|
ಹುಬ್ಬಳ್ಳಿ – ಮುಸ್ಲಿಮರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಾನು ದೇಶದ ಆಸ್ತಿಯನ್ನು ಮುಸಲ್ಮಾನರಿಗೆ ಹಂಚುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಇಲ್ಲಿನ ಮುಸ್ಲಿಂ ಸಮಾವೇಶದಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿಯವರ ಈ ಹೇಳಿಕೆಗೆ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದೆ.
ಬಿಜೆಪಿ ಮುಖಂಡ ಅರ್. ಅಶೋಕ್ ಇವರು ಮಾತನಾಡಿ, ”ಮುಖ್ಯಮಂತ್ರಿಯವರ ಈ ಹೇಳಿಕೆ ರಾಜ್ಯ ಮತ್ತು ದೇಶಕ್ಕೆ ಯೋಗ್ಯವಲ್ಲ. ಇದಕ್ಕೂ ಮುನ್ನ ಟಿಪ್ಪು ಸುಲ್ತಾನ ಮೇಲೆ ಅತಿಯಾದ ಪ್ರೀತಿ ತೋರಿಸಿದಕ್ಕೆ ಏನಾಯಿತು ? ಹಿಂದೂಗಳನ್ನು ಅವರು (ಕಾಂಗ್ರೆಸ್ಸಿಗರು) ಎರಡನೇ (ಕೆಳವರ್ಗದ) ಪ್ರಜೆಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ತುಂಬಾ ಮತಾಂಧವಾಗಿದೆ. ಸಿದ್ದರಾಮಯ್ಯ ಇವರು ಕೂಡ ಒಬ್ಬ ಮತಾಂಧರಾಗಿದ್ದಾರೆ. ಮುಖ್ಯಮಂತ್ರಿಯವರು ‘ಅಲ್ಪಸಂಖ್ಯಾತರು’, ‘ಬಹುಸಂಖ್ಯಾತರು’ ಎಂದು ಹೇಳುವುದನ್ನು ಬಿಡಬೇಕು. ರಾಜಕೀಯ ಓಲೈಕೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಉತ್ತಮ ಆಡಳಿತ ನೀಡಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮೂಲಕ ಜನರ ಪರ ಕೆಲಸ ಮಾಡಿದರೆ ಎಲ್ಲ ಸಮುದಾಯಗಳಿಗೂ ಇಷ್ಟವಾಗುತ್ತದೆ. ಜನರಿಗೆ ಸರಿಯಾದ ಆರೋಗ್ಯ ಸೇವೆ ಸಿಗುತ್ತಿಲ್ಲ, ಸಾಕಷ್ಟು ವಿದ್ಯುತ್ ಸಿಗುತ್ತಿಲ್ಲ, ಆತ್ಮಹತ್ಯೆ ಮಾಡಿಕೊಂಡವರಿಗೆ ಸರಕಾರ ಸಹಾಯ ಮಾಡುತ್ತಿಲ್ಲ, ಪರಿಹಾರವನ್ನೂ ನೀಡುತ್ತಿಲ್ಲ.” ಎಂದು ಹೇಳಿದರು.