ವೆಸ್ಟ ಬ್ಯಾಂಕನ್ನು ಅಸ್ಥಿರಗೊಳಿಸುವ ಇಸ್ರೈಲಿಗಳ ವಿರುದ್ಧ ಅಮೆರಿಕಾದ ನೀತಿ !
ವಾಷಿಂಗ್ಟನ್ (ಅಮೇರಿಕಾ) – ಇಸ್ರೈಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾಗಿ ಎರಡು ತಿಂಗಳುಗಳು ಕಳೆದಿವೆ. ಇದುವರೆಗೆ ಇಸ್ರೈಲ್ ನಿಲುವನ್ನು ಬೆಂಬಲಿಸಿದ್ದ ಅಮೆರಿಕ ಇದೀಗ ಇಸ್ರೈಲ್ ವಿರುದ್ಧ ಕ್ರಮಕ್ಕೆ ಆದೇಶಿಸಿದೆ. ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಇವರು, ಇಸ್ರೈಲಿ ವೆಸ್ಟ್ ಬ್ಯಾಂಕ್ ಪ್ರದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವವರಿಗೆ ಅಮೇರಿಕಾದಲ್ಲಿ ‘ಉಚಿತ ವೀಸಾ’ ನಿರಾಕರಿಸಲಾಗುವುದು ಎಂದು ಹೇಳಿದ್ದಾರೆ. ಪ್ಯಾಲೇಸ್ಟೈನ್ ಜನರ ಮೇಲಿನ ದಾಳಿಯಿಂದಾಗಿ ಅಮೇರಿಕಾ ಈ ನಿಲುವನ್ನು ತೆಗೆದುಕೊಂಡಿತು. ಇದರ ಅಡಿಯಲ್ಲಿ, ಅಮೇರಿಕಾ ವೀಸಾ ಪಡೆದ ಇಸ್ರೈಲಿ ಕಟ್ಟರವಾದಿಗಳ ವೀಸಾಗಳನ್ನು ತೆಗೆದುಹಾಕಲಾಗುತ್ತದೆ.
ಆಂಥೋನಿ ಬ್ಲಿಂಕೆನ್ ಇವರು ಮಾತನ್ನು ಮುಂದುವರೆಸುತ್ತಾ, ನಮ್ಮ ಹೊಸ ನಿರ್ಬಂಧ ನೀತಿಯು ವೆಸ್ಟ ಬ್ಯಾಂಕಿನಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಕಟ್ಟರವಾದಿ ಯಹೂದಿಗಳ ವಿರುದ್ಧ ಇದೆ ಎಂದು ಹೇಳಿದರು.