ಬರುವ ೧೫ ದಿನದಲ್ಲಿ ಅಂಗಡಿಯಿಂದ ಹಲಾಲ್ ಉತ್ಪಾದನೆಗಳು ಹಿಂಪಡೆಯಿರಿ !- ಉತ್ತರಪ್ರದೇಶ ಸರಕಾರ

ಉತ್ತರಪ್ರದೇಶ ಸರಕಾರದಿಂದ ೯೨ ಕಂಪನಿಗಳಿಗೆ ಆದೇಶ !

ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಹಲಾಲ್ ಉತ್ಪಾದನೆಗಳನ್ನು ತೆಗೆಯುವಂತೆ ಆದೇಶ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಸರಕಾರವು ಹಲಾಲ್ ಉತ್ಪಾದನೆ ಮತ್ತು ಅದಕ್ಕೆ ನೀಡಲಾಗುವ ಪ್ರಮಾಣಪತ್ರ ಇದರ ಮೇಲೆ ನಿಷೇಧ ಹೇರಿದ ನಂತರ ೧೫ ದಿನಗಳಲ್ಲಿ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳಗೆ ಹಲಾಲ್ ಉತ್ಪಾದನೆ ತೆಗೆಯುವಂತೆ ಆದೇಶ ನೀಡಿದ್ದಾರೆ. ಹಾಗೂ ಹಲಾಲ್ ಪ್ರಮಾಣ ಪತ್ರ ಪಡೆದು ವಸ್ತುಗಳ ಮಾರಾಟ ಮಾಡುವ ೯೨ ಕಂಪನಿಗಳಿಗೆ ‘ಅವರು ಅಂಗಡಿಗಳಿಗೆ ಮಾರಿರುವ ಉತ್ಪಾದನೆ ಹಿಂಪಡೆದು ಅದರ ಮೇಲೆ ಹಲಾಲ್ ಪ್ರಮಾಣ ಪತ್ರದ ಉಲ್ಲೇಖ ಇಲ್ಲದಿರುವ ಕವರನಲ್ಲಿ ಅದು ಮತ್ತೆ ಮಾಡಬೇಕು’, ಎಂದು ಸೂಚನೆ ನೀಡಿದ್ದಾರೆ.

ಉತ್ತರಪ್ರದೇಶದಲ್ಲಿ ಇಲ್ಲಿಯವರೆಗೆ ೩ ಸಾವಿರ ಕಿಲೋ ಉತ್ಪಾದನೆ ವಶ

ಈ ಹಿಂದೆ ರಾಜ್ಯದ ಆಹಾರ ಸುರಕ್ಷಾ ಮತ್ತು ಔಷಧ ಆಡಳಿತದಿಂದ ಹಲಾಲ್ ಉತ್ಪಾದನೆಯಲ್ಲಿ ಕಲಬೇರೆಕೆ ಇರುವ ಸಾಧ್ಯತೆ ಪರಿಶೀಲಿಸುತ್ತಾ ಸ್ಯಾಂಪಲ್ ಗಳನ್ನು ಪರಿಶೀಲನೆಗಾಗಿ ಪ್ರಯೋಗ ಶಾಲೆಗೆ ಕಳುಹಿಸಲಾಗಿದೆ. ಈ ವಿಭಾಗದ ಅಧಿಕಾರಿ ಅನಿತಾ ಸಿಂಹ ಇವರು, ಇಲ್ಲಿಯವರೆಗೆ ರಾಜ್ಯದಲ್ಲಿ ೯೨ ಜಾಗದಲ್ಲಿ ದಾಳಿ ನಡೆಸಿ ೫೦೦ ಜಾಗಗಳ ಪರಿಶೀಲನೆ ಮಾಡಲಾಗಿದೆ. ಇದರ ಮೂಲಕ ಅಂದಾಜು ೩ ಸಾವಿರ ಕಿಲೋ ಉತ್ಪಾದನೆ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ೭-೮ ಲಕ್ಷ ರೂಪಾಯಿ ಇದೆ. ಇದರಲ್ಲಿ ಸಕ್ಕರೆ, ಎಣ್ಣೆ ಮತ್ತು ಬೇಕರಿ ಉತ್ಪಾದನೆಗಳ ಸಮಾವೇಶವಿದೆ. ಹಾಗೂ ೮೧ ಸ್ಯಾಂಪಲ್ ಗಳು ಪ್ರಯೋಗ ಶಾಲೆಗೆ ಪರಿಕ್ಷೆಗಾಗಿ ಕಳುಹಿಸಲಾಗಿದೆ.

ಸಂಪೂರ್ಣ ದೇಶದಲ್ಲಿ ಹಲಾಲ್ ಪ್ರಮಾಣಪತ್ರ ನೀಡುವ ೭೦೦ ನಿಂದ ೮೦೦ ಕಾನೂನುಬಾಹಿರ ಸಂಸ್ಥೆಗಳು !

ಈ ರೀತಿ ಸರಕಾರದಿಂದ ಅನುಮತಿ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಲಾಲ್ ಪ್ರಮಾಣಪತ್ರ ನೀಡುವ ಸಂಸ್ಥೆ ಕಾರ್ಯನಿರತವಾಗಿರುವಾಗ ರಾಜ್ಯ ಮತ್ತು ಕೇಂದ್ರ ಸರಕಾರ ನಿದ್ರಿಸುತ್ತಿತ್ತೆ ?

ಹಲಾಲ್ ಮಾಂಸದ ಬಗ್ಗೆ ಅಧಿಕಾರಿ ಅನಿತಾ ಸಿಂಹ ಇವರು, ಅದಕ್ಕೆ ಸಂಬಂಧಿಸಿದ ಉತ್ಪಾದನೆಗೆ ಪ್ರಮಾಣಪತ್ರ ನೀಡುವುದಕ್ಕಾಗಿ ದೇಶಾದ್ಯಂತ ಕೇವಲ ೩ ಅಧಿಕೃತ ಕಂಪನಿಗಳು ಇವೆ. ಇದರಲ್ಲಿನ ಒಂದು ಲಕ್ಷ್ಮಣಪುರಿಯಲ್ಲಿದೆ. ಈಗ ಸಂಪೂರ್ಣ ದೇಶದಲ್ಲಿ ೭೦೦ ರಿಂದ ೮೦೦ ಸಂಸ್ಥೆಗಳು ಹಲಾಲ್ ಪ್ರಮಾಣ ಪತ್ರ ನೀಡುತ್ತವೆ. ಈ ಎಲ್ಲಾ ಸಂಸ್ಥೆಗಳ ಮೇಲೆ ಉತ್ತರ ಪ್ರದೇಶದಲ್ಲಿ ನಿಷೇಧ ಹೇರಲಾಗಿದೆ ಎಂದು ಹೇಳಿದರು.

ಸಂಪಾದಕರ ನಿಲುವು

* ದೇಶ ವಿರೋಧಿ ಮತ್ತು ಹಿಂದೂ ಧರ್ಮ ವಿರೋಧಿ ವಿಷಯಗಳು ಮೇಲೆ ಕ್ರಮ ಕೈಗೊಳ್ಳುವುದು ಮತ್ತು ಅದನ್ನು ಬೇರು ಸಹಿತ ಹೇಗೆ ನಾಶ ಮಾಡುವುದು, ಇದನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಇವರ ಸರಕಾರವು ಈ ಪ್ರಕರಣದಿಂದ ಹಿಂದುಗಳ ಎದುರು ಆದರ್ಶ ಇಟ್ಟಿದ್ದಾರೆ. ಇಂತಹ ಆಡಳಿತಗಾರರ ಆವಶ್ಯಕತೆ ಹಿಂದುಗಳಿಗೆ ಇದೆ, ಹೀಗೆ ಹಿಂದುಗಳಿಗೆ ಅನಿಸಿದರೆ ತಪ್ಪಾಗಲಾರದು ?