Houthi Israel : ಕೆಂಪು ಸಮುದ್ರದಲ್ಲಿ ಇಸ್ರೇಲಿ ಹಡಗುಗಳ ಮೇಲೆ ಹುತಿ ಭಯೋತ್ಪಾದಕರಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ

ತೆಲ್ ಅವಿವ (ಇಸ್ರೇಲ್) – ಡಿಸೆಂಬರ್ 3 ರಂದು ಯೆಮೆನ್‌ನ ಹುತಿ ಭಯೋತ್ಪಾದಕರು ಕೆಂಪು ಸಮುದ್ರದಲ್ಲಿ 3 ಹಡಗುಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿದರು. ಈ ಪೈಕಿ 2 ನೌಕೆಗಳು ಇಸ್ರೇಲ್‌ನಿಂದ ಬಂದಿವೆ ಎನ್ನಲಾಗಿದೆ. ಈ ಬಗ್ಗೆ ಅಮೇರಿಕಾವು, ಕೆಂಪು ಸಮುದ್ರದಲ್ಲಿ ನಮ್ಮ ಯುದ್ಧನೌಕೆಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದ 3 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿದೆ. ಕಳೆದ ತಿಂಗಳು ಹುತಿ ಭಯೋತ್ಪಾದಕರು ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ನೌಕೆಯನ್ನು ಅಪಹರಿಸಿದ್ದರು.

ದಕ್ಷಿಣ ಗಾಜಾಕ್ಕೆ ಇಸ್ರೇಲ್ ಸೇನೆಯ ಮುನ್ನಡೆ !

ಉತ್ತರ ಗಾಜಾದಲ್ಲಿ ಮಿಲಿಟರಿ ಕಾರ್ಯಾಚರಣೆಗಳ ನಂತರ, ಇಸ್ರೇಲಿ ಪಡೆಗಳು ಈಗ ದಕ್ಷಿಣ ಗಾಜಾದ ಕಡೆಗೆ ಮುನ್ನಡೆಯುತ್ತಿವೆ. ಇದಕ್ಕಾಗಿ ಅಲ್ಲಿನ ಜನರನ್ನು ಹಲವು ಪ್ರದೇಶಗಳಲ್ಲಿ ಸ್ಥಳಾಂತರಿಸುವಂತೆ ಕೋರಲಾಗಿದೆ. ಇಸ್ರೇಲ್‌ನ ದೇಶೀಯ ಗುಪ್ತಚರ ಸಂಸ್ಥೆ, ‘ರೋನೆನ್ ಬಾರ್’ ಹೇಳಿಕೆ ಪ್ರಕಾರ, ಲೆಬನಾನ್ ಮತ್ತು ಟರ್ಕಿಯಿಂದ ಕತಾರ್‌ವರೆಗೆ ಹಮಾಸ್ ಅನ್ನು ಪತ್ತೆಹಚ್ಚುವುದಾಗಿ ಹೇಳಿದೆ. ಅದಕ್ಕಾಗಿ ಅದು ಎಷ್ಟು ವರ್ಷಗಳಾದರೂ ಪರವಾಗಿಲ್ಲ, ಕೆಲಸ ಮಾಡುವುದು ಎಂದಿದೆ.

ಲೆಬನಾನ್‌ನಿಂದ ಇಸ್ರೇಲಿ ನಗರಗಳ ಮೇಲೆ ದಾಳಿಗಳು ಹೆಚ್ಚಿವೆ. ಈಗ ಅಲ್ಲಿಂದಲೇ ಟ್ಯಾಂಕ್ ವಿರೋಧಿ ಕ್ಷಿಪಣಿಗಳನ್ನು ಹಾರಿಸಲಾಗುತ್ತಿದೆ. ಇದರಲ್ಲಿ ಕೆಲವು ಇಸ್ರೇಲ್ ಸೈನಿಕರು ಗಾಯಗೊಂಡಿದ್ದಾರೆ.