ಶವವನ್ನು ರಷ್ಯಾದಲ್ಲಿ ಹೂಳಲಾಯಿತು !
ಕಠ್ಮಂಡು (ನೇಪಾಳ) – ರಷ್ಯಾದ ಸೇನೆಗೆ ನೇಮಕಗೊಂಡ ನೇಪಾಳದ ಆರು ಗೂರ್ಖಾ ಸೈನಿಕರ ಪೈಕಿ 6 ಸೈನಿಕರು ಉಕ್ರೇನ್ ಯುದ್ಧದಲ್ಲಿ ಹೋರಾಡಿ ಸಾವನ್ನಪ್ಪಿದ್ದಾರೆ. ಅವರ ಮೃತ ದೇಹಗಳನ್ನು ರಷ್ಯಾದಲ್ಲಿ ಹೂಳಲಾಗಿದೆ ಎಂದು ನೇಪಾಳ ಸರಕಾರ ಮಾಹಿತಿ ನೀಡಿದೆ. ನೇಪಾಳ ಸರಕಾರ ಈ ಯೋಧರ ಶವಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಿದೆ. ಪ್ರಸ್ತುತ, ರಷ್ಯಾದ ಸೈನ್ಯದಲ್ಲಿ 200 ಗೂರ್ಖಾ ಸೈನಿಕರನ್ನು ನೇಮಿಸಿಕೊಳ್ಳಲಾಗಿದೆ. ನೇಪಾಳ ಸರಕಾರ ಗೂರ್ಖಾ ಯುವಕರಿಗೆ ರಷ್ಯಾದ ಸೇನೆಗೆ ಸೇರಲು ಅವಕಾಶ ನೀಡದಿದ್ದರೂ ಈ ಯುವಕರು ಅಕ್ರಮವಾಗಿ ರಷ್ಯಾ ತಲುಪಿ ರಷ್ಯಾ ಸೇನೆ ಸೇರುತ್ತಿದ್ದಾರೆ.
ಸಂಪಾದಕರ ನಿಲುವು* ನೇಪಾಳದ ಹಿಂದೂ ಗೂರ್ಖಾಗಳು ರಷ್ಯಾದ ಸೈನ್ಯಕ್ಕೆ ಸೇರುವ ಮೂಲಕ ತಮ್ಮ ಪ್ರಾಣವನ್ನು ತ್ಯಾಗ ಮಾಡುವುದು ನೇಪಾಳ ಮತ್ತು ಭಾರತಕ್ಕೆ ಒಳ್ಳೆಯದಲ್ಲ. ಉಭಯ ದೇಶಗಳ ಸರಕಾರಗಳು ಭಾರತೀಯ ಸೇನೆಗೆ ಅವರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಬೇಕು ! |