ಪಾಕಿಸ್ತಾನದಲ್ಲಿ ಖಲಿಸ್ತಾನಿ ಭಯೋತ್ಪಾದಕ ಲಖಬೀರ ರೋಡೆ ಸಾವು

‘ಖಾಲಿಸ್ತಾನ್ ಲಿಬರೇಶನ್ ಫೋರ್ಸ್’ ಮುಖ್ಯಸ್ಥನಾಗಿದ್ದ ಅವನು ಜರ್ನೆಲ್ ಸಿಂಗ್ ಭಿಂದ್ರನ್‌ವಾಲೆಯ ಅಣ್ಣನ ಮಗನಾಗಿದ್ದ.

ಲಖಬೀರ ರೋಡೆ

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದಲ್ಲಿ ನಿಷೇಧಿಸಲಾಗಿರುವ ಖಲಿಸ್ತಾನ ಭಯೋತ್ಪಾದಕ ಸಂಘಟನೆಯಾದ ‘ಖಲಿಸ್ತಾನ ಲಿಬರೇಶನ್ ಫೋರ್ಸ್’ ಮತ್ತು ‘ಇಂಟರ್‌ನ್ಯಾಷನಲ್ ಸಿಖ್ ಯೂಥ ಫೆಡರೇಶನ್’ ನ ಮುಖ್ಯಸ್ಥ ಭಯೋತ್ಪಾದಕ ಲಖಬೀರ ಸಿಂಹ ರೋಡೆ(ವಯಸ್ಸು 72 ವರ್ಷಗಳು) ಪಾಕಿಸ್ತಾನದಲ್ಲಿ ಡಿಸೆಂಬರ್ 2 ರಂದು ಹೃದಯಾಘಾತದಿಂದ ನಿಧನ ಹೊಂದಿದನು. ರೋಡೆ ಖಲಿಸ್ತಾನಿ ಭಯೋತ್ಪಾದಕ ಜರ್ನೆಲ್ ಸಿಂಗ್ ಭಿಂದ್ರನ್ ವಾಲೆ ಅವರ ಅಣ್ಣನ ಮಗನಾಗಿದ್ದ. ಅಕಾಲ ತಖ್ತ್‌ನ ಮಾಜಿ ಜಥ್ಧೇದಾರ ಜಸಬೀರ ಸಿಂಹ ಇವರು ರೋಡೆ ಮರಣ ಹೊಂದಿದ್ದಾನೆಂದು ದೃಢಪಡಿಸಿದರು. ಡಿಸೆಂಬರ್ 4 ರಂದು ಪಂಜಾಬ್‌ನ ಮೋಗಾದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡವು ರೋಡೆಯ ಐದೂಕಾಲು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು.

1. ಲಖಬೀರ ಸಿಂಹ ರೋಡೆನನ್ನು ಭಾರತ ಸರಕಾರ ಭಯೋತ್ಪಾದಕ ಎಂದು ಘೋಷಿಸಿದ ಬಳಿಕ ಅವನು ಪಾಕಿಸ್ತಾನಕ್ಕೆ ಓಡಿ ಹೋಗಿದ್ದನು. 2021ರಲ್ಲಿ ಪಂಜಾಬ್‌ನ ಲೂಧಿಯಾನ ಕೋರ್ಟ್‌ನಲ್ಲಿ ನಡೆದ ಸ್ಫೋಟದಲ್ಲಿ ರೋಡೆಯ ಹೆಸರು ಬೆಳಕಿಗೆ ಬಂದಿತ್ತು. 1985 ರಲ್ಲಿ, ಏರ್ ಇಂಡಿಯಾದ ಕನಿಷ್ಕ ವಿಮಾನದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿಯೂ ರೋಡೆಯನ್ನು ಆರೋಪಿಯನ್ನಾಗಿ ಮಾಡಲಾಗಿತ್ತು.

2. ರೋಡೆ ಪಂಜಾಬಿನಲ್ಲಿ ‘ಸ್ಲೀಪರ್ ಸೆಲ್’ (ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯ ಗುಂಪು) ಸಿದ್ಧಪಡಿಸುತ್ತಿದ್ದನು. ಅವನು ಅಮೃತಸರದಲ್ಲಿ ಗಡಿಯಿಂದ ಗ್ರೆನೇಡ್ ಮತ್ತು ಬಾಂಬ್ ಗಳನ್ನು ಕೂಡ ಕಳುಹಿಸಿದ್ದನು. ರೋಡೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಸಹಾಯ ಮಾಡುತ್ತಿತ್ತು. ಭಯೋತ್ಪಾದಕರಿಂದಾ ಕೂಡ ರೋಡೆಯ ಸಂಪರ್ಕದಲ್ಲಿದ್ದನು.

3. ಈ ಸ್ಲೀಪರ್ ಸೆಲ್ ನಲ್ಲಿ 150ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಸ್ಲೀಪರ್ ಸೆಲ್‌ನಲ್ಲಿರುವ ಒಬ್ಬನೇ ಒಬ್ಬ ಸದಸ್ಯನು ಒಬ್ಬರನ್ನೊಬ್ಬರು ಗುರುತಿಸುವುದಿಲ್ಲ. ಸ್ಲೀಪರ್ ಸೆಲ್ ಸದಸ್ಯರ ಮೊಬೈಲ್ ಸಂಖ್ಯೆ ಕೂಡ ಯಾರ ಬಳಿಯೂ ಇಲ್ಲ. ಪಾಕಿಸ್ತಾನದಿಂದ ಪಂಜಾಬ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದಾಗ, 1 ಅಥವಾ 2 ಸ್ಲೀಪರ್ ಸೆಲ್ ಸದಸ್ಯರಿಗೆ ಇದು ತಿಳಿಯುತ್ತಿತ್ತು.