ನಾವು ಯಾವಾಗಲೂ ಇಸ್ರೇಲ್ ದಾಳಿಯನ್ನು ವಿರೋಧಿಸಿದ್ದೇವೆ ! – ಕಾಂಗ್ರೆಸ್

ಕೇರಳದಲ್ಲಿ ಪ್ಯಾಲೆಸ್ಟೈನ ಬೆಂಬಲಿಸಿ ಕಾಂಗ್ರೆಸ್ ನಿಂದ ಮೆರವಣಿಗೆ

ಕೋಝಿಕೋಡ್ (ಕೇರಳ) – ನವೆಂಬರ್ 23 ರಂದು ಕೇರಳದಲ್ಲಿ ಕಾಂಗ್ರೆಸ್ ಪಕ್ಷವು ಪ್ಯಾಲೆಸ್ಟೈನ್ಅನ್ನು ಬೆಂಬಲಿಸಿ ಮೆರವಣಿಗೆಯನ್ನು ನಡೆಸಿತು. ಇದರಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಸಂಸದ ಕೆ.ಸಿ. ವೇಣುಗೋಪಾಲ್ ಮತ್ತು ಶಶಿ ಥರೂರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೇಣುಗೋಪಾಲ್ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಸರಕಾರ ಇಸ್ರೇಲ್ ದಾಳಿಯನ್ನು ಯಾವಾಗಲೂ ವಿರೋಧಿಸುತ್ತಲೇ ಬಂದಿದೆ. ಪ್ಯಾಲೆಸ್ಟೈನ್ ಭೂಮಿಗಾಗಿ ಅವರ ಹೋರಾಟವನ್ನು ನಾವು ಯಾವಾಗಲೂ ಬೆಂಬಲಿಸಿದ್ದೇವೆ; ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಸರಕಾರ ತನ್ನ ನಿಲುವು ಬದಲಿಸಿದೆ ಎಂದು ಹೇಳಿದರು.

ಕೆ.ಸಿ. ವೇಣುಗೋಪಾಲ್ ತಮ್ಮ ಮಾತನ್ನು ಮುಂದುವರಿಸಿ,

1. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ವಿಶ್ವಸಂಸ್ಥೆಯಲ್ಲಿ ವಿವಿಧ ದೇಶಗಳು ಠರಾವನ್ನು ಮಂಡಿಸಿತ್ತು. ಈ ಠರಾವಿನ ಮತದಾನದ ವೇಳೆ ಭಾರತ ಗೈರುಹಾಜರಾಗಿತ್ತು. ಇದು ಅಯೋಗ್ಯವಾಗಿತ್ತು. ಕೇಂದ್ರ ಸರಕಾರದ ಈ ನಿರ್ಧಾರ ದೇಶದ ಜನತೆಗೆ ಅವಮಾನವಾಗಿದೆ.

2. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಂದೇ ರೀತಿಯಾಗಿದ್ದಾರೆ. ಚುನಾವಣೆ ಗೆಲ್ಲಲು ಭಾಜಪ ತನ್ನ ವಿದೇಶಾಂಗ ನೀತಿಯನ್ನು ಸಾರ್ವಜನಿಕ ಸಂಪರ್ಕವೆಂದು ಉಪಯೋಗಿಸುತ್ತಿದೆಯೆಂದು ಆರೋಪಿಸಿದರು.

ಸಂಪಾದಕೀಯ ನಿಲುವು

‘ಪ್ಯಾಲೆಸ್ಟೈನ್ ಗೆ ಬೆಂಬಲ ಮತ್ತು ಇಸ್ರೇಲ್ ಗೆ ವಿರೋಧ’ ಇದು ಕಾಂಗ್ರೆಸ್ ನ ನೀತಿಯಾಗಿದ್ದು, ಇದರ ಹಿಂದೆ ಮುಸ್ಲಿಮರ ಓಲೈಸುವುದೇ ಏಕೈಕ ಕಾರಣವಾಗಿದೆ ಇದು ಬಹಿರಂಗವಾಗಿದೆ. ಕಾಂಗ್ರೆಸ್ ಅವನತಿಯತ್ತ ಸಾಗುತ್ತಿರುವಾಗಲೂ, ಅದಕ್ಕೆ ಇದು ಅರ್ಥವಾಗದಿರುವುದು ಅದರ ದೌರ್ಭಾಗ್ಯ ಮತ್ತು ದೇಶದ ಸುದೈವವಾಗಿದೆಯೆನ್ನುವುದು ಸತ್ಯವಾಗಿದೆ !