ಲಕ್ಷ್ಮಣಪುರಿ (ಉತ್ತರಪ್ರದೇಶ) – ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ವಿರುದ್ಧ ಉತ್ತರಪ್ರದೇಶದ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಸೀದಿಗಳ ಮೇಲಿರುವ ಧ್ವನಿವರ್ಧಕಗಳ ಮೇಲೆ ಕ್ರಮ ಜರುಗಿಸಲಾಗಿದೆ. ನಿಯಮಕ್ಕಿಂತಲೂ ಹೆಚ್ಚಿನ ಧ್ವನಿ ಇಡುವುದು, ಅನುಮತಿ ಇಲ್ಲದೆ ಧ್ವನಿವರ್ಧಕ ಅಳವಡಿಸುವುದು ಮುಂತಾದ ನಿಯಮಗಳ ಉಲ್ಲಂಘನೆಗಳು ಬೆಳಕಿಗೆ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ನೂರಾರು ಧ್ವನಿವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ.
उ0प्र0 शासन द्वारा निर्गत निर्देशन के क्रम में धार्मिक स्थलों/ सार्वजनिक स्थानों पर लगे अवैध लाउडस्पीकर/ ध्वनि विस्तारक यंत्रों के विरुद्ध PS आसपुर देवसरा पुलिस द्वारा क्षेत्रान्तर्गत स्थित धार्मिक स्थलों पर लगे मानकों एवं अनुमन्य ध्वनि सीमा से अधिक लाउडस्पीकर उतरवाए गए । pic.twitter.com/WIttaiUYln
— PRATAPGARH POLICE (@pratapgarhpol) November 27, 2023
೧. ಕಾರ್ಯಾಚರಣೆಯನ್ನು ನವೆಂಬರ್ ೨೭ ರ ಬೆಳಗಿನ ಜಾವ ೫ ರಿಂದ ಆರಂಭಿಸಲಾಗಿದೆ. ಲಕ್ಷ್ಮಣಪುರಿಯ ತಕಿಯವಾಲಿ ಮಸೀದಿ ಸಹಿತ ಅನೇಕ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿದ ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಇದೇ ರೀತಿ ಕಾನಪುರ, ಹಮೀರಪುರ, ಚಿತ್ರಕೂಟ, ಅಯೋಧ್ಯೆ ಮುಂತಾದ ಜಿಲ್ಲೆಗಳಲ್ಲಿ ಕೂಡ ಕಾರ್ಯಾಚರಣೆ ನಡೆಸಲಾಗಿದೆ. ಈ ಕ್ರಮ ಕೈಗೊಳ್ಳುವ ಸಮಯದಲ್ಲಿ ಸ್ಥಳಿಯ ನ್ಯಾಯದಂಡಾಧಿಕಾರಿ ಕೂಡ ಉಪಸ್ಥಿತರಿದ್ದರು.
೨. ಪ್ರತಾಪಗಡ ಜಿಲ್ಲೆಯ ೩೫೦ ಮಸೀದಿಗಳ ಮೇಲಿನ ಕಾನೂನಬಾಹಿರವಾಗಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿತ್ತು. ಇದರಿಂದ ಪೊಲೀಸರು ಸಂಬಂಧಿತರ ಮೇಲೆ ದೂರು ದಾಖಲಿಸಿದ್ದರು. ಕೌಶಂಬಿ ಜಿಲ್ಲೆಯ ೨೦೩ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ತೆರೆವುಗೊಳಿಸಲಾಗಿದೆ. ಕೆಲವು ಮಸೀದಿಗಳಲ್ಲಿ ವಿದ್ಯುತ್ ಕಳ್ಳತನ ಮಾಡಲಾಗಿರುವುದು ಕೂಡ ಈ ಸಮಯದಲ್ಲಿ ಬೆಳಕಿಗೆ ಬಂದಿದೆ. ಫಾರುಖಾಬಾದ ಜಿಲ್ಲೆಯಲ್ಲಿ ೪೬ ಸ್ಥಳಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ ಲಲಿತಪುರ, ಕನ್ನೌಜ, ಫತೆಹಪುರ, ಮತ್ತು ಔರೆಯಾ ಜಿಲ್ಲೆಗಳಲ್ಲಿ ಕೂಡ ಕ್ರಮ ಕೈಗೊಳ್ಳಲಾಗಿದೆ.
೩. ಕೆಲವು ಜಿಲ್ಲೆಗಳಲ್ಲಿ ಪೊಲೀಸ ಅಧೀಕ್ಷಕರು ಮುಸಲ್ಮಾನ ಧಾರ್ಮಿಕ ನಾಯಕರ ಜೊತೆಗೆ ಬೈಠಕ್ ನಡೆಸಿದರು. ಇದರಲ್ಲಿ ಅವರಿಗೆ ಸರಕಾರದ ನಿಯಮದ ಪಾಲನೆ ಮಾಡುವ ಸಲಹೆಯನ್ನು ನೀಡಲಾಯಿತು. ಮಸೀದಿ ಹಾಗೆ ಕೆಲವು ದೇವಸ್ಥಾನಗಳು ಮತ್ತು ಮಠಗಳಲ್ಲಿ ನಿಯಮವನ್ನು ಉಲ್ಲಂಘಿಸಿರುವ ಧ್ವನಿವರ್ಧಕಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಸಂಪಾದಕೀಯ ನಿಲುವುಉತ್ತರಪ್ರದೇಶದ ಪೊಲೀಸರು ಹೀಗೆ ಮಾಡಬಹುದು ಎಂದಾದರೆ ದೇಶದ ಇತರ ರಾಜ್ಯಗಳ ಪೊಲೀಸರು ಏಕೆ ಮಾಡುತ್ತಿಲ್ಲ? ಅವರು ಮುಸಲ್ಮಾನರಿಗೆ ಹೆದರುತ್ತಾರೆಯೇ? ಅಥವಾ ಮುಸಲ್ಮಾನರನ್ನು ಓಲೈಸುವ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಅವರಿಗೆ ಹೀಗೆ ಮಾಡಲು ಬಿಡುವುದಿಲ್ಲವೇ? |