‘ಅಯೋಧ್ಯೆಯ ಶ್ರೀರಾಮ ಮಂದಿರದೊಳಗೆ ಹೋಗುವ ಹಿಂದೂಗಳು ಮುಸಲ್ಮಾನರಾಗಿ ಹೊರಬರುತ್ತಾರಂತೆ !’ – ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದರ ಹಾಸ್ಯಾಸ್ಪದ ಹೇಳಿಕೆ !

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದಲ್ಲಿ ನಡೆಯುತ್ತಿರುವುದು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅದು ಅವರಿಗೆ ಮಾತ್ರ ಒಳ್ಳೆಯದಾಗಿದೆ. ಆದರೆ ನಮಗೆ ಅಲ್ಲ. ನಾನು, ಒಂದು ಮಸೀದಿ ದೇವಸ್ಥಾನವಾಗಿ ಬದಲಾಯಿಸಲಾಗಿದೆ ಎಂದು ಆಳವಾಗಿ ವಿಚಾರ ಮಾಡಿ ಹೇಳುತ್ತಿದ್ದೇನೆ. ಯಾರು ಆ ದೇವಸ್ಥಾನಕ್ಕೆ ಹೋಗುತ್ತಾನೆಯೋ, ಅವನು ಮುಸಲ್ಮಾನನಾಗಿ ಹೊರಬರುತ್ತಾನೆ ಎಂಬುದು ನನಗೆ ಭರವಸೆ ಇದೆ. ಏಕೆಂದರೆ ನಿಮಗೆ ತಿಳಿದಿರಬಹುದು, ನಮ್ಮ ಪೂರ್ವಜರು ಇಸ್ಲಾಂ ಧರ್ಮವನ್ನು ಅಲ್ಲಿಂದ ಹರಡಿದ್ದಾರೆ. ಯಾವ ವಿಷಯಗಳು ಅಲ್ಲಿಂದ ಹುಟ್ಟಿದೆಯೋ, ಆ ನಮ್ಮ ಬೇರುಗಳು ಯಾವಾಗಲೂ ಅಲ್ಲಿಯೇ ಇರುತ್ತವೆ; ಆದರೆ ಜನರಿಗೆ ಅರ್ಥವಾಗುವುದಿಲ್ಲ. ನನಗೆ ಸಂಪೂರ್ಣ ನಂಬಿಕೆ ಇದೆ, ಅಲ್ಲಿಂದ ಮುಸಲ್ಮಾನರಾಗಿ ಹೊರಬರುತ್ತಾರೆ ಎಂದು ಅಯೋಧ್ಯೆಯ ಶ್ರೀರಾಮಮಂದಿರದ ವಿಷಯದಲ್ಲಿ ಹೇಳಿಕೆ ನೀಡುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ ಅವರ ಹಳೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಮಿಯಾಂದಾದ್ ಅವರು 2020ರ ಆಗಸ್ಟ್ 8 ರಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂದರ್ಭದಲ್ಲಿ ಈ ವೀಡಿಯೊವನ್ನು ಪ್ರಸಾರ ಮಾಡಿದ್ದ.

ಸಂಪಾದಕೀಯ ನಿಲುವು

ಬಾಬರಿ ಮಸೀದಿಯನ್ನು ನಿರ್ಮಿಸಿದ ಸ್ಥಳವು, ಶ್ರೀರಾಮನ ಜನ್ಮಸ್ಥಳವಾಗಿದ್ದು, ಅಲ್ಲಿ ಹಿಂದೆ ಭವ್ಯವಾದ ಶ್ರೀರಾಮ ದೇವಸ್ಥಾನವಿತ್ತು. ಇದರಿಂದಾಗಿ ಕಳೆದ 500 ವರ್ಷಗಳಲ್ಲಿ ಬಾಬರಿಗೆ ಹೋದ ಮುಸ್ಲಿಮರು ಹಿಂದೂಗಳಾಗಿ ಹೊರಬಂದಿರಬೇಕು. ಅಷ್ಟೇ ಅಲ್ಲ ಮುಸಲ್ಮಾನರು ಮೂರೂವರೆ ಲಕ್ಷ ದೇವಸ್ಥಾನಗಳನ್ನು ಕೆಡವಿ ಅಲ್ಲಿ ಮಸೀದಿಗಳನ್ನು ನಿರ್ಮಿಸಿದರು. ದೇವಸ್ಥಾನಗಳ ಮೂಲ ಹಿಂದೂ ಆಗಿರುವುದರಿಂದ ಈ ಸ್ಥಳಕ್ಕೆ ಹೋಗುವ ಎಲ್ಲ ಮುಸಲ್ಮಾನರು ಹಿಂದೂಗಳೇ ಆಗಿದ್ದಾರೆ ಎಂದು ಹಿಂದೂಗಳು ಹೇಳಿದರೆ ತಪ್ಪು ತಿಳಿದುಕೊಳ್ಳಬಾರದು !