್ನವೆಂದು ಅವರು ಇದನ್ನೆಲ್ಲ ಮಾಡುತ್ತಾರೆ’, ಎಂದು ನನಗೆ ಅನಿಸುತ್ತದೆ.
೨ ಆ. ಸೊಸೆಗೆ, ಬಹಳ ವರ್ಷಗಳ ನಂತರ ಮೊದಲ ಬಾರಿ ಗಂಡನ ಮನೆಯಲ್ಲಿ ತುಂಬಾ ದಿನಗಳವರೆಗೆ ವಾಸ್ತವ್ಯವಿದ್ದಾಗ ‘ತನ್ನ ತಾಯಿ-ತಂದೆಯ ಜೊತೆಯಲ್ಲಿದ್ದೇನೆ’, ಎಂಬ ಅರಿವಾಗುವುದು : ಮಾವನವರಿಗೆ ಹುಷಾರಿಲ್ಲದಿದ್ದಾಗ ನಾನು ತುಂಬಾ ವರ್ಷಗಳ ನಂತರ ಮೊದಲ ಬಾರಿ ಒಂದು ತಿಂಗಳು ಮನೆಯಲ್ಲಿದ್ದೆನು. ಅವರು ಹುಷಾರಾದ ನಂತರ ನಾನು ಆಶ್ರಮಕ್ಕೆ ಬರಲು ಹೊರಡುತ್ತಿದ್ದೆನು. ಆಗ ಅತ್ತೆ-ಮಾವನವರು ಇಬ್ಬರೂ ನನಗೆ ಬೀಳ್ಕೊಡಲು ಕೆಳಗೆ ಬಂದಿದ್ದರು. ಆ ಸಮಯದಲ್ಲಿ ಅವರಿಗೆ ಕಣ್ಣಲ್ಲಿ ನೀರು ಬಂದಿದ್ದವು. ಆಗ ನನಗೆ ‘ನಾನು ನನ್ನ ತಾಯಿ-ತಂದೆಯ ಜೊತೆಯಲ್ಲಿದ್ದೇನೆ’, ಎಂದು ಎನಿಸಿತು. ‘ಇತರರನ್ನು ನಿರಪೇಕ್ಷವಾಗಿ ಪ್ರೀತಿಸುವುದು ಹೇಗೆ ?’, ಎಂಬುದು ನನಗೆ ಈ ಪ್ರಸಂಗದಿಂದ ಕಲಿಯಲು ಸಿಕ್ಕಿತು.
೩. ದೇವರ ಮೇಲಿನ ಶ್ರದ್ಧೆ
೩ ಅ. ಅನಾರೋಗ್ಯದಲ್ಲಿರುವಾಗ ‘ದೇವರು ನಮ್ಮನ್ನು ನೋಡಿಕೊಳ್ಳುತ್ತಾನೆ’, ಎಂಬ ಶ್ರದ್ಧೆಯನ್ನಿಡುವುದು : ಅತ್ತೆಗೆ ‘ಥೈರೈಡ್’ ಮತ್ತು ಉಚ್ಚ ರಕ್ತದೊತ್ತಡದ ತೊಂದರೆ ಇರುವುದರಿಂದ ಅವರ ಆರೋಗ್ಯವು ಸರಿ ಇರುವುದಿಲ್ಲ. ಆದರೂ ಅವರು ನನಗೆ ‘ಕೆಲವು ದಿನಗಳಿಗಾಗಿ ಮನೆಗೆ ಬಾ’, ಎಂದು ಕರೆಯುವುದಿಲ್ಲ. ಈ ಕುರಿತು ನಾನು ಅವರಿಗೆ ಕೇಳಿದ ನಂತರ ಅವರು, ”ನೀವು ಸೇವೆಯನ್ನು ಮಾಡುತ್ತೀರಿ. ನನಗೆ ಸ್ವಲ್ಪ ದಿನಗಳ ನಂತರ ಗುಣವಾಗುತ್ತದೆ. ದೇವರು ನಮ್ಮನ್ನು ನೋಡಿಕೊಳ್ಳುತ್ತಾನೆ. ನೀವು ನಮ್ಮಿಂದ ದೂರ ಇರುವುದರಿಂದ ದೇವರು ನಮಗೆ ವಿವಿಧ ಮಾಧ್ಯಮಗಳಿಂದ ಸಹಾಯ ಮಾಡುತ್ತಾನೆ” ಎಂದು ಹೇಳುತ್ತಾರೆ. ಮಾವನವರನ್ನು ಹೊರ ಊರಿಗೆ ಆಸ್ಪತ್ರೆಗೆ ಪರೀಕ್ಷಣೆ ಮಾಡಲು ಕರೆದುಕೊಂಡು ಹೋಗಲಿಕ್ಕಿದ್ದಾಗ ಅತ್ತೆಯವರು ತಾವೇ ಅದರ ವ್ಯವಸ್ಥೆಗಳನ್ನು ಮಾಡಿದರು.
೩ ಆ. ಕೆಲವೊಮ್ಮೆ ಅತ್ತೆಯವರಿಗೆ ‘ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ?’, ಎಂದು ಒತ್ತಡ ಬರುತ್ತದೆ. ಆಗ ಅವರು ದೇವರನ್ನು ಸ್ಮರಿಸುತ್ತಾರೆ ಮತ್ತು ದೇವರ ಮೇಲೆ ಶ್ರದ್ಧೆಯನ್ನಿಟ್ಟು ಸ್ಥಿರವಾಗಿರುತ್ತಾರೆ.
೪. ಕೃತಜ್ಞತೆ ಮತ್ತು ಪ್ರಾರ್ಥನೆ
‘ನನ್ನ ಸಾಧನೆಯಲ್ಲಿ ಅಡಚಣೆ ಬರಬಾರದು’, ಎಂದು ಮನೆಯ ಎಲ್ಲ ಜನರೂ ಪ್ರಯತ್ನಿಸುತ್ತಾರೆ. ಇದು ನನ್ನ ಹಿಂದಿನ ಜನ್ಮದ ಪುಣ್ಯದ ಫಲವಾಗಿದೆ. ‘ಎಲ್ಲರೂ ನನ್ನನ್ನು ಆನಂದದಿಂದ ನೋಡಿಕೊಂಡಿದ್ದಾರೆ’, ಆದ್ದರಿಂದ ನಾನು ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಕಡಿಮೆಯೇ ಇದೆ. ‘ಮದುವೆಯ ನಂತರ ದೇವರು ನನಗೆ ನನ್ನ ಸಾಧನೆಗೆ ಪೂರಕ ಅತ್ತೆ-ಮಾವ ಮತ್ತು ಅನುಕೂಲ ವಾತಾವರಣವನ್ನು ನೀಡಿದ ಬಗ್ಗೆ ನಾನು ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ ಹಾಗೂ ‘ಪರಾತ್ಪರ ಗುರು ಡಾಕ್ಟರರಿಗೆ ಅಪೇಕ್ಷಿತ ಸಾಧನೆ ಯನ್ನು ಅವರು ನನ್ನಿಂದ ಮಾಡಿಸಿಕೊಳ್ಳಬೇಕು’, ಎಂದು ಅವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.’
ಸಾಧಕಿ ಮತ್ತು ಅವಳ ಅತ್ತೆ-ಮಾವನವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ನಡೆಸಿ ತಮ್ಮಲ್ಲಿ ಪರಿವರ್ತನೆ ಮಾಡಿಕೊಳ್ಳುವುದು
೧. ಸಾಧಕಿ ಮತ್ತು ಅವಳ ಅತ್ತೆ ಇವರಿಬ್ಬರು ಪರಸ್ಪರರಲ್ಲಿರುವ ಅಪೇಕ್ಷೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸುವುದು
‘ಈ ಮೊದಲು ನನ್ನ ಮತ್ತು ಅತ್ತೆಯವರಲ್ಲಿ ಪರಸ್ಪರ ಅಪೇಕ್ಷೆ ಇರುತ್ತಿತ್ತು; ಆದರೆ ಅತ್ತೆಯವರು ಅದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಅವರು ನನಗೆ ‘ಸ್ವಯಂಸೂಚನೆಗಳನ್ನು ಹೇಗೆ ಕೊಡಲಿ ?’, ಎಂದು ವಿಚಾರಿಸುತ್ತಿರುತ್ತಾರೆ ಮತ್ತು ನಾನು ಹೇಳಿದಂತೆ ಅವರು ಸ್ವಯಂಸೂಚನೆಗಳನ್ನು ಕೊಡುತ್ತಿದ್ದರು. ನನ್ನ ಮನಸ್ಸಿನಲ್ಲಿ ಅವರ ಬಗ್ಗೆ ಅಪೇಕ್ಷೆ ಇದ್ದರೆ, ಆ ಕುರಿತು ನಾನು ನನ್ನ ಯಜಮಾನರಿಗೆ ಹೇಳುತ್ತಿದ್ದೆನು. ಆಗ ಯಜಮಾನರು ನನಗೆ ಸಾಧನೆಯ ಯೋಗ್ಯ ದೃಷ್ಟಿಕೋನವನ್ನು ನೀಡುತ್ತಿದ್ದರು. ಆ ರೀತಿ ನಾನು ಪ್ರಯತ್ನಿಸುತ್ತಿದ್ದೆನು.
ನನ್ನ ಮದುವೆಯಾಗಿ ೧೮ ವರ್ಷಗಳಾದವು. ಈ ಕಾಲಾವಧಿಯಲ್ಲಿ ನನ್ನ ಮತ್ತು ಅತ್ತೆಯ ನಡುವೆ ಯಾವುದೇ ವಿಷಯಗಳ ಬಗ್ಗೆ ವಾದ ಅಥವಾ ಭಿನ್ನಾಭಿಪ್ರಾಯವಾಗಲಿಲ್ಲ. ನಾವು ಪರಸ್ಪರರ ಬಗ್ಗೆ ಎಂದಿಗೂ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲಿಲ್ಲ. ‘ನಾನು ಸ್ವಲ್ಪ ದಿನಗಳ ಮಟ್ಟಿಗೆ ಮನೆಗೆ ಹೋಗುತ್ತೇನೆ. ಆದ್ದರಿಂದ ಅಪೇಕ್ಷೆಗಳಿಂದ ಸಂಘರ್ಷದಲ್ಲಿ ಸಮಯವನ್ನು ಕಳೆಯದೇ ಅದಕ್ಕಾಗಿ ಪ್ರಯತ್ನಿಸಿ ನಾನೂ ಆನಂದದಿಂದಿರಬೇಕು ಮತ್ತು ಕುಟುಂಬದವರಿಗೂ ಆನಂದ ವನ್ನು ನೀಡಬೇಕು’, ಎಂಬ ವಿಚಾರ ಮಾಡಿ ಪ್ರಯತ್ನಿಸಿದಾಗ ‘ಪ್ರತಿಯೊಂದು ಪರಿಸ್ಥಿತಿಯಲ್ಲಿ ದೇವರು ಸಹಾಯ ಮಾಡುತ್ತಿದ್ದಾನೆ’, ಎಂದು ನನಗೆ ಅನುಭವಿಸಲು ಸಿಕ್ಕಿತು.
೨. ಸೊಸೆಗೆ ತೊಂದರೆ ಆಗಬಾರದು; ಎಂದು ಅತ್ತೆಯು ಅವಳನ್ನು ಸಂಭಾಳಿಸಿಕೊಳ್ಳುವುದು
ಒಮ್ಮೆ ನಾನು ಅತ್ತೆಯವರಿಗೆ, ”ನಿಮಗೆ ನನ್ನಿಂದ ಯಾವುದೇ ಅಪೇಕ್ಷೆ ಇಲ್ಲವೇ ?” ಎಂದು ಕೇಳಿದೆನು. ಆಗ ಅವರು, ”ನೀನು ಸ್ವಲ್ಪ ದಿನಗಳ ಮಟ್ಟಿಗೆ ಮನೆಗೆ ಬರುತ್ತಿ. ಆದ್ದರಿಂದ ‘ನಾನು ನಿನಗಾಗಿ ಏನೇನು ಮಾಡಬಹುದು ? ನಿನ್ನನ್ನು ಹೇಗೆ ಅರ್ಥಮಾಡಿಕೊಳ್ಳಬಹುದು ? ನಾವು ಪರಸ್ಪರರಲ್ಲಿ ತಿಳಿದುಕೊಂಡು ಆನಂದವಾಗಿರಬಹುದು ?’, ಅದಕ್ಕಾಗಿ ನಾನು ಪ್ರಯತ್ನಿಸುತ್ತೇನೆ” ಎಂದು ಹೇಳಿದರು. ನನಗೆ ತೊಂದರೆ ಆಗಬಾರದು; ಎಂದು ಅವರು ನನ್ನನ್ನು ಸಂಭಾಳಿಸಿಕೊಳ್ಳುತ್ತಾರೆ. ‘ಪರಾತ್ಪರ ಗುರು ಡಾಕ್ಟರರು ಕಲಿಸಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ಹಾಗೂ ಅವರು ಅಂತರ್ಮನಸ್ಸಿನ ಮೇಲೆ ಮಾಡಿದ ಸಾಧನೆಯ ಸಂಸ್ಕಾರ’, ಇವುಗಳಿಂದ ನಾವು ಪರಸ್ಪರರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
೩. ಅತ್ತೆಯವರು ತನ್ನಿಂದಾದ ತಪ್ಪುಗಳನ್ನು ಹೇಳಿ ‘ಅದಕ್ಕಾಗಿ ಹೇಗೆ ಪ್ರಯತ್ನಿಸಲಿ ?’, ಎಂದು ಸೊಸೆಯಲ್ಲಿ ಕೇಳುವುದು ಮತ್ತು ಅವಳು ಹೇಳಿದಂತೆ ಸ್ವಯಂಸೂಚನೆಗಳನ್ನು ಕೊಡಲು ಪ್ರಯತ್ನಿಸುವುದು
ಅತ್ತೆಯವರು ಅವರಿಂದಾದ ತಪ್ಪುಗಳನ್ನು ಅಥವಾ ಅವರ ಮನಸ್ಸಿನಲ್ಲಿರುವ ಅಯೋಗ್ಯ ವಿಚಾರಗಳನ್ನು ನನ್ನಲ್ಲಿ ಹೇಳುತ್ತಾರೆ ಮತ್ತು ‘ಅವುಗಳ ಮೇಲೆ ಹೇಗೆ ಪ್ರಯತ್ನಿಸಲಿ ?’, ಎಂದು ಕೇಳುತ್ತಾರೆ. ಅವರಿಗೆ ಯಾವುದಾದರೊಂದು ವಿಷಯದ ಒತ್ತಡ ಬಂದಿದ್ದರೆ ಅಥವಾ ಕೆಲವು ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ, ಅವರು ನನ್ನೊಂದಿಗೆ ಮನಮುಕ್ತತೆ ಯಿಂದ ಮಾತನಾಡುತ್ತಾರೆ. ನಾನು ಅವರಿಗೆ ತುಂಬಾ ಸಮಯವನ್ನೂ ಕೊಡುವುದಿಲ್ಲ; ಆದರೂ ಅವರು ನನಗೆ ಎಲ್ಲ ವಿಷಯಗಳನ್ನು ಸಹಜವಾಗಿ ಹೇಳುತ್ತಾರೆ. ಅವರು ನನಗೆ ಸ್ವಯಂಸೂಚನೆಗಳನ್ನು ಕೇಳುತ್ತಾರೆ ಮತ್ತು ಸ್ವಯಂಸೂಚನೆಗಳನ್ನು ನೀಡಿ ಅದರಂತೆ ಪ್ರಯತ್ನಿಸುತ್ತಾರೆ.
೪. ಸೊಸೆಯು ಯಜಮಾನರು ಹೇಳಿದಂತೆ ಸಾಧನೆಗಾಗಿ ಪ್ರಯತ್ನಿಸಿದ ನಂತರ ಅವಳಿಗೆ ಕ್ರಮೇಣ ಕುಟುಂಬದವರ ಬಗ್ಗೆ ಆತ್ಮೀಯತೆ ಎನಿಸುವುದು
ಈ ಮೊದಲು ನನ್ನ ಮನಸ್ಸಿನಲ್ಲಿ ಅತ್ತೆಯವರ ಬಗ್ಗೆ ತುಂಬಾ ತಪ್ಪುಕಲ್ಪನೆಗಳಿರುತ್ತಿದ್ದವು. ಆ ಸಮಯದಲ್ಲಿ ನಾನು ನನ್ನ ಯಜಮಾನರಿಗೆ ಎಲ್ಲವನ್ನು ಹೇಳುತ್ತಿದ್ದೆನು. ಅವರು ನನ್ನ ಮಾತುಗಳನ್ನು ಕೇಳುತ್ತಿದ್ದರು ಮತ್ತು ನನಗೆ ಸಾಧನೆಯ ದೃಷ್ಟಿಕೋನವನ್ನು ನೀಡುತ್ತಿದ್ದರು. ಅವರು ನನಗೆ, ‘ನಾನು ಈ ವಿಚಾರಗಳಲ್ಲಿ ಸಿಲುಕದೇ ಅವುಗಳನ್ನು ಜಯಿಸಿ ಅತ್ತೆ-ಮಾವನವರನ್ನು ತಿಳಿದುಕೊಳ್ಳಬೇಕು’, ಎಂದು ಹೇಳುತ್ತಿದ್ದರು. ಕೆಲವೊಮ್ಮೆ ನನಗೆ ಆಗುವ ಅನಿಷ್ಟ ಶಕ್ತಿಗಳ ತೊಂದರೆಯಿಂದ ನನ್ನಿಂದ ಏನಾದರೂ ತಪ್ಪಾದರೆ, ಯಜಮಾನರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಅವರಿಗೆ, ‘ಅವರು ಹೇಳಿದ ಪ್ರಯತ್ನಗಳನ್ನು ನಾನು ಮಾಡಲೇ ಬೇಕು’, ಎಂಬ ಅಪೇಕ್ಷೆ ಇರುತ್ತಿರಲಿಲ್ಲ. ಅವರು ನನಗೆ ಹೇಳುತ್ತಿದ್ದರು ಮತ್ತು ಪ್ರಯತ್ನಿಸಲು ಸಮಯವನ್ನು ಕೊಡುತ್ತಿದ್ದರು. ಅನಂತರ ನಿಧಾನವಾಗಿ ನನಗೆ ಕುಟುಂಬದವರ ಬಗ್ಗೆ ಆತ್ಮೀಯತೆ ಎನಿಸತೊಡಗಿತು.
೫. ಸೊಸೆಗೆ ಅತ್ತೆ-ಮಾವನವರ ಬಗ್ಗೆ ಕೃತಜ್ಞತೆ ಎನಿಸವುದು
ಈ ಮೊದಲು ನನ್ನ ಮನಸ್ಸಿನಲ್ಲಿ ಅತ್ತೆ-ಮಾವನವರ ಬಗ್ಗೆ ಕೃತಜ್ಞತೆಯ ಅರಿವಾಗುತ್ತಿರಲಿಲ್ಲ. ನನಗೆ ಅವರಿಂದ ಅಪೇಕ್ಷೆ ಇರುತ್ತಿತ್ತು ಮತ್ತು ಅದನ್ನು ವ್ಯಕ್ತಪಡಿಸುತ್ತಿದ್ದೆನು. ಕೆಲವು ತಿಂಗಳುಗಳಿಂದ ನನಗೆ ಅವರ ಬಗ್ಗೆ ಒಳಗಿನಿಂದ ಕೃತಜ್ಞತೆ ಎನಿಸುತ್ತಿದೆ.
೬. ಸೊಸೆ ಹೇಳಿದಂತೆ ಮಾವನವರು ಕೇಳುವುದು
ಈಗ ನಮ್ಮ ಮಾತುಗಳು ಮಾಯೆಯ ವಿಷಯಗಳ ಬಗ್ಗೆ ಇರುವುದಿಲ್ಲ. ಮಾವನವರಿಗೆ ಸಾಧನೆಯ ಕೆಲವು ಪ್ರಯತ್ನಗಳನ್ನು ಹೇಳಿದರೆ ಅಥವಾ ಅವರಿಗೆ ಅವರ ಆರೋಗ್ಯದ ದೃಷ್ಟಿಯಲ್ಲಿ ಏನಾದರೂ ಹೇಳಿದರೆ, ಅದನ್ನು ಸಹಜವಾಗಿ ಕೇಳುತ್ತಾರೆ. ಅತ್ತೆ-ಮಾವ ಇವರಿಬ್ಬರೂ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ನಡೆಸಲು ಪ್ರಯತ್ನಿಸುತ್ತಿದ್ದಾರೆ.’
– ಸೌ. ಸಂಗೀತಾ ಶ್ರೀಕಾಂತ ಚೌಧರಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೫.೨೦೨೩)