ಕೊಲೆಯ ಹೊಣೆ ಹೊತ್ತ ದರೋಡೆಕೋರ ರೋಹಿತ್ ಗೋದಾರಾ !
ಜೈಪುರ (ರಾಜಸ್ಥಾನ) – ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ ಸಿಂಗ್ ಗೊಗಮೇಡಿ ಅವರನ್ನು ಶ್ಯಾಮನಗರದ ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಸುಖದೇವ ಸಿಂಗ್ ಮೇಲೆ ಗುಂಡು ಹಾರಿಸಿದ ನಂತರ, ಸುಖದೇವ್ ಅವರ ಅಂಗರಕ್ಷಕರು ಸಹ ದಾಳಿಕೋರರ ಮೇಲೆ ಗುಂಡು ಹಾರಿಸಿದರು. ಇದರಲ್ಲಿ 1 ದಾಳಿಕೋರ ಸಾವನ್ನಪ್ಪಿದ, ಅಂಗರಕ್ಷಕ ಅಜಿತ ಸಿಂಗ್ ಗಾಯಗೊಂಡರು. ನಂತರ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಸ್ಕೂಟರ್‌ನೊಂದಿಗೆ ಪರಾರಿಯಾಗಿದ್ದಾರೆ. ಸುಖದೇವ್ ಸಿಂಗ್ ಅವರಿಗೆ 2 ಗುಂಡುಗಳು ತಗುಲಿವೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು; ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೊಲೆಯಾದ ಆರೋಪಿಯ ಹೆಸರು ನವೀನ ಶೇಖಾವತ್ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ರೋಹಿತ್ ಗೋದಾರ ಈ ಕೊಲೆಯ ಹೊಣೆಯನ್ನು ಒಪ್ಪಿಕೊಂಡಿದ್ದಾನೆ; ಆದರೆ ಕೊಲೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
#WATCH | Rajasthan | Sukhdev Singh Gogamedi, national president of Rashtriya Rajput Karni Sena, shot dead by unidentified bike-borne criminals in Jaipur. He was declared dead by doctors at the hospital where he was rushed to. Details awaited. pic.twitter.com/wGPU53SG2h
— ANI MP/CG/Rajasthan (@ANI_MP_CG_RJ) December 5, 2023
ದಾಳಿಕೋರರು ಮಧ್ಯಾಹ್ನ 1:30 ರ ಸುಮಾರಿಗೆ ಸುಖದೇವ್ ಸಿಂಗ್ ಅವರ ಮನೆಯ ಹೊರಗೆ ಬಂದಿದ್ದರು. ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ‘ಸುಖದೇವ್ ಸಿಂಗ್ ಅವರನ್ನು ಭೇಟಿಯಾಗಬೇಕು’ ಎಂದು ಹೇಳಿದರು. ಭದ್ರತಾ ಸಿಬ್ಬಂದಿ ಸುಖದೇವ ಸಿಂಗ್ ಅವರಿಗೆ ಹೇಳಿದಾಗ, ಈ 3 ಜನರನ್ನು ಬರಲಿ ಎಂದು ಕೇಳಿದರು. ಅವರು ಬಂದು ಸುಮಾರು 10 ನಿಮಿಷಗಳ ಕಾಲ ಅವರೊಂದಿಗೆ ಮಾತನಾಡಿದರು. ನಂತರ ಸುಖದೇವ ಸಿಂಗ್ ಮೇಲೆ ಗುಂಡು ಹಾರಿಸಿದರು. ಆ ವೇಳೆ ಸುಖದೇವ ಸಿಂಗ್ ರಕ್ಷಣೆಗೆ ಬಂದ ಭದ್ರತಾ ಸಿಬ್ಬಂದಿ ಮೇಲೂ ಗುಂಡು ಹಾರಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ದಾಳಿಕೋರರ ಮೇಲೆ ಗುಂಡು ಹಾರಿಸಿದ್ದಾರೆ. ಇದರಲ್ಲಿ ಓರ್ವ ದಾಳಿಕೋರ ಸಾವನ್ನಪ್ಪಿದ್ದು, ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೊಲೆಯಾದ ದುಷ್ಕರ್ಮಿಯ ಬಳಿ ಬೈಕ್‌ನ ಕೀ ಉಳಿದಿದ್ದರಿಂದ ಇತರ ಇಬ್ಬರು ದುಷ್ಕರ್ಮಿಗಳು ಸ್ಕೂಟಿ ಸವಾರ ಮಹಿಳೆಯನ್ನು ಅಡ್ಡಗಟ್ಟಿ ಆಕೆಯ ಸ್ಕೂಟಿ ಸಮೇತ ಪರಾರಿಯಾಗಿದ್ದಾರೆ. ಹತ್ಯೆಗೀಡಾದ ನವೀನಚಂದ್ ಶೇಖಾವತ್ ಬಟ್ಟೆ ಅಂಗಡಿ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುಂಡನ್ನು ಗುಂಡಿನಿಂದಲೇ ಉತ್ತರಿಸಬೇಕು ! – ಶಾಸಕ ಟಿ. ರಾಜ ಸಿಂಹ
ಸುಖದೇವ ಸಿಂಗ್ ಹತ್ಯೆಯ ಕುರಿತು ಭಾಗ್ಯನಗರದ ಬಿಜೆಪಿಯ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವಾಗ, ಗೋಹತ್ಯೆ ತಡೆಯಲು ಶ್ರಮಿಸುತ್ತಿರುವ ಸುಖದೇವ್ ಸಿಂಗ್ ಅವರನ್ನು ಯಾರು ಕೊಂದರು ? ಅವರ ಉದ್ದೇಶವೇನು ? ಅದನ್ನು ಶೋಧಿಸಬೇಕು. ನನ್ನ ಅಭಿಪ್ರಾಯದಲ್ಲಿ, ಈ ಅಪರಾಧಿಗಳ ಗುಂಡಿನಿಂದಲೇ ಉತ್ತರಿಸಬೇಕು ಎಂದು ಹೇಳಿದರು.
ಕೊಲೆ ಹಿಂದೆ ದೊಡ್ಡ ಗ್ಯಾಂಗ್ ಇರುವ ಸಾಧ್ಯತೆ ! – ಸೂರಜ್ ಪಾಲ್ ಅಮ್ಮು, ಮುಖ್ಯಸ್ಥ, ರಾಜಪೂತ ಕರಣಿ ಸೇನೆ
ರಾಜಪೂತ ಕರಣಿ ಸೇನೆಯ ಮುಖ್ಯಸ್ಥ ಸೂರಜ್ ಪಾಲ್ ಅಮ್ಮು ಇವರು, ಇದರ ಹಿಂದೆ ದೊಡ್ಡ ಗ್ಯಾಂಗ್ ಇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಭಾಗಿಯಾಗಿರುವ ಸಾಧ್ಯತೆಯೂ ಇದೆ. ರಾಜಕೀಯ ಕಾರಣದಿಂದ ಈ ಹತ್ಯೆಯಾಗಿದೆ. ಸುಖದೇವ್ ಸಿಂಗ್ ಅವರು ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಪೊಲೀಸ್ ರಕ್ಷಣೆಯನ್ನು ಕೋರಿದ್ದರು. ನಂತರ ಅವರಿಗೆ 2 ದಿನಗಳ ಕಾಲ ಭದ್ರತೆ ನೀಡಿ ನಂತರ ತೆಗೆದುಹಾಕಲಾಯಿತು. (ಕಾಂಗ್ರೆಸ್ ರಾಜ್ಯದಲ್ಲಿ ಇನ್ನೇನಾಗಬಹುದು ? ಈಗ ಅಧಿಕಾರಕ್ಕೆ ಬಂದ ಬಿಜೆಪಿ ರಾಜ್ಯದಲ್ಲಿ ಈ ಪರಿಸ್ಥಿತಿ ಬದಲಾಗಬಹುದು ಎಂದು ಹಿಂದೂಗಳು ನಿರೀಕ್ಷಿಸುತ್ತಾರೆ ! – ಸಂಪಾದಕರು)
ಪದ್ಮಾವತಿ ಚಲನಚಿತ್ರದ ವಿರುದ್ಧ ಸಂಜಯ ಲೀಲಾ ಬನ್ಸಾಲಿಯ ಕೆನ್ನೆಗೆ ಬಾರಿಸಿದ್ದರು !
ಲೋಕೇಂದ್ರ ಸಿಂಗ್ ಕಲ್ವಿ ಅವರು ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು 2012 ರಲ್ಲಿ ರಜಪೂತ ಕರಣಿ ಸೇನೆಯ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಗೊಗಮೇಡಿ ಇವರು ಬಹುಜನ ಸಮಾಜ ಪಕ್ಷದಿಂದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಲ್ವಿ ಅವರೊಂದಿಗಿನ ವಿವಾದದ ನಂತರ, ಗೊಗಮೇಡಿ ಅವರು ‘ರಾಷ್ಟ್ರೀಯ ಶ್ರೀ ರಜಪೂತ ಕರಣಿ ಸೇನಾ’ ಎಂಬ ಸ್ವತಂತ್ರ ಸಂಘಟನೆಯನ್ನು ಸ್ಥಾಪಿಸಿದರು. 2018 ರಲ್ಲಿ, ಸುಖದೇವ ಸಿಂಗ್ ಬಿಜೆಪಿಯಿಂದ ಚುನಾವಣಾ ಟಿಕೆಟ್ ಕೇಳಿದರು; ಆದರೆ ಅವರಿಗೆ ಟಿಕೆಟ್ ಸಿಗಲಿಲ್ಲ. ಸುಖದೇವ ಸಿಂಗ್ ಇವರು ‘ಪದ್ಮಾವತಿ’ ಚಲನಚಿತ್ರದ ಶೂಟಿಂಗ್ ವೇಳೆ ಖ್ಯಾತ ಚಿತ್ರ ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಅವರಿಗೆ ಕೆನ್ನೆಗೆ ಬಾರಿಸಿದ್ದರು. ಅವರು ‘ಪದ್ಮಾವತಿ’ ಚಲನಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಂತಿಮವಾಗಿ ನಿರ್ಮಾಪಕರು ಚಿತ್ರದ ಹೆಸರನ್ನು ‘ಪದ್ಮಾವತ್’ ಎಂದು ಬದಲಾಯಿಸಿದ್ದರು.
ಸಂಪಾದಕೀಯ ನಿಲುವುಕಾಂಗ್ರೆಸ್ ರಾಜ್ಯದಲ್ಲಿ ರಾಜಸ್ಥಾನವು ‘ಪಾಕಿಸ್ತಾನ’ವಾಗಿತ್ತು. ಈ ಪರಿಸ್ಥಿತಿಯನ್ನು ಬದಲಾಯಿಸುವುದು ಬಿಜೆಪಿಗೆ ಅಗತ್ಯವಾಗಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ ! |