ನ್ಯೂಯಾರ್ಕ್ (ಅಮೇರಿಕಾ) ಇಲ್ಲಿಯ ಗುರುದ್ವಾರದಲ್ಲಿ ಭಾರತದ ರಾಯಭಾರಿ ಸಂಧು ಇವರ ಮೇಲೆ ಹಲ್ಲೆ ಮಾಡುವ ಪ್ರಯತ್ನ!

ನಿಜ್ಜರ ಹತ್ಯೆಯಲ್ಲಿ ಸಂಧು ಇವರ ಕೈವಾಡವಿದೆ ಎಂದು ಆರೋಪ!

ನ್ಯೂಯಾರ್ಕ್ (ಅಮೇರಿಕಾ) – ಇಲ್ಲಿನ ಗುರುನಾನಕ ಜಯಂತಿಯಂದು ಗುರುದ್ವಾರಕ್ಕೆ ತೆರಳಿದ್ದ ಭಾರತದ ರಾಯಭಾರಿ ತರನಜಿತ್ ಸಿಂಗಹ ಸಂಧು ಅವರ ಮೇಲೆ ಹಲ್ಲೆ ನಡೆಸಲು ಖಲಿಸ್ತಾನಿಸ್ಟ್ ಸಿಖ್ಖರು ಪ್ರಯತ್ನಿಸಿದರು; ಆದರೆ ಇತರ ಸಿಖ್ಖರು ಇದನ್ನು ವಿರೋಧಿಸಿ ಮತ್ತು ಸಂಧು ರವರನ್ನು ರಕ್ಷಿಸಿದರು. ಸಿಖ್ ಫಾರ್ ಜಸ್ಟಿಸ್ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವರು ಖಲಿಸ್ತಾನಿಗಳನ್ನು ಇದಕ್ಕಾಗಿ ಪ್ರಚೋದಿಸಿದ್ದರು.

ಭಾರತೀಯ ರಾಯಭಾರಿ ತರನಜಿತ ಸಿಂಗ ಸಂಧು ಗುರುದ್ವಾರಕ್ಕೆ ಆಗಮಿಸಿದ ನಂತರ, ಖಲಿಸ್ತಾನಿಗಳು ಹರದೀಪಸಿಂಹ ನಿಜ್ಜರ್ ಹತ್ಯೆಯ ಬಗ್ಗೆ ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಅವರು ನಿಜ್ಜರ ಹತ್ಯೆಯಲ್ಲಿ ಸಂಧು ಅವರ ಕೈವಾಡವಿದೆಯೆಂದು ಎಂದು ಆರೋಪಿಸಿ ಸಂಧುವನ್ನು ಥಳಿಸಲು ಪ್ರಯತ್ನಿಸಿದರು. ಅದೇ ಸಮಯದಲ್ಲಿ, ಇತರ ಸಿಖ್ಖರು ಸಂಧುವನ್ನು ರಕ್ಷಿಸಿದರು. ಇದಾದ ನಂತರ, ಸಂಧು ಅವರು ಉಪಸ್ಥಿತರಿದ್ದ ಸಿಖ್ಖರಿಗೆ ಮಾರ್ಗದರ್ಶನ ನೀಡಿದರು. ಅವರು ಮಾತನಾಡುತ್ತಾ, ಭಾರತ ಸರಕಾರ ಯಾವಾಗಲೂ ಸಿಖ್ಖರ ಬೆನ್ನಿಗೆ ನಿಂತಿದೆ ಎಂದರು. ಭಾರತವು ಅಫ್ಘಾನಿಸ್ತಾನದಿಂದ ಸಿಖ್ಖರನ್ನು ಸುರಕ್ಷಿತವಾಗಿ ಹೊರ ತೆಗೆಯಿತು. ವಿದೇಶದಲ್ಲಿ ನೆಲೆಸಿರುವ ಸಿಖ್ಖರೊಂದಿಗಿನ ಭಾರತದ ಸಂಬಂಧ ಎಂದಿಗೂ ಮುರಿಯುವುದಿಲ್ಲ ಎಂದು ಹೇಳಿದರು.

ಸಂಪಾದಕರ ನಿಲುವು

* ಇತರರಿಗೆ ಉಚಿತ ಸಲಹೆಯನ್ನು ನೀಡುವ ಅಮೇರಿಕೆಯ ಭದ್ರತಾ ವ್ಯವಸ್ಥೆಯು ಎಷ್ಟು ಪೊಳ್ಳಾಗಿದೆ ಎಂಬುದು ಈ ಘಟನೆಯಿಂದ ಕಂಡು ಬರುತ್ತದೆ. ಇದಕ್ಕೆ ಭಾರತ ಸರಕಾರ ಅಮೇರಿಕ ಸರಕಾರವನ್ನು ಪ್ರಶ್ನಿಸಬೇಕು!