’CBI’ನ ಪಿಸ್ತೂಲಿನಿಂದ ಕೊಲೆಯಾಗಿದೆಯೇ ?

ದಾಭೋಳ್ಕರ್‌-ಪಾನ್ಸರೆ ಹತ್ಯೆಯ ದಾರಿತಪ್ಪಿದ ತನಿಖೆಯ ಕಥೆ

೨೦೧೩ ರಲ್ಲಿ ’ಅಂನಿಸ’ದ (ಅಂಧಶ್ರದ್ಧಾ ನಿರ್ಮೂಲನ ಸಮಿತಿಯ) ಡಾ. ನರೇಂದ್ರ ದಾಭೋಳ್ಕರ್, ೨೦೧೫ ರಲ್ಲಿ ಕಾ. ಗೋವಿಂದ ಪಾನ್ಸರೆ ಮತ್ತು ಸಾಹಿತಿ ಪ್ರಾ. ಎಸ್‌.ಎಮ್. ಕಲ್ಬುರ್ಗಿ ಮತ್ತು ೨೦೧೭ ರಲ್ಲಿ ಪತ್ರಕರ್ತೆ ಗೌರಿ ಲಂಕೇಶ ಈ ಪ್ರಗತಿಪರರ ಹತ್ಯೆಯ ಹಿಂದೆ ಹಿಂದುತ್ವನಿಷ್ಠರು ಮತ್ತು ವಿಶೇಷವಾಗಿ ‘ಸನಾತನ ಸಂಸ್ಥೆಯ ಕೈವಾಡವಿದೆ’, ಎಂಬುದನ್ನು ಹೇಗಾದರೂ ಮಾಡಿ ಸಿದ್ಧಪಡಿಸಬೇಕೆಂದು ಅವರ ಹತ್ಯೆಯಾದ ದಿನದಿಂದ ಹರಸಾಹಸ ನಡೆಯುತ್ತಿದೆ. ಇದರಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎ.ಟಿ.ಎಸ್‌.), ’ಸಿಬೈ’, ರಾಷ್ಟ್ರೀಯ ತನಿಖಾ ದಳ (ಎನ್‌.ಐ.ಎ.) ಈ ರಾಷ್ಟ್ರೀಯ ಸ್ತರದ ವಿವಿಧ ತನಿಖಾ ದಳಗಳಿಗೆ ಯೋಗ್ಯ ಸಾಕ್ಷಿ ಗಳು ಸಿಗದಿರುವುದರಿಂದ ಅವು ಕೂಡ ಬಿಕ್ಕಟ್ಟಿನಲ್ಲಿರುವುದು ತಿಳಿದು ಬಂದಿದೆ. ವಿವಿಧ ತನಿಖಾ ದಳಗಳು ಕಳೆದ ಅನೇಕ ವರ್ಷಗಳಿಂದ ಪ್ರಗತಿಪರರ ಹತ್ಯೆಯ ತನಿಖೆ ನಡೆಸಿರುವ ಅತಿ ದೊಡ್ಡ ಪ್ರಕ್ರಿಯೆಯಲ್ಲಿನ ಗೊಂದಲ ಮತ್ತು ಸನಾತನದ ಸಾಧಕರನ್ನು ಆರೋಪಿಯ ಕಟಕಟೆಯಲ್ಲಿ ನಿಲ್ಲಿಸುವ ಅಟ್ಟಹಾಸಕ್ಕಾಗಿ ತನಿಖಾ ದಳದವರು ಸಂಗ್ರಹಿಸಿರುವ ಸುಳ್ಳು ಸಾಕ್ಷಿಗಳು, ರಚಿಸಿದ ಕಾಲ್ಪನಿಕ ಕಥೆ, ಅದಕ್ಕಾಗಿ ಬಳಸಿಕೊಂಡ ಸರಕಾರಿ ವ್ಯವಸ್ಥೆ ಮತ್ತು ಖರ್ಚು ಮಾಡಿದ ಸಾವಿರಾರು ರೂಪಾಯಿಗಳು, ವ್ಯರ್ಥಗೊಳಿಸಿದ ಸಮಯ, ಆಗಾಗ ಕೇಳಿಸಿದ ನ್ಯಾಯಾಲಯದಲ್ಲಿನ ಮಾತುಗಳು ಮತ್ತು ಇದೆಲ್ಲದರಿಂದ ತನಿಖೆಯ ಬಗ್ಗೆ ಉದ್ಭವಿಸಿದ ಅನೇಕ ಪ್ರಶ್ನೆಗಳ ಬಗ್ಗೆ ಸಂಕ್ಷಿಪ್ತದಲ್ಲಿ ಮಂಡಿಸುವ ’ದಾಭೋಳ್ಕರ್‌-ಪಾನ್ಸರೆ ಹತ್ಯಾ ತನಿಖೆಯ ರಹಸ್ಯ ?’, ಈ (ಮರಾಠಿ) ಪುಸ್ತಕವನ್ನು ’ಉದ್ವೇಲಿ ಬುಕ್ಸ್‌’ ಈ ಪ್ರಕಾಶಕರು ಪ್ರಕಾಶಿಸಿದ್ದಾರೆ. ಅದರಲ್ಲಿನ ’ತಪಾಸಣೆಯಲ್ಲಿನ ಉತ್ತರವಿಲ್ಲದ ಒಂದು ಪ್ರಶ್ನೆ ಅಂದರೆ : ಪಿಸ್ತೂಲ್‌ ಎಲ್ಲಿ ಹೋಯಿತು ?’ ಈ ಒಂದೇ ಪ್ರಕರಣದಿಂದ ಈ ತಪಾಸಣೆಯಲ್ಲಿ ಸಾಮಾನ್ಯ ಜನರಿಗೂ ಸಹಜವಾಗಿ ಅರಿವಾಗುವಂತಹ ಕೊರತೆಗಳು ಎದ್ದು ಕಾಣುತ್ತವೆ. ಈ ಭಾಗವನ್ನು ನಾವು ೨೫/೯ ರ ಸಂಚಿಕೆಯ ಲೇಖನದಲ್ಲಿ ಓದಿದೆವು. ಮೇಲಿನ ವಿಭಾಗಗಳ ತನಿಖೆಯನ್ನು ನೋಡಿ ’ನಗಬೇಕೋ, ಅಳಬೇಕೋ’, ತಿಳಿಯುವುದಿಲ್ಲ. ಈ ತನಿಖೆಯಿಂದ ಹಿಂದೂಗಳಿಗೆ ಮತ್ತು ಸನಾತನದ ಸಾಧಕರಿಗೆ ಆಗುತ್ತಿರುವ ಪೀಡೆ ಮತ್ತು ಹಿಂಸೆಗೆ ಮಿತಿಯಿಲ್ಲ. ಪ್ರಗತಿಪರರು ಮತ್ತು ಆಡಳಿತದವರ ವಿಕೃತಿ ಮತ್ತು ಹಿಂದೂದ್ವೇಷಿ ಮಾನಸಿಕತೆಯು ಈ ತನಿಖೆಯಿಂದ ಬೆಳಕಿಗೆ ಬರುತ್ತಿದೆ. ಸಾಮ್ಯವಾದಿಗಳಿಂದ ವರ್ಷಗಟ್ಟಲೆ ನಡೆಯುತ್ತಿರುವ ಹಿಂದೂವಿರೋಧದ ಹೋರಾಟ ಮತ್ತು ಅವರು ಮಾಡಿದ ಸಾವಿರಾರು ಹತ್ಯೆಗಳನ್ನು ನೋಡಿದರೆ ೪ ಜನ ಸಾಮ್ಯವಾದಿಗಳ ಹತ್ಯೆಯ ಆರೋಪವನ್ನು ಹಿಂದೂಗಳ ಮೇಲೆ ಹೇರಲು ಅವರು ಮಾಡುತ್ತಿರುವ ಕುತಂತ್ರ ಈ ದೊಡ್ಡ ತನಿಖೆಯಲ್ಲಿನ ಒಂದು ಪ್ರಕರಣದಿಂದಲೂ ಅರಿವಾಗುತ್ತದೆ. (ಈ ಲೇಖನದಲ್ಲಿ ಪುಸ್ತಕದಲ್ಲಿನ ಭಾಗವನ್ನು ಯಥಾವತ್ತಾಗಿ ಅನುವಾದ ಮಾಡಿ ಇಲ್ಲಿ ಕೊಡುತ್ತಿದ್ದೇವೆ.) (ಭಾಗ ೨)

ಡಾ. ಅಮಿತ ಥಡಾನಿ

೧. ಈ ಹಿಂದಿನ ಲೇಖನದಲ್ಲಿ ನಾವು ಖಂಡೇಲ್‌ವಾಲ ಮತ್ತು ನಾಗೋರಿ ಇವರ ಹತ್ತಿರವಿದ್ದ ಪಿಸ್ತೂಲ್ನ್ನು ದಾಭೋಳಕರರ ಕೊಲೆಯಲ್ಲಿ ಉಪಯೋಗಿಸಲಾಗಿದೆ ಎಂಬ ವರದಿಯನ್ನು ಮುಂಬೈಯ ’ಫಾರೆನ್ಸಿಕ್‌ ಲ್ಯಾಬ್’ ನೀಡಿತ್ತು, ಎಂಬುದನ್ನು ಓದಿದೆವು. ಈ ಪಿಸ್ತೂಲನ್ನು ಪುಣೆ ಪೊಲೀಸರು ವಶಪಡಿಸಿಕೊಂಡರು ಮತ್ತು ಅವರಿಂದ ತನಿಖೆಯ ಹಸ್ತಾಂತರವಾದಾಗ ಆ ಪಿಸ್ತೂಲ್‌ ’ಸಿ.ಬಿ.ಐ.’ಯ ಕೈಗೆ ಹೋಗಿತ್ತು.

೨. ಈ ಹಿನ್ನೆಲೆಯಲ್ಲಿ ಬೆಂಗಳೂರು ’ಫಾರೆನ್ಸಿಕ್‌ ಲ್ಯಾಬ್‌’ನ ಹೇಳಿಕೆಗನುಸಾರ ಒಂದು ವೇಳೆ ದಾಭೋಳಕರರ ಕೊಲೆ ಯಲ್ಲಿನ ಪಿಸ್ತೂಲ್‌ ಪಾನ್ಸರೆಯವರ ಕೊಲೆಯಲ್ಲಿಯೂ ಉಪಯೋಗವಾಗಿದೆ ಎಂದಾದರೆ, ಅದರ ಅರ್ಥ ಅದು ’ಸಿ.ಬಿ.ಐ’ಯ ಕೋಣೆಯಿಂದ ಹೊರಗೆ ಬಂದಿತ್ತು ಎಂದಾಗುತ್ತದೆ. ಯಾರೋ ಕೊಲ್ಹಾಪುರಕ್ಕೆ ಅದನ್ನು ತೆಗೆದುಕೊಂಡು ಹೋಗಿ ಆ ಪಿಸ್ತೂಲಿನಿಂದ ಪಾನ್ಸರೆಯವರಿಗೆ ಗುಂಡು ಹೊಡೆದು ಪುನಃ ಆ ಪಿಸ್ತೂಲನ್ನು ತಂದು ’ಸಿ.ಬಿ.ಐ.’ಯ ಕಪಾಟಿನಲ್ಲಿ ಇಟ್ಟಿದ್ದಾರೆ ಎಂದಾಗುತ್ತದೆ ! ಅದರ ಮೇಲಿನ ಕೈಗಳ ಗುರುತುಗಳನ್ನು ಅಳಿಸಿರಬಹುದು ಮತ್ತು ಆ ಪಿಸ್ತೂಲ್‌ ಹೊರಗೆ ಬಂದಿರುವುದರ ನೋಂದಣಿ ಎಲ್ಲಿಯೂ ಆಗಿರಲಿಕ್ಕಿಲ್ಲ, ಹಾಗಾದರೆ ’ಸಿ.ಬಿ.ಐ.’ಯ ಅಧಿಕಾರಿಗಳು ಅಪರಾಧಿಗಳಾಗಿದ್ದಾರೆಯೇ ? ಎಂಬ ತನಿಖೆ ಆಗಬೇಕಲ್ಲವೇ ? ಕೊಲ್ಹಾಪುರ ಪೊಲೀಸರು ಇದರ ತನಿಖೆ ಮಾಡಲೇ ಇಲ್ಲ, ಹೀಗಿದೆಯೇ ?

೩. ತಮ್ಮ ಮೇಲೆ ಬರುವ ಸಂಶಯದ ಸುಳಿಯನ್ನು ತೆಗೆದುಹಾಕಲು ’ಸಿ.ಬಿ.ಐ.’ ಮುಂಬೈ ಉಚ್ಚ ನ್ಯಾಯಾಲಯಕ್ಕೆ, ಈ ಎರಡು ’ಫಾರೆನ್ಸಿಕ್‌ ಲ್ಯಾಬೊರೆಟರಿಗಳ’ ತನಿಖೆಯಲ್ಲಿನ ದುರ್ಲಕ್ಷ್ಯವನ್ನು (ತಪ್ಪನ್ನು) ದೂರಗೊಳಿಸಲು ಅಥವಾ ’ನಿಜವಾಗಿಯೂ ಏನಾಗಿದೆ ?’, ಎಂಬುದನ್ನು ನೋಡಲು ನಮಗೆ ದಾಭೋಳಕರ, ಪಾನ್ಸರೆ ಮತ್ತು ಕಲ್ಬುರ್ಗಿ ಈ ಮೂರೂ ಕೊಲೆ ಪ್ರಕರಣದಲ್ಲಿನ ಶವಗಳಲ್ಲಿ ಸಿಕ್ಕಿದ ಗುಂಡುಗಳು ಮತ್ತು ಅಕ್ಕಪಕ್ಕದಲ್ಲಿ ಬಿದ್ದಿರುವ ಗುಂಡುಗಳ ಅವಶೇಷಗಳನ್ನು ’ಸ್ಕಾಟ್‌ಲ್ಯಾಂಡ್‌ ಯಾರ್ಡ್‌, ಇಂಗ್ಲೆಂಡ್‌’ಗೆ ಕಳುಹಿಸಲಿಕ್ಕಿದೆ ಎಂದು ಪದೇಪದೇ ಹೇಳುತ್ತಿತ್ತು, ಆದರೆ ’ಹಾಗೆ ಕಳುಹಿಸಬಹುದು’ ಎಂಬ ಬಗ್ಗೆ ಅಂತಹ ಒಪ್ಪಂದವೇ (ಕರಾರು) ಆಗಿರಲಿಲ್ಲ. ಸಮೀರ ಗಾಯಕವಾಡರ ವತಿಯಿಂದ ವಕೀಲ ಸಂಜೀವ ಪುನಾಳೆಕರರು ಪದೇ ಪದೇ ’ಇಂತಹ ಒಪ್ಪಂದ ಇಲ್ಲದಿರುವಾಗ, ಇವರು ಉಚ್ಚ ನ್ಯಾಯಾಲಯಕ್ಕೆ ಹೀಗೇಕೆ ಹೇಳುತ್ತಿದ್ದಾರೆ ?’, ಎಂಬುದನ್ನು ತೋರಿಸಲು ಪ್ರಯತ್ನಿಸಿದರು; ಆದರೆ ಕೇಳುವವರು ಯಾರು ? ಕೊನೆಗೆ ಜನವರಿ ೨೦೧೭ ರಲ್ಲಿ ’ಸಿ.ಬಿ.ಐ.’ ಮುಂಬಯಿ ಉಚ್ಚ ನ್ಯಾಯಾಲಯಕ್ಕೆ ಏನು ಹೇಳಿತೆಂದರೆ, ನಾವು ’ಸ್ಕಾಟ್‌ಲ್ಯಾಂಡ್‌ ಯಾರ್ಡ್‌’ಗೆ ಇದನ್ನೆಲ್ಲ ಕಳುಹಿಸುವುದನ್ನು ರದ್ದುಗೊಳಿಸಿದ್ದೇವೆ. ಈಗ ಅದನ್ನು ಗುಜರಾತದಲ್ಲಿನ ಒಂದು ಲ್ಯಾಬ್‌ನಲ್ಲಿ ಪುನಃ ತಪಾಸಣೆ ಮಾಡಿಸಿಕೊಂಡಿದ್ದೇವೆ ಎಂದು ಹೇಳಿತು.

೪. ಗೌರಿ ಲಂಕೇಶ ಕೊಲೆ ಪ್ರಕರಣದಲ್ಲಿ ಅಪರಾಧಿಗಳನ್ನು (?) ಬಂಧಿಸಿದ ನಂತರ ನ್ಯಾಯಾಧೀಶ ಸತ್ಯರಂಜನ ಧರ್ಮಾಧಿಕಾರಿ ’ಇನ್ನಾದರೂ ತಪಾಸಣೆ ನಡೆಯುವುದೇ ?’, ಎಂದು ಆಲಿಕೆಯ ಸಮಯದಲ್ಲಿ ಪ್ರಶ್ನಿಸಲು ಆರಂಭಿಸಿದ ನಂತರ ’ಸಿ.ಬಿ.ಐ.’ ಶರದ ಕಳಸ್ಕರ್‌ ಮತ್ತು ಸಚಿನ್‌ ಅಂದೂರೆ ಈ ಇಬ್ಬರನ್ನು ಬಂಧಿಸಿತು. ಶರದ ಕಳಸ್ಕರ್‌ನನ್ನು ’ಸಿ.ಬಿ.ಐ.’ ಬಂಧಿಸಿದ ನಂತರ ಗೌರಿ ಲಂಕೇಶ ಕೊಲೆ ಪ್ರಕರಣದಲ್ಲಿ ಕರ್ನಾಟಕದ ವಿಶೇಷ ತನಿಖಾ ದಳ ಅವನನ್ನು ಬಂಧಿಸಿತು ಮತ್ತು ಮೋಜಿನ ವಿಷಯವೆಂದರೆ, ಈ ಶರದ ಕಳಸ್ಕರ್‌ ’ಎ.ಟಿ.ಎಸ್‌.’ಗೆ ಮತ್ತು ’ಸಿ.ಬಿ.ಐ.’ಗೆ ಏನೂ ಹೇಳದಿರುವಾಗ, ಅವನು ಕರ್ನಾಟಕದಲ್ಲಿ ತನ್ನ ತಪ್ಪೊಪ್ಪಿಗೆಯ ಹೇಳಿಕೆಯನ್ನು (?) ನೀಡಿದನು. ಅದರಲ್ಲಿ ಅವನು, ’ದಾಭೋಳ್ಕರರ ಹತ್ಯೆಗೆ ಉಪಯೋಗಿಸಿದ ಆ ಎರಡೂ ಪಿಸ್ತೂಲ್‌ಗಳನ್ನು ಒಂದು ಬ್ಯಾಗ್‌ ನಲ್ಲಿ ಹಾಕಿ ಅದನ್ನು ಪುಣೆಯಲ್ಲಿಯೇ ಇಟ್ಟು ನಾವಿಬ್ಬರೂ ನಮ್ಮ ಊರಿಗೆ ಹೋಗಿದ್ದೆವು ಎಂದು ಹೇಳಿದ್ದಾನೆ. ಜುಲೈ ೨೦೧೮ ರಲ್ಲಿ ಅವನಲ್ಲಿದ್ದ ೩-೪ ಪಿಸ್ತೂಲ್‌ಗಳೊಂದಿಗೆ ಶರದ ಕಳಸ್ಕರ್‌ ಠಾಣೆ ಜಿಲ್ಲೆಯ ಒಂದು ತೊರೆಯ ಸೇತುವೆಯಿಂದ ಪಿಸ್ತೂಲ್‌ಗಳ ಕೆಲವು ಭಾಗಗಳನ್ನು ತೆಗೆದು ಅವುಗಳನ್ನು ತೊರೆಗೆ ಎಸೆದಿದ್ದನು. ನಂತರ ಸ್ವಲ್ಪ ದೂರದ ತನಕ ನಡೆದುಕೊಂಡು ಹೋಗಿ ಅವನು ಇನ್ನೊಂದು ಬಿಡಿಭಾಗವನ್ನು ಎಸೆದಿದ್ದನು. ವಕೀಲ ಪುನಾಳೆಕರರು ಹೇಳಿ ದಂತೆ ಅವನು ಹೀಗೆ ಮಾಡಿದ್ದನು.”

ಎಲ್ಲರನ್ನು ಮೂರ್ಖರನ್ನಾಗಿ ಮಾಡುವ ಪಿಸ್ತೂಲ್‌ಗಳನ್ನು ಹುಡುಕುವ ಸಂತಾಪಜನಕ ಅಂದೋಲನ !

ಈ ಪಿಸ್ತೂಲ್‌ಗಳನ್ನು ಹುಡುಕಲು ’ಸಿ.ಬಿ.ಐ.’ ಒಂದು ದೊಡ್ಡ ಅಭಿಯಾನವನ್ನೇ ಹಮ್ಮಿಕೊಂಡಿತು. ಸುಮಾರು ಏಳುವರೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಜಲಾಂತರ್ಗಾಮಿಗಳನ್ನು ನಾರ್ವೆಯಿಂದ ಕರೆತಂದು, ದುಬೈಯ ಒಂದು ಕಂಪನಿಗೆ ಗುತ್ತಿಗೆ ನೀಡಿ ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಅನುಮತಿ ಪಡೆದು ಕೊನೆಗೆ ಜಲಾಂತರ್ಗಾಮಿಗಳ ಕೆಲಸ ಪ್ರಾರಂಭವಾಯಿತು. ತಮ್ಮ ಪದ್ದತಿಯಂತೆ ಅವರು ಆ ಭಾಗದಲ್ಲಿ ತುಂಬಾ ಹುಡುಕಾಡಿದರು. ಅಲ್ಲಿ ಪಿಸ್ತೂಲಿನ ಪಾರ್ಟ್‌ಗಳನ್ನು ಎಸೆದಿದ್ದು ೨೦೧೮ ರ ಜುಲೈ ತಿಂಗಳಲ್ಲಿ, ಹುಡುಕಲು ಪ್ರಾರಂಭಿಸಿದ್ದು ೨೦೨೦ ರಲ್ಲಿ. ನಿಜವಾಗಿಯೂ ಪಿಸ್ತೂಲಿನ ತುಕ್ಕು ಹಿಡಿದ ತುಂಡುಗಳು ಸಿಗಬೇಕಿತ್ತು. ಅಂತಹ ತುಂಡುಗಳು ಅವರಿಗೆ ಸಿಗಲೇ ಇಲ್ಲ, ಆದರೆ ಕೊನೆಗೆ ಒಂದು ತುಂಡಾಗದ ಪೂರ್ಣ ಪಿಸ್ತೂಲ್‌ ಅವರಿಗೆ ಸಿಕ್ಕಿತು ! ಚಿಕ್ಕಂದಿನಲ್ಲಿ ಕಟ್ಟಿಗೆ ಕಡಿಯುವವನ ಒಂದು ಕಥೆಯಿತ್ತು. ಅವನ ಕಟ್ಟಿಗೆಯ ಹಿಡಿ ಇರುವ ಕೊಡಲಿ ನೀರಿನಲ್ಲಿ ಬಿತ್ತು. ಆದರೆ ಚಿನ್ನದ ಹಿಡಿ ಇರುವ ಕೊಡಲಿ ಹೇಗೆ ಸಿಕ್ಕಿತು ? ಎಂಬುದು ಕಥೆಯಾಗಿತ್ತು. ಅದರಂತೆಯೆ ಇಲ್ಲಿಯೂ ಆಯಿತೇ ? ಬಿಡಿಭಾಗಗಳು ಸಿಗಲೇ ಇಲ್ಲ, ಹಾಗಾದರೆ ಬೇರೆ ಬೇರೆ ಪಿಸ್ತೂಲುಗಳ ಬಿಡಿಭಾಗಗಳು ಸೇರಿ ನೀರಿನಲ್ಲಿ ಒಂದಾಗಿ ಬೇರೆಯೆ ಒಂದು ಪಿಸ್ತೂಲ್‌ ತಯಾರಾಯಿತೇ ? ಬಹಳಷ್ಟು ಚರ್ಚೆಯ ನಂತರ ’ಸಿ.ಬಿ.ಐ.’ ’ಸಮುದ್ರದಲ್ಲಿ ಸಿಕ್ಕಿದ ಆ ಪಿಸ್ತೂಲು ಹತ್ಯೆಯಲ್ಲಿ ಉಪಯೋಗಿಸಿದುದಲ್ಲ’, ಎಂದು ಬಹಿರಂಗಪಡಿಸಿತು ಮತ್ತು ಅನೇಕ ಪ್ರಶ್ನೆಗಳು ಪರದೆ ಬೀಳುವ ದಾರಿ ಕಾಯುತ್ತಾ ಹಾಗೆ ಉಳಿದುಕೊಂಡವು. – ಡಾ. ಅಮಿತ್‌ ಥಡಾನಿ

ಅವುಗಳಲ್ಲಿನ ಕೆಲವು ಪ್ರಶ್ನೆಗಳು ಈ ಕೆಳಗಿನಂತೆ ಇವೆ

ಅ. ಸಾಕ್ಷಿದಾರರು ೨ ಪಿಸ್ತೂಲ್‌ಗಳನ್ನು ಉಪಯೋಗಿಸಿದ್ದಾರೆ ಎನ್ನುತ್ತಿದ್ದಾರೆ ಮತ್ತು ’ಫಾರೆನ್ಸಿಕ್‌ ಲ್ಯಾಬ್‌ ಒಂದೇ ಪಿಸ್ತೂಲ್‌ನ್ನು ಉಪಯೋಗಿಸಲಾಗಿದೆ’, ಎನ್ನುತ್ತದೆ. ಇವರಲ್ಲಿ ಸತ್ಯ ಯಾವುದು, ಸುಳ್ಳು ಹೇಳುವವರಿಗೆ ಎಂತಹ ಶಿಕ್ಷೆಯಾಗುವುದು ?

ಆ. ಶರದ ಕಳಸ್ಕರನ ತಪ್ಪೊಪ್ಪಿಗೆಯನ್ನು ಸತ್ಯವೆಂದು ತಿಳಿದರೆ, ಎಲ್ಲಿ ಅವನು ಪಿಸ್ತೂಲ್‌ಗಳ ತುಂಡುಗಳನ್ನು ಎಸೆದಿದ್ದನೋ, ಅಲ್ಲಿ ತುಂಡುಗಳು ಸಿಗಬೇಕಿತ್ತು. ಇಡೀ ಪಿಸ್ತೂಲ್‌ ಹೇಗೆ ಹೊರಗೆ ಬಂದಿತು ? ಹಾಗಾದರೆ ತಪ್ಪೊಪ್ಪಿಗೆಯ ಹೇಳಿಕೆ ಸುಳ್ಳು ಎಂದಾಗುವುದಿಲ್ಲವೆ ? ನ್ಯಾಯವಾದಿ ಪುನಾಳೆಕರರ ಬಂಧನ ತಪ್ಪಾಗಿತ್ತು, ಎಂದು ಈ ತಪಾಸಣೆ ತೋರಿಸುವುದಿಲ್ಲವೇ ?

ಇ. ಒಂದು ವೇಳೆ ’ಕನ್ಫೆಶನ್’ (ಸ್ವೀಕೃತಿ) ಸತ್ಯವೆಂದು ತಿಳಿದುಕೊಂಡರೆ, ಆಗಸ್ಟ್ ೨೦೧೩ ರಿಂದ ಜುಲೈ ೨೦೧೮ ಇಷ್ಟು ದೀರ್ಘಕಾಲ ಆ ಪಿಸ್ತೂಲ್‌ಗಳು ಎಲ್ಲಿದ್ದವು ? ಇದರ ತಪಾಸಣೆಯಾಗÀÄವುದು ಬೇಡವೇ ?

ಈ. ಇಲ್ಲಿ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದರೆ, ಸತ್ರ ನ್ಯಾಯಾಲಯದ ನಿರ್ಣಯ ಉಚ್ಚ ನ್ಯಾಯಾಲಯದಲ್ಲಿ ಬದಲಾಗುತ್ತದೆ ಮತ್ತು ಉಚ್ಚ ನ್ಯಾಯಾಲಯದಲ್ಲಿನ ನಿರ್ಣಯ ಸರ್ವೋಚ್ಚ ನ್ಯಾಯಾಲಯ ಬದಲಾಗುತ್ತದೆ ಅಥವಾ ಬದಲಾಯಿಸಬಹುದು, ಆದರೆ ತಂತ್ರಜ್ಞಾನದ ವಿಷಯ ಬಂದಾಗ ಮೂರೂ ಲ್ಯಾಬ್‌ಗಳು ಒಂದೇ ರೀತಿಯಲ್ಲಿರ ಬೇಕಿತ್ತಲ್ಲ ? ’ಒಬ್ಬರ ವರದಿಯನ್ನು ಇನ್ನೊಬ್ಬರು ಬದಲಾಯಿಸಿದರೆ ಮತ್ತು ಅವರ ವರದಿಯನ್ನು ಅವರ ಮುಂದಿನವರು ಬದಲಾಯಿಸಿದರೆ’, ಹೇಗಾಗಬಹುದು ? ಇದರ ಅರ್ಥ ಮೊದಲಿನವರು ಅಥವಾ ಕೊನೆಯವರಾದರು ಸುಳ್ಳು ಹೇಳುತ್ತಿದ್ದಾರೆ. ಇದರ ತನಿಖೆ ಯಾರು ಮಾಡುವುದು ?

ಬೆಳಗ್ಗೆ ವಾಯುವಿಹಾರದÀ ಹತ್ಯೆ : ಒಂದು ಕಾಲ್ಪನಿಕ ಕಥೆ

ಡಾ. ದಾಭೋಳಕರರ ಹತ್ಯೆಯಾದಾಗ, ’ಅವರು ವಾಯುವಿಹಾರ’ಕ್ಕೆ ಹೋಗಿದ್ದರು ಎಂದು ಸುದ್ದಿ ಬಂತು. ಪತ್ರಕರ್ತರಿಗೆ ’ಅವರು ವಾಯುವಿಹಾರಕ್ಕೆ ಹೋಗಿದ್ದರೆಂದು ಯಾರು ಹೇಳಿದರು, ಇದು ಕೂಡ ಒಂದು ಪ್ರಶ್ನೆಯೇ ಆಗಿದೆ. ಇಂದು ಅದನ್ನು ಪತ್ತೆ ಹಚ್ಚುವುದು ಅಸಾಧ್ಯವಾಗಿದೆ. ಕಾ. ಪಾನ್ಸರೆಯವರ ಹತ್ಯೆಯಾದಾಗ ಅವರ ಸೊಸೆಯ ಸಹೋದರ ಮುಕುಂದ ಕದಮ್‌ ಇವರು ಮೊದಲ ದೂರಿನಲ್ಲಿ (ಎಫ್‌.ಐ.ಆರ್‌.ನಲ್ಲಿ), ಪಾನ್ಸರೆ ಪತಿ-ಪತ್ನಿ ನಿತ್ಯದಂತೆ ’ಬೆಳಗ್ಗಿನ ವಾಯುವಿಹಾರ’ದಿಂದ ಹಿಂತಿರುಗುವಾಗ ಇದು ಘಟಿಸಿತು ಎಂದು ಹೇಳಿದ್ದರು. ಸಾಮಾನ್ಯವಾಗಿ ವಾಯುವಿಹಾರವನ್ನು ಬೆಳಗ್ಗೆ ೮ ಗಂಟೆಯ ಒಳಗೆ ಮಾಡಲಾಗುತ್ತದೆ. ೯ ಗಂಟೆಯ ನಂತರ ಯಾರೂ ವಾಯುವಿಹಾರಕ್ಕೆ ಹೋಗುವುದಿಲ್ಲ. ಆದ್ದರಿಂದ ಅದು ನಿಜವಾಗಿಯೂ ’ಬೆಳಗ್ಗಿನ ವಾಯುವಿಹಾರ’ ಆಗಿತ್ತೇ ? ಎಂಬ ಪ್ರಶ್ನೆ ಮೂಡಿತ್ತು; ಆದರೆ, ಬೆಳಗ್ಗೆ ೯.೨೫ ರ ಸಮಯದಲ್ಲಿ ಪಾನ್ಸರೆ ಪತಿ-ಪತ್ನಿ ಅಲ್ಪಾಹಾರ ಮಾಡಿ ಹಿಂತಿರುಗುವಾಗ ಈ ಘಟನೆ ಘಟಿಸಿತು ಎಂದು ಪೊಲೀಸರು ಆರೋಪಪತ್ರದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಅಂದರೆ ಪಾನ್ಸರೆ ಪತಿ-ಪತ್ನಿ ’ವಾಯುವಿಹಾರ’ಕ್ಕೆ ಹೋಗಿರಲಿಲ್ಲ; ಆದರೆ ಅಷ್ಟರ ವರೆಗೆ ಮುಕುಂದ ಕದಮ್‌ ಇವರ ದೂರಿನ ಆಧಾರ ಪಡೆದು ಕಮ್ಯುನಿಸ್ಟ್ ಪ್ರಚಾರಕರು ಪ್ರಸಾರ ಮಾಧ್ಯಮ ಗಳಲ್ಲಿ ’ವಾಯುವಿಹಾರ’ದ ಕಾಲ್ಪನಿಕ ಕಥೆ ಕಟ್ಟುವಲ್ಲಿ ಯಶಸ್ವಿ ಯಾದರು. ಇಲ್ಲಿ ಪ್ರಶ್ನೆ ಹೇಗಿದೆ ಎಂದರೆ, ’ಪಾನ್ಸರೆ ಹತ್ಯೆಯ ಕಾನೂನು ಹೋರಾಟ ಮಾಡುವ ಅವರ ಸೊಸೆ ಮೇಘಾ ಪಾನ್ಸರೆ ಅದೇ ಮನೆಯಲ್ಲಿರುತ್ತಿದ್ದರು, ಅವರು ಅತ್ತೆ ಮತ್ತು ಮಾವನವರಿಗೆ ಅಲ್ಪಾಹಾರ ಏಕೆ ಮಾಡಿಕೊಡಲಿಲ್ಲ ?’, ಇದರ ಸ್ಪಷ್ಟೀಕರಣವನ್ನು ಕೊಲ್ಹಾಪುರ ಪೊಲೀಸರು ಏಕೆ ಕೇಳಲಿಲ್ಲ ? ’ವಾಯುವಿಹಾರ’ಕ್ಕೆ ಹೋಗಿರುವ ಬುದ್ಧಿವಾದಿ ಗಳ ಹತ್ಯೆ ಇದು ಕಾಲ್ಪನಿಕವಾಗಿದೆ. ಒಂದು ಸುಳ್ಳನ್ನು ಅನೇಕ ಬಾರಿ ಹೇಳಿದರೆ, ಅದು ಜನರಿಗೆ ಸತ್ಯವೆಂದು ಅನಿಸುತ್ತದೆ, ಎಂಬ ಎರಡನೇ ಮಹಾಯುದ್ಧದಲ್ಲಿನ ಜರ್ಮನಿಯ ಪ್ರಚಾರಮಂತ್ರಿ ಡಾ. ಜೋಸೆಫ್‌ ಗೊಬೆಲ್ಸ್‌ನ ಕಥೆಯು ದುರ್ಭಾಗ್ಯದಿಂದ ವಾಯುವಿಹಾರ’ದ ಪ್ರಚಾರದ ವಿಷಯದಲ್ಲಿ ಸತ್ಯವಾಯಿತು ! – ಡಾ. ಅಮಿತ ಥಡಾನಿ, ಮುಂಬಯಿ.
(ಆಧಾರ : ’ದಾಭೋಳ್ಕರ್‌-ಪಾನ್ಸರೆ ಹತ್ಯೆ : ತಪಾಸಣೆಯಲ್ಲಿನ ರಹಸ್ಯಗಳು ?’, ಈ ಪುಸ್ತಕದಿಂದ)