ಸುಳ್ಳು ಅಥವಾ ಸೇಡು ತೀರಿಸಿಕೊಳ್ಳಲು ಬಲಾತ್ಕಾರಗಳ ದೂರುಗಳಲ್ಲಿ ಏರಿಕೆ; ಸಂತ್ರಸ್ಥೆಯ ಹೇಳಿಕೆಯು ಮುಖ್ಯ ಸಾಕ್ಷಿ ಆಗದು ! – ಕೊಲಕಾತಾ ಉಚ್ಚ ನ್ಯಾಯಾಲಯ

ಕೋಲಕಾತಾ (ಬಂಗಾಳ) – ಬಲಾತ್ಕಾರದ ಪ್ರಕರಣದಲ್ಲಿ, ಸಂತ್ರಸ್ತ ಮಹಿಳೆಯ ಹೇಳಿಕೆಯು ಪ್ರಮುಖ ಸಾಕ್ಷಿಯಾಗಲು ಸಾಧ್ಯವಿಲ್ಲ; ಏಕೆಂದರೆ ಸಂತ್ರಸ್ತೆ ಸುಳ್ಳು ಅಥವಾ ಅತ್ಯಾಚಾರದ ಸೇಡನ್ನು ತೀರಿಸಿಕೊಳ್ಳುವ ಉದ್ದೇಶದಿಂದ ಬಲಾತ್ಕಾರವಾಗಿದೆಯೆಂದು ದೂರು ದಾಖಲಿಸಿರುವ ಹಲವಾರು ಪ್ರಕರಣಗಳಿವೆ ಎಂದು ಕೋಲಕಾತಾ ಉಚ್ಚ ನ್ಯಾಯಾಲಯವು ಒಂದು ಪ್ರಕರಣದ ಆಲಿಕೆಯ ಸಂದರ್ಭದಲ್ಲಿ ಹೇಳಿದೆ. ಈ ಪ್ರಕರಣದಲ್ಲಿ ಬಲಾತ್ಕಾರದ ಪ್ರಕರಣದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವ ಆರೋಪಿಗೆ ಶಿಕ್ಷೆಯನ್ನು ಪ್ರಶ್ನಿಸಲು ಸಹ ನ್ಯಾಯಾಲಯ ಅನುಮತಿಸಿದೆ.