ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ !
ಮೌಲವಿಯಿಂದ ಬಲವಂತ ಮತಾಂತರ ಮತ್ತು ಮದುವೆ |
ಘಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿ ‘ಲವ್ ಜಿಹಾದ್’ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ನಾವೇದ ಹೆಸರಿನ ಮುಸಲ್ಮಾನನು ತಾನು ಹಿಂದೂ ಎಂದು ಸುಳ್ಳು ಹೇಳಿ ಹಿಂದೂ ಯುವತಿಯೊಬ್ಬಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಮದುವೆಯಾಗಲು ಅನಿವಾರ್ಯ ಪಡಿಸಿದ ಆರೋಪ ಕೇಳಿಬಂದಿದೆ. ಸಂತ್ರಸ್ತ ಹಿಂದೂ ಹುಡುಗಿ ಪೊಲೀಸರಲ್ಲಿ ದಾಖಲಿಸಿರುವ ದೂರಿನಲ್ಲಿ ಆರೋಪಿ ನಾವೇದ್‌ನ ತಾಯಿ ಮತ್ತು ಸಹೋದರ ಜಾವೇದ್ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದು, ಚಿತ್ರಹಿಂಸೆ ನೀಡಿದ್ದಾರೆಂದು ತಿಳಿಸಿದ್ದಾಳೆ. ನವೇದನು, ಮುಸ್ಲಿಂ ಆಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಇದರೊಂದಿಗೆ ಆಕೆಯ ತಾಯಿಯನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದನು. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಸಂತ್ರಸ್ತ ಹಿಂದೂ ಯುವತಿಯು ತನ್ನನ್ನು ಮತಾಂತರಗೊಳಿಸಲು ಮೌಲವಿಯನ್ನೂ ಕರೆಸಲಾಗಿತ್ತು ಎಂದು ಆರೋಪಿಸಿದ್ದಾರೆ. ಆರೋಪಿ ನಾವೇದ್ ಈ ಮೊದಲೇ ಓರ್ವ ಹಿಂದೂ ಯುವತಿಯನ್ನು ಮತಾಂತರಗೊಳಿಸಿ ಮದುವೆಯಾಗಿದ್ದನು.
ಸಂಪಾದಕರ ನಿಲುವುಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ, ಮತಾಂಧರು ನೇರವಾಗಿ ಧಿಕ್ಕರಿಸುತ್ತಾರೆ, ಇದು ಪೊಲೀಸರಿಗೆ ನಾಚಿಕೆಗೇಡು ! |