ರೋಹಿತ್, ನಿನ್ನದು ತಪ್ಪಿಲ್ಲ, ತಪ್ಪು ೭೧೨ ನೇ ವರ್ಷದ್ದಿದೆ !
ಸತತ ೧೦ ಪಂದ್ಯಗಳನ್ನು ಅತ್ಯಂತ ಸಹಜವಾಗಿ ನಿನ್ನ (ಭಾರತೀಯ ಕ್ರಿಕೇಟ್ ತಂಡದ ಕ್ಯಾಪ್ಟನ್ ರೋಹಿತ ಶರ್ಮಾ ಇವರ) ತಂಡ ಗೆದ್ದಿತು. ನಿನ್ನ ತಂಡದಲ್ಲಿ ಮಹಮ್ಮದ ಸಿರಾಜ್ ಮತ್ತು ಮಹಮ್ಮದ ಶಮಿ ಈ ಇಬ್ಬರು ಮುಸಲ್ಮಾನರು ಇದ್ದರೂ, ಅವರು ಕೂಡ ಎಲ್ಲರ ಹಾಗೆಯೇ ರೋಷದಿಂದ ಹೋರಾಡಿದರು ಅಥವಾ ಎಲ್ಲರ ಹಾಗೆಯೇ ಹೋರಾಡಲಿಲ್ಲ. ಅವರನ್ನು ನಾವು ಯಾರೂ ಈ ಸ್ಥಳದಲ್ಲಿ ಹಿಂದೂಯೇತರ ಎಂದು ಒಪ್ಪಿಕೊಳ್ಳುವುದಿಲ್ಲ. ೧೧ ನೇ ನಿರ್ಣಾಯಕ ಪಂದ್ಯದಲ್ಲಿ ಮಾತ್ರ ನೀವು ಎಷ್ಟು ಸಹಜವಾಗಿ ಆ ೧೦ ಪಂದ್ಯಗಳನ್ನು ಗೆದ್ದಿದ್ದೀರೋ, ಅಷ್ಟೇ ಸಹಜವಾಗಿ ಸೋತಿರಿ. ನಿಮ್ಮನ್ನು ಅಂತಿಮ ಪಂದ್ಯದಲ್ಲಿ ಸೋಲಿಸಿದ ಆ ಆಸ್ಟ್ರೇಲಿಯಾವನ್ನು ವರ್ಲ್ಡ್‌ಕಪ್‌ನ ನಂತರದ ಮೊದಲ ಟೀಮ್ – ೨೦ ಪಂದ್ಯದಲ್ಲಿ ನೀವು ಸಹಜವಾಗಿ ಸೋಲಿಸಿದಿರಿ. ಇದೇ ಆಸ್ಟ್ರೇಲಿಯಾವನ್ನು ನೀವು ಸರಣಿ ಪಂದ್ಯದಲ್ಲಿಯೂ ಸಹಜವಾಗಿ ಸೋಲಿಸಿದ್ದೀರಿ. ‘ಜಾಗತಿಕ ಸ್ತರದ ಆಟಗಾರರು ತಂಡದಲ್ಲಿರುವಾಗ ನಾವು ಅಂತಿಮ ಪಂದ್ಯದಲ್ಲಿ ಸೋಲುತ್ತೇವೆ’, ಇದರಿಂದ ಕೋಟಿಗಟ್ಟಲೆ ಹಿಂದೂಗಳಿಗೆ ಮತ್ತು ಭಾರತೀಯರಿಗೆ ನೋವಾಗಿರಬಹುದು. ಇದನ್ನು ಅವರು ಹೆಚ್ಚು ಕಾಲ ಹೃದಯದಲ್ಲಿಟ್ಟುಕೊಳ್ಳುವುದಿಲ್ಲ. ಅವರಿಗೆ ಯಾರೂ ಹಾಗೆ ಕಲಿಸಲಿಲ್ಲ. ಆದ್ದರಿಂದ ಈ ತಪ್ಪು ನಿಮ್ಮದಲ್ಲ ಎನ್ನುತ್ತಿದ್ದೇನೆ. ಈ ತಪ್ಪಿನ ಅಥವಾ ನಿರ್ಣಾಯಕ ಕ್ಷಣದಲ್ಲಿ ಸೋಲೊಪ್ಪಿಕೊಳ್ಳುವ ಪಾಠ ನಮಗೆ ೭೧೨ ನೇ ಇಸವಿಯಿಂದಲೇ ಸಿಕ್ಕಿರಬಹುದು, ಅದರಲ್ಲಿ ನಿಮ್ಮದೇನು ದೋಷ ? ಎಷ್ಟೋ ಪೀಳಿಗೆಗಳಿಂದ ನಮ್ಮ ಹೃದಯಕ್ಕೆ ಯಾವುದೇ ತರಹದ ನೋವಾಗದಿರುವಾಗ ನಿಮ್ಮ ಮೇಲೇಕೆ ದೋಷಾರೋಪಣೆ ಮಾಡಬೇಕು ? |
೧. ಭಾರತೀಯರು ನಿರ್ಣಾಯಕ ಕ್ಷಣದಲ್ಲಿ ಸೋಲುವ ಮರೆಯಲಾರದ ಕ್ಷಣಗಳು !
ಅ. ೧೯೪೭ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅಂತಿಮತಃ ಭಾರತ ಕಾಶ್ಮೀರವನ್ನು ವಶಪಡಿಸಿಕೊಂಡಿತು. ಯುದ್ಧ ಗೆಲ್ಲುವ ಕ್ಷಣದಲ್ಲಿ ಈ ಸಮಸ್ಯೆಯನ್ನು ನಾವು ಅನಾವಶ್ಯಕ ಸಂಯುಕ್ತ ರಾಷ್ಟ್ರಕ್ಕೆ ಒಯ್ದೆವು. ಇಲ್ಲಿ ಯುದ್ಧವನ್ನು ಗೆದ್ದರೂ ಅಂತಿಮ ಕ್ಷಣದಲ್ಲಿ ನಾವು ಸೋತೆವು; ಆದರೆ ಅದರ ಬಗ್ಗೆ ನಮಗೆ ಏನೂ ಅನಿಸುವುದಿಲ್ಲ. ಪಾಕ್ ಆಕ್ರಮಿತ ಕಾಶ್ಮೀರವನ್ನು ಜಗತ್ತಿನಾದ್ಯಂತ ಭಾರತದಿಂದ ಬೇರೆಯೆಂದು ತೋರಿಸಲಾಗುತ್ತದೆ. ಅದೂ ನಮಗೇನೂ ಅನಿಸುವುದಿಲ್ಲ.
ಆ. ೧೯೬೫ ರಲ್ಲಿ ಕಚ್ಛ್‌ನ ಯುದ್ಧಭೂಮಿಯ ಸಂಘರ್ಷದಿಂದ ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಾವು ಗೆದ್ದೆವು; ಆದರೆ ಯುದ್ಧದ ನಂತರದ ತಾಷ್ಕಂದ ಒಪ್ಪಂದದಿಂದ ನಾವು ಸೋತೆವು. ಇದರಲ್ಲಿ ನಮ್ಮ ಪ್ರಧಾನಮಂತ್ರಿ ಲಾಲ ಬಹಾದ್ದೂರ ಶಾಸ್ತ್ರಿಯವರನ್ನೂ ಕಳೆದುಕೊಂಡೆವು. ಇಲ್ಲಿಯೂ ಅಂತಿಮ ಕ್ಷಣದಲ್ಲಿ ನಾವು ಸೋತೆವು. ಇದರಿಂದಲೂ ನಮಗೆ ಏನೂ ಅನಿಸುವುದಿಲ್ಲ.
ಇ. ೧೯೭೧ ರಲ್ಲಿಯೂ ನಾವು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟೆವು; ಆದರೆ ಅಲ್ಲಿನ ಹಿಂದೂಗಳ ಸಮಸ್ಯೆಯನ್ನು ನಿವಾರಿಸಲಿಲ್ಲ. ಬಾಂಗ್ಲಾದೇಶಿ ನುಸುಳುಕೋರರ ವಿಷಯವನ್ನು ಹಾಗೆಯೇ ಇಟ್ಟುಕೊಂಡೆವು. ರೋಹಿತ, ನೀವು ಅಂತಿಮ ಪಂದ್ಯ ಸೋತಾಗ ಇದೇ ಬಾಂಗ್ಲಾದೇಶದಲ್ಲಿ ಆನಂದೋತ್ಸವ ಆಚರಿಸಲಾಯಿತು.
ಈ. ಆಝಾದ ಹಿಂದ್ ಸೇನೆಯ ಸೈನಿಕರು ತಮ್ಮ ರಕ್ತವನ್ನು ಹರಿಸಿದರು. ಎಷ್ಟೋ ಕ್ರಾಂತಿಕಾರಿಗಳು ನೇಣುಕಂಬಕ್ಕೇರಿದರು. ಆಂಗ್ಲರು ಸ್ವಾತಂತ್ರ್ಯವನ್ನು ನೀಡಲೇ ಬೇಕಿತ್ತು; ಆದರೆ ನಾವು ಪಾಕಿಸ್ತಾನವನ್ನು ಬೇರೆ ಮಾಡಿಕೊಟ್ಟೆವು. ಧರ್ಮದ ಆಧಾರದಲ್ಲಿ ದೇಶವನ್ನು ತುಂಡು ಮಾಡಿದಾಗಲೂ ನಾವು ನಮ್ಮ ಭಾಗವನ್ನು ‘ಜಾತ್ಯತೀತ’ ಮಾಡಿದೆವು. ಈ ಭಾರವನ್ನು ನಾವೇ ನಮ್ಮ ಮೇಲೆ ಹೇರಿಕೊಂಡೆವು. ಪುನಃ ಅಂತಿಮ ಕ್ಷಣದಲ್ಲಿ ನಾವು ಸೋತೆವು.
೨. ರೋಹಿತ, ನಿನ್ನನ್ನೊಬ್ಬನ್ನನೇ ಯಾಕೆ ದೋಷಿಯನ್ನಾಗಿಸಬೇಕು ?
ಇವೆಲ್ಲದರ ಬಗ್ಗೆ ನಮಗೆ ಏನೂ ಅನಿಸುವುದಿಲ್ಲ. ಸ್ವಾತಂತ್ರ್ಯವೀರ ಸಾವರಕರರು ಹೇಳಿದಂತೆ ‘ಸದ್ಗುಣ ವಿಕೃತಿಯ ದೋಷ ನಮ್ಮಲ್ಲಿದೆಯೇ ?’ ಮತ್ತು ಅದು ನಿಮ್ಮಲ್ಲಿಯೂ ಇಳಿದಿದೆಯೇ ? ಎಂಬುದರ ಅಭ್ಯಾಸ ಮಾಡಬೇಕು; ಆದರೆ ಈ ಅಭ್ಯಾಸ ಮಾಡುವವರು ಯಾರು ?
ಈ ದೇಶದ ಮೇಲೆ ಗಝನೀಯ ಮಹಮ್ಮದನಿಂದ ಬಾಬರ, ಅಕ್ಬರ, ಔರಂಗಜೇಬನ ವರೆಗೆ ಅನೇಕ ಜನರು ದಾಳಿ ಮಾಡಿದರು. ಬಲವಂತವಾಗಿ ಹಿಂದೂಗಳನ್ನು ಮತಾಂತರಿಸಿದರು. ಈ ಮತಾಂತರಿತ ಹಿಂದೂಗಳು ಪುನಃ ಹಿಂದೂ ಧರ್ಮಕ್ಕೆ ಹಿಂದಿರುಗಬಹುದಿತ್ತು, ಅದಕ್ಕಾಗಿ ಅವರು ಆತುರಪಟ್ಟಿರಲೂ ಬಹುದು; ಆದರೆ ನಾವು ಗೆದ್ದ ನಂತರ ಅವರನ್ನು ಪುನಃ ನಮ್ಮಲ್ಲಿ ಸೇರಿಸಿಕೊಳ್ಳಲಿಲ್ಲ. ಅವರನ್ನು ನಾವು ದೂರ ಮಾಡಿದೆವು. ನಮ್ಮಿಂದ ಬೇರೆಯೆಂದು ತಿಳಿದೆವು. ಅದರದ್ದೇ ಪರಿಣಾಮವಿರಬಹುದೇ ? ಪುರಾತನ ಕಾಲದಲ್ಲಿ ಒಂದೆಡೆ ಅಫ್ಘಾನಿಸ್ತಾನ ಮತ್ತು ಇನ್ನೊಂದೆಡೆ ಕಂಬೋಡಿಯಾ ಇಷ್ಟು ವಿಸ್ತಾರವಾಗಿ ಹರಡಿದ್ದ ಹಿಂದೂ ಧರ್ಮ, ಆದರೆ ಇಂದು ಭಾರತದಲ್ಲಿಯೂ ರಾಜಧರ್ಮವಿಲ್ಲ. ‘ಮುಂಬರುವ ೫೦-೧೦೦ ವರ್ಷಗಳಲ್ಲಿ ಭಾರತ ದಲ್ಲಿಯೂ ಹಿಂದೂಗಳು ಅಲ್ಪಸಂಖ್ಯಾತರು ಆಗುವರೇ ? ಎನ್ನುವ ಭಯ ನಮಗಿದೆ. ಹಾಗಾದರೆ ನಮಗೆ ಹೋಗಲು ಬೇರೆ ದೇಶವಿಲ್ಲ. ‘ಹಿಮಾಲಯಕ್ಕೆ ಹೋಗುವುದು ಅಥವಾ ಸಮುದ್ರದಲ್ಲಿ ಮುಳುಗಿ ಸಾಯುವುದು, ಇಷ್ಟೇ ನಮ್ಮ ಕೈಯಲ್ಲಿರುವುದು’, ಎಂಬುದು ಕೂಡ ನಮಗೆ ತಿಳಿಯುವುದಿಲ್ಲ. ಪರಂಪರಾಗತ ಅಸಹಾಯಕತನ ನಮ್ಮಲ್ಲಿ ಸಂಪೂರ್ಣ ಹುದುಗಿ ಕೊಂಡಿದೆ. ಹಾಗಿರುವಾಗ ರೋಹಿತ, ನಿನ್ನನ್ನೊ ಬ್ಬನನ್ನೇ ಯಾಕೆ ದೋಷಿಯನ್ನಾಗಿಸಬೇಕು ?
೩. ‘ಬಚೆಂಗೆತೊ ಔರ್ ಭೀ ಲಡೇಂಗೆ |’, ನಮಗೆ ಇದನ್ನು ಕಲಿಸಲೇ ಇಲ್ಲ, ಅದರ ಪರಿಣಾಮ ಇದಾಗಿದೆ !
ರೋಹಿತ ಅದೂ ನೀನೊಬ್ಬ ಆಟಗಾರನಾದ್ದೀಯಾ ! ‘ಆಸ್ಟ್ರೇಲಿಯಾದ ಕ್ಯಾಪ್ಟನ್‌ನನ್ನೇ ಅಂದರೆ ಪ್ಯಟ್ ಕಮಿನ್ಸ್‌ನನ್ನೇ ಅವರ ತಂಡದಿಂದ ಒಡೆದು ಭಾರತೀಯ ತಂಡದ ಕ್ಯಾಪ್ಟನ್ ಮಾಡುವುದು ಹಾಗೂ ತಾನು ಉಪಕ್ಯಾಪ್ಟನ್ ಆಗುವುದು’, ಈ ಪದ್ಧತಿಯಿಂದ ಪಂದ್ಯವನ್ನು ಗೆಲ್ಲುವ ಪ್ರಯತ್ನ ಮಾಡಲು ನಿನಗೆ ಹೊಳೆದಿರಲಿಕ್ಕಿಲ್ಲ. ಅಂದರೆ ಆ ರೀತಿ ಪಂದ್ಯವನ್ನು ಗೆಲ್ಲುವುದಿಲ್ಲ. ಇದರ ಅನುಭವ ಇತರೆಡೆಯೂ ಗಮನಕ್ಕೆ ಬರುತ್ತದೆ; ಆದರೆ ಸದ್ಯ ಅದಕ್ಕೆ ಅವಕಾಶವಿದೆ.
ವರ್ಷಗಟ್ಟಲೆ ನಾವು ಅಕ್ಬರ ಮತ್ತು ಬೀರಬಲ ಇವರ ಕಥೆಯನ್ನು ಕೇಳುತ್ತೇವೆ. ನಮಗೆ ಅದರಿಂದಲೂ ಕೋಪ ಬರುವುದಿಲ್ಲ. ನನ್ನ ಮಾತು ಕೇಳುವುದಾದರೆ, ರೋಹಿತ ನೀನು ಛತ್ರಪತಿ ಸಂಭಾಜಿ ಮಹಾರಾಜರ ಅಭ್ಯಾಸ ಮಾಡಬೇಕು. ಸಾವು ಕಣ್ಮುಂದೆ ಇರುವಾಗಲೂ ಮತಾಂತರಕ್ಕೆ ಸಿದ್ಧರಾಗದ ಆ ಬಲಿದಾನದಿಂದ ಔರಂಗಜೇಬನ ಕನಸು ನುಚ್ಚು ನೂರಾಯಿತು. ಸೇನಾಪತಿ ಅಥವಾ ರಾಜನು ಎದುರಿಗೆ ಇಲ್ಲದ ಸೇನಾಸಾಗರವು ‘ನಾವು ಸೋಲುವೆವು’, ಎಂಬುದನ್ನು ಗೃಹಿಸಿ ಆ ಮಹಾಕಾಯ ಮೊಗಲರೊಂದಿಗೆ ಹೋರಾಡುತ್ತಾ ಇತ್ತು ಹಾಗೂ ಕೊನೆಗೆ ಈ ಮಹಾರಾಷ್ಟ್ರದ ಮಣ್ಣಿನಲ್ಲಿ ಔರಂಗಜೇಬ ಹೊರಳಾಡುತ್ತಾ ಸತ್ತುಹೋದನು. ನೀನು ದತ್ತಾಜೀ ಶಿಂದೆಯವರ ಬಗ್ಗೆ ಅಭ್ಯಾಸ ಮಾಡಬೇಕು. ಪಾನಿಪತದಲ್ಲಿನ ರಣಭೂಮಿಯಲ್ಲಿ ಸಾವು ಎದುರಿಗೆ ಕಾಣುವಾಗ ದತ್ತಾಜಿಯವರಿಗೆ ಅಬದಾಲೀಯು ಕುಹಕದಿಂದ ”ಕ್ಯಾ ದತ್ತಾಜೀ ಲಡೆಂಗೆ ?” ಎಂದಾಗ ಇದಕ್ಕೆ ಮಣ್ಣಿನಲ್ಲಿ ಕುಸಿದಿರುವ, ಮೈಮೇಲಿನ ವೇದನೆಯನ್ನು ಸಹಿಸಿಕೊಳ್ಳುತ್ತಾ ಆ ಯೋಧನು ರೋಷದಿಂದ ಉತ್ತರಿಸಿದನು ‘ಬಚೆಂಗೆ ತೊ ಔರ್ ಭೀ ಲಡೇಂಗೆ |’ ನಮಗೆ ಇದನ್ನು ಕಲಿಸಲಿಲ್ಲ ಹಾಗೂ ನಿನಗೂ ಅದನ್ನು ಕಲಿಸಿರಲಿಲ್ಲ. ಗಾಂಧೀಜಿಯವರ ೩ ಮಂಗಗಳನ್ನು ನೋಡುವವರಿಗೆ ‘ಔರ್ ಭೀ ಲಡೇಂಗೆ’ಯ ರೋಷ ಹೇಗೆ ತಿಳಿಯಬಹುದು ? ಇನ್ನೇನು ಬರೆಯಲಿ ?
– ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ತು. (೨೬.೧೧.೨೦೨೩)