ಈಶ್ವರಪ್ರಾಪ್ತಿಯ ಸಂದರ್ಭದಲ್ಲಿ ಮಾನವನ ಲಜ್ಜಾಸ್ಪದ ಉದಾಸೀನತೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಧನಪ್ರಾಪ್ತಿ, ವಿವಾಹ, ಅನಾರೋಗ್ಯ ಇತ್ಯಾದಿ ಅನೇಕ ಕಾರಣಗಳಿಗಾಗಿ ಅನೇಕ ಜನರು ಉಪಾಯವನ್ನು ಕೇಳುತ್ತಾರೆ; ಆದರೆ ಈಶ್ವರಪ್ರಾಪ್ತಿಗಾಗಿ ಉಪಾಯ ಕೇಳುವ ಬಗ್ಗೆ ಯಾರೂ ವಿಚಾರವನ್ನೂ ಮಾಡುವುದಿಲ್ಲ.’

ಸ್ವಾರ್ಥಿ ಮಾನವ !

‘ಪೃಥ್ವಿಯ ಮೇಲೆ ಎಲ್ಲಾ ಪ್ರಾಣಿಗಳು ಬೇರೆಯವರಿಗಾಗಿ ಬದುಕುತ್ತವೆ. ಪಶು-ಪಕ್ಷಿ, ವನಸ್ಪತಿ ಬೇರೆಯವರಿಗೆ ಏನಾದರೂ ನೀಡುತ್ತಿರುತ್ತದೆ. ತನಗಾಗಿ ಬದುಕುವ ಏಕೈಕ ಪ್ರಾಣಿಯೆಂದರೆ ಮಾನವ. ಅವನು ಪ್ರಕೃತಿ, ಪ್ರಾಣಿ ಮತ್ತು ವನಸ್ಪತಿಗಳಿಂದ ನಿರಂತರವಾಗಿ ಏನಾದರೂ ಪಡೆಯುತ್ತಿರುತ್ತಾನೆ. ಮಾನವನ ಸ್ವಾರ್ಥದಿಂದಲೇ ಅವನು ಇತರ ಪ್ರಾಣಿಗಳ ತುಲನೆಯಲ್ಲಿ ಹೆಚ್ಚು ದುಃಖಿಯಾಗಿರುತ್ತಾನೆ.’

‘ಹಿಂದೂಗಳಿಗೆ ಸಾಧನೆ ಕಲಿಸುವುದು ಅನಿವಾರ್ಯ !

‘ಜಗತ್ತಿನ ಸರ್ವಶ್ರೇಷ್ಠ ಹಿಂದೂ ಧರ್ಮದಲ್ಲಿ ಜನಿಸಿದರೂ ಧರ್ಮಕ್ಕಾಗಿ ಏನೂ ಮಾಡದ ಹಿಂದೂಗಳು ಸಾಯಲು ಯೋಗ್ಯರಾಗಿದ್ದಾರೆ ಅಥವಾ ಬದುಕಲು ಯೋಗ್ಯರಲ್ಲ’, ಹೀಗೆಂದು ಕೆಲವು ಜನರಿಗೆ ಅನಿಸುತ್ತದೆ; ಆದರೆ ಅದು ಸರಿಯಲ್ಲ.’ ಅವರಿಗೆ ಸಾಧನೆ ಕಲಿಸುವುದು ಹಿಂದೂಗಳ ಕರ್ತವ್ಯವಾಗಿದೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ