ಹದಿಹರೆಯದ ಹುಡುಗ ಹುಡುಗಿಯರಿಗೆ ಸಂವಿಧಾನ ನೀಡಿರುವ ಹಕ್ಕುಗಳ ಉಲ್ಲಂಘನೆ ! – ಸರ್ವೋಚ್ಚ ನ್ಯಾಯಾಲಯ

ಅತ್ಯಾಚಾರ ಪ್ರಕರಣದಲ್ಲಿ ಕೊಲಕಾತಾ ಹೈಕೋರ್ಟ್ ಬಾಲಕಿಯರಿಗೆ ನೀಡಿದ ಸಲಹೆಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ !

ಕೋಲಕಾತಾ (ಬಂಗಾಳ) – ಅಕ್ಟೋಬರ್‌ನಲ್ಲಿ ನಡೆದ  ಪ್ರಕರಣದಲ್ಲಿ ಕೋಕಲಾತಾ ಹೈಕೋರ್ಟ್ ನೀಡಿದ ಸಲಹೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ‘ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಬಯಕೆಗಳನ್ನು ನಿಯಂತ್ರಿಸಬೇಕು. ಎರಡು ನಿಮಿಷಗಳ ಸಂತೋಷಕ್ಕೆ ಹೆಚ್ಚು ಗಮನ ನೀಡಬಾರದು ಮತ್ತು ಹುಡುಗರು ಹುಡುಗಿಯರ ಘನತೆಯನ್ನು ಗೌರವಿಸಬೇಕು’, ಎಂದು ಕೊಲಕಾತಾ ಹೈಕೋರ್ಟ್ ಟಿಪ್ಪಣೆ ನೀಡಿತ್ತು. ಹೈಕೋರ್ಟ್‌ನ ಈ ಹೇಳಿಕೆ ಖೇದಕರ ಮತ್ತು ಇದು ಸಂವಿಧಾನದ 21 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

1. ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಸಂತ್ರಸ್ತ ಬಾಲಕಿಗೆ ಮತ್ತು ಬಂಗಾಳ ಸರಕಾರಕ್ಕೆ ನೋಟಿಸ್ ಸಹ ಕಳುಹಿಸಿದೆ. ಈ ನೋಟಿಸ್‌ಗೆ ಜನವರಿ 4ರೊಳಗೆ ಉತ್ತರ ಕೇಳಲಾಗಿದೆ.

2. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ವೈಯಕ್ತಿಕ ಟಿಪ್ಪಣೆ ಮಾಡುವುದನ್ನು ತಾನು ನಿರ್ಬಂಧಿಸಿಕೊಳ್ಳಬೇಕು. ಇಂತಹ ಹೇಳಿಕೆಯು ಹದಿಹರೆಯದ ಹುಡುಗ ಹುಡುಗಿಯರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಈ ಸಂದರ್ಭದಲ್ಲಿ, ಆರೋಪಿಗಳನ್ನು ಖುಲಾಸೆಗೊಳಿಸಲು ಯಾವುದೇ ಯೋಗ್ಯ ಕಾರಣ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಂಪಾದಕರ ನಿಲುವು

* ‘ಹದಿಹರೆಯದ ಹೆಣ್ಣು ಲೈಂಗಿಕ ಪ್ರಚೋದನೆ ನಿಗ್ರಹಿಸಬೇಕು’, ಎಂದು ಕೋಲಕಾತಾ ಹೈಕೋರ್ಟ್ ಸಲಹೆ ನೀಡಿತ್ತು !

* ಯುವ ಪೀಳಿಗೆಯಲ್ಲಿ ನೈತಿಕ ಮೌಲ್ಯಗಳ ಸಂವರ್ಧನೆಗಾಗಿ ಸುಪ್ರೀಂ ಕೋರ್ಟ್ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಜನರಿಗೆ ಅನಿಸುತ್ತದೆ !