ಇಸ್ರೈಲ್‌-ಹಮಾಸ ಯುದ್ಧದಿಂದ ಭಾರತವು ಏನು ಕಲಿಯಬೇಕು ?

ಸದ್ಯ ಇಸ್ರೈಲ್‌ ಮತ್ತು ಗಾಝಾಪಟ್ಟಿಯಲ್ಲಿನ ’ಹಮಾಸ’ ಭಯೋತ್ಪಾದಕ ಸಂಘಟನೆ ಇವರಲ್ಲಿ ಯುದ್ಧ ನಡೆದಿದೆ. ಅದರ ಅನೇಕ ವಾರ್ತೆಗಳು ಪ್ರತಿದಿನ ಬರುತ್ತಿವೆ ಮತ್ತು ಅವುಗಳಿಂದ ನಮಗೆ ಈ ಯುದ್ಧದ ಭೀಕರತೆ ಗಮನಕ್ಕೆ ಬರುತ್ತಿದೆ. ಈ ಎಲ್ಲ ಪರಿಸ್ಥಿತಿಯಲ್ಲಿ ’ಭಾರತ ಇಸ್ರೈಲ್‌ನಿಂದ ಏನು ಕಲಿಯಬೇಕು ?’, ಎನ್ನುವ ವಿಷಯದಲ್ಲಿ ಬ್ರಿಗೇಡಿಯರ್‌ ಹೇಮಂತ ಮಹಾಜನ (ನಿವೃತ್ತ) ಇವರು ಮಾಡಿದ ವಿಶ್ಲೇಷಣೆಯನ್ನು ಇಲ್ಲಿ ಕೊಡುತ್ತಿದ್ದೇವೆ.

೧. ಎಲ್ಲ ಸ್ತರಗಳಲ್ಲಿ ಇಸ್ರೈಲ್‌ನ ಹೋರಾಟವೃತ್ತಿ ಕಡಿಮೆಯಾಗಿದೆ !

ಹಮಾಸ ಅತ್ಯಂತ ಹಳೆಯ ಪದ್ಧತಿಯಿಂದ ಇಸ್ರೈಲ್‌ನ ಗಡಿಯಲ್ಲಿನ ಬೇಲಿಯನ್ನು ಟ್ರ್ಯಾಕ್ಟರ್, ಹ್ಯಾಂಡ್‌ ಗ್ರೆನೇಡ್‌ ಮತ್ತು ಇನ್ನಿತರ ವಸ್ತುಗಳನ್ನು ಉಪಯೋಗಿಸಿ ಒಡೆಯಿತು. ಈ ರೀತಿ ಬೇಲಿ ಒಡೆಯಬಹುದೆಂದು ಇಸ್ರೈಲ್‌ಗೂ ಕಲ್ಪನೆ ಇರಲಿಲ್ಲ. ಆ ಬೇಲಿಯಿಂದ ಕೇವಲ ೩ ಕಿ.ಮೀ. ಅಂತರದಲ್ಲಿ ಯುವಕರ ಒಂದು ಕಾರ್ಯಕ್ರಮ ನಡೆದಿತ್ತು. ಇಷ್ಟು ಸಮೀಪ ಆಕ್ರಮಣವಾಗುತ್ತಿದ್ದರೂ ಅದು ಅವರಿಗೆ ತಿಳಿಯದಿರುವುದು ಆಶ್ಚರ್ಯಕರವಾಗಿದೆ. ಈ ಕಾರ್ಯಕ್ರಮದಲ್ಲಿ ೪ ಸಾವಿರ ಕ್ಕಿಂತಲೂ ಹೆಚ್ಚು ಯುವಕರಿದ್ದರು ಮತ್ತು ದಾಳಿ ನಡೆಸಿದÀ ಭಯೋತ್ಪಾದಕರ ಸಂಖ್ಯೆ ಹೆಚ್ಚುಕಮ್ಮಿ ೧೫-೨೦ ರಷ್ಟಿತ್ತು. ಹೀಗಿದ್ದರೂ ಆ ಯುವಕರಿಗೆ ಭಯೋತ್ಪಾದಕರೊಂದಿಗೆ ಹೋರಾಡಲು ಸಾಧ್ಯವಾಗಲಿಲ್ಲ; ಏಕೆಂದರೆ, ಇಸ್ರೈಲ್‌ ಕೂಡ ಈಗ ’ಸಾಫ್ಟ್ ಕಂಟ್ರೀ’ (ಮೃದು ದೇಶ) ಆಗುತ್ತಿದೆ. ನಗರೀಕರಣ ಹೆಚ್ಚಾದಂತೆ ಹೋರಾಟವೃತ್ತಿ ಕಡಿಮೆಯಾಗುತ್ತದೆ. ಜನರಿಗೆ ಬಿಳಿಕಾಲರ್‌ ನೌಕರಿಗಳು ಬೇಕಾಗುತ್ತವೆ. ಇದರಿಂದ ಯುದ್ಧ ಮಾಡುವ ಧೈರ್ಯ ಇಲ್ಲವಾಗುತ್ತದೆ. ೪ ಸಾವಿರ ಯುವಕರಿಗೆ ಹೋರಾಡಲು ಸಾಧ್ಯವಿರಲಿಲ್ಲವೇ ? ಈ ಸಂದರ್ಭದಲ್ಲಿ ೧೦-೧೫ ವರ್ಷಗಳ ಹಿಂದೆ ಭಾರತದಲ್ಲಾದ ಒಂದು ಘಟನೆ ನೆನಪಾಗುತ್ತದೆ. ಭಾರತಕ್ಕೆ ಬಂದಿದ್ದ ೩-೪ ಇಸ್ರೈಲ್‌ ಪ್ರವಾಸಿಗರನ್ನು ಭಯೋತ್ಪಾದಕರು ಹಿಡಿದಿಟ್ಟಿದ್ದರು. ಆಗ ಆ ಭಯೋತ್ಪಾದಕರನ್ನು ಥಳಿಸಿ ಈ ಇಸ್ರೈಲಿ ಪ್ರವಾಸಿಗರು ಓಡಿಬಂದಿದ್ದರು. ಅಂತಹ ಹೋರಾಟ ವೃತ್ತಿ ಕಡಿಮೆ ಯಾಗಿರುವುದು ಕಾಣಿಸುತ್ತದೆ. ಒಟ್ಟಾರೆ ಈ ಭಯೋತ್ಪಾದಕ ದಾಳಿಗೆ ಬಹಳ ನಿಧಾನವಾಗಿ ಪ್ರತಿಕಾರ ಆಯಿತು. ಇಸ್ರೈಲ್‌ನ ಗುಪ್ತಚರ ವ್ಯವಸ್ಥೆ, ಸರಕಾರ ಮತ್ತು ಆಡಳಿತ ಇವೆಲ್ಲ ಸ್ತರಗಳ ಹೋರಾಟವೃತ್ತಿಯಲ್ಲಿ ಕೊರತೆ ಕಾಣಿಸಿತು.

೨. ಇಸ್ರೈಲ್‌ನ ಆಂತರಿಕ ವಿವಾದದ ಲಾಭ ಪಡೆದ ಹಮಾಸ್‌ !

ನಿವೃತ್ತ ಬ್ರಿಗೇಡಿಯರ್ ಹೇಮಂತ ಮಹಾಜನ

ಯಾವಾಗ ಒಂದು ದೇಶದ ಪರಿಸ್ಥಿತಿ ಸೂಕ್ಷ್ಮವಾಗಿರು ತ್ತದೆಯೋ (ಡೆಲಿಕೇಟ್‌), ಆಗ ಆಕ್ರಮಣ ಮಾಡಿದರೆ, ತುಂಬಾ ಹಾನಿಯಾಗುತ್ತದೆ. ಇಸ್ರೈಲ್‌ನಲ್ಲಿ ಕಳೆದ ೨ ವರ್ಷಗಳಲ್ಲಿ ೪ ಬೇರೆ ಬೇರೆ ಸರಕಾರಗಳು ಸ್ಥಾಪನೆಯಾದವು. ಇಸ್ರೈಲ್‌ನ ಸೈನ್ಯ, ಸಮಾಜ, ನ್ಯಾಯವ್ಯವಸ್ಥೆ, ರಾಜಕೀಯ ಮುಖಂಡರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಅವರು ಪರಸ್ಪರ ಆಂತರಿಕ ವಿವಾದದಲ್ಲಿ ಸಿಲುಕಿದ್ದಾರೆ. ಇಂತಹ ಸ್ಥಿತಿಯಲ್ಲಿ ಶತ್ರುವಿನ ಮೇಲಿನ ಗಮನ ಕಡಿಮೆಯಾಗುತ್ತದೆ. ಇಂತಹ ವಾತಾವರಣ ಇಸ್ರೈಲ್‌ನಲ್ಲಿದ್ದ ಕಾರಣ ಹಮಾಸ ಇದರ ಲಾಭ ಪಡೆಯಿತು. ಆಕ್ರಮಣವಾದ ನಂತರ ಯಾವಾಗ ಹೊಸ ಸರಕಾರ ಸ್ಥಾಪನೆಯಾಯಿತೋ, ಆಗ ಮೊದಲಿನ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾದರು. ಅತ್ಯಂತ ಕಠೋರವಾಗಿ ಪ್ರತಿದಾಳಿ ಮಾಡಲಾಯಿತು. ಇಸ್ರೈಲ್‌ನ ಪ್ರತ್ಯುತ್ತರದ ತೀವ್ರತೆ ಪ್ರಚಂಡವಾಗಿತ್ತು, ಎಂಬುದರಲ್ಲಿ ಸಂದೇಹವೇ ಇಲ್ಲ !

೩. ಹಮಾಸನ ಯುದ್ಧಸಿದ್ಧತೆ !

ಪ್ರತಿದಾಳಿ ಮಾಡುವಾಗ ’ಗುರಿ’ (ಟಾರ್ಗೆಟ್‌)ಯನ್ನು ನಿಶ್ಚಯಿಸಬೇಕಾಗುತ್ತದೆ. ಗಾಝಾದಲ್ಲಿ ಅನೇಕ ನಾಗರಿಕರೂ ವಾಸಿಸುತ್ತಿದ್ದು ಕಟ್ಟಡಗಳ ಮೇಲಿನ ಅಂತಸ್ತುಗಳಲ್ಲಿ ನಾಗರಿಕರು, ಮತ್ತು ಕೆಳಗಿನ ಅಂತಸ್ತುಗಳಲ್ಲಿ ಭಯೋತ್ಪಾದಕರು ಇರುತ್ತಾರೆ. ಆದ್ದರಿಂದ ಇಸ್ರೈಲ್‌ಗೆ ’ಗುರಿ’ಯನ್ನು ನಿಶ್ಚಯಿಸಲು ಸಾಧ್ಯ ವಾಗದೇ ಅನೇಕ ಜನಸಾಮಾನ್ಯರೂ ಈ ಯುದ್ಧದಲ್ಲಿ ಸಾವನ್ನಪ್ಪಿದರು. ಇದು ಕೂಡ ಹಮಾಸ್‌ನ ಯುದ್ಧನೀತಿಯ ಒಂದು ಭಾಗವಾಗಿದೆ. ಹಮಾಸ ಕಳೆದ ೯-೧೦ ವರ್ಷಗಳಲ್ಲಿ ಭೂಮಿಯ ಅಡಿಯಲ್ಲಿ ೫೦೦ ಕಿಲೋಮೀಟರ್‌ಗಳಷ್ಟು ಉದ್ದದ ಸುರಂಗಗಳನ್ನು ನಿರ್ಮಿಸಿದೆ. ಅವು ಭೂಮಿಯಿಂದ ೨೫ ರಿಂದ ೩೦ ಮೀಟರ್‌ ಆಳದಲ್ಲಿರುವುದರಿಂದ ಸಾಮಾನ್ಯ ಶಸ್ತ್ರಗಳಿಂದ ಅವುಗಳಿಗೆ ಏನೂ ಪರಿಣಾಮವಾಗುವುದಿಲ್ಲ; ಆದ್ದರಿಂದ ಇಸ್ರೈಲ್‌ ಭೂದಾಳಿಯ ಸಿದ್ಧತೆಯಲ್ಲಿದೆ.

೪. ಯುದ್ಧ ಯಾವಾಗ ನಿಲ್ಲಬಹುದು ?

ಹಮಾಸ್‌ನ ಪರವಾಗಿ ಶಿಯಾ ಇಸ್ಲಾಮೀ ರಾಷ್ಟ್ರಗಳಿವೆ. ಅವುಗಳಲ್ಲಿ ಸಿರಿಯಾ ಮತ್ತು ಜಾರ್ಡನ್‌ಗೆ ತುಂಬಾ ಶಕ್ತಿ ಇಲ್ಲ. ಲೆಬೆನಾನ್‌ನಲ್ಲಿ ’ಹಿಜಬುಲ್ಲಾ’ ಈ ಉಗ್ರವಾದಿ ಗುಂಪು ಹಮಾಸ್‌ಗಿಂತ ಶಕ್ತಿಶಾಲಿಯಾಗಿದೆ. ಆದ್ದರಿಂದ ಅಮೇರಿಕಾ ಈ ದೇಶಗಳೊಂದಿಗೆ ಹೋರಾಡಲು ಇಸ್ರೈಲ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿ ಇಸ್ಲಾಮೀ ದೇಶಗಳಿಗೆ ಎಚ್ಚರಿಕೆ ನೀಡಿದೆ. ರಷ್ಯಾದಲ್ಲಿ ಸದ್ಯ ಸಹಾಯ ಮಾಡಲು ಏನಿಲ್ಲ ಮತ್ತು ಚೀನಾಗೆ ಇದರÀಲ್ಲಿ ಆಸಕ್ತಿಯಿಲ್ಲ್ಲ. ಎಲ್ಲೆಡೆ ಶಾಂತಿಯ ಚರ್ಚೆ ನಡೆಯುತ್ತಿದೆ; ಆದರೆ ಪರಿಸ್ಥಿತಿಯನ್ನು ನೋಡಿದರೆ ಒಂದು ಗುಂಪು ಸಂಪೂರ್ಣ ಸೋಲದೇ ಅಥವಾ ಅದರ ಶಕ್ತಿ ಕಡಿಮೆಯಾಗದೇ, ಈ ಯುದ್ಧ ನಿಲ್ಲುವುದಿಲ್ಲ.

೫. ಈ ಯುದ್ಧದಿಂದ ಭಾರತ ಏನು ಕಲಿಯಬೇಕು ?

ಅ. ಚೀನಾ, ಪಾಕಿಸ್ತಾನ, ನಕ್ಸಲವಾದಿ, ಬಾಂಗ್ಲಾದೇಶಿ ನುಸುಳುಕೋರರಂತಹ ಭಾರತದ ಈ ಶತ್ರುಗಳು ನಿರಂತರ ವಾಗಿ ನಮ್ಮ ಮೇಲೆ ಆಕ್ರಮಣ ಮಾಡಲು ಆಧುನಿಕ ಪದ್ಧತಿಗಳನ್ನು ಉಪಯೋಗಿಸಬಹುದು. ಭಾರತದಲ್ಲಿ ಪ್ರತ್ಯಕ್ಷ ಯುದ್ಧವಾಗುವ ಸಾಧ್ಯತೆ ಬಹಳ ಕಡಿಮೆಯಿದೆ. ಭಾರತದಲ್ಲಿ ಹಿಂಸಾತ್ಮಕ ಆಂದೋಲನಗಳು ಮತ್ತು ಆತಂಕಕಾರಿ ಜಿಹಾದ್‌ಗಳು ನಡೆಯಬಹುದು. ವಿವಿಧ ಕಾರಣಗಳಿಂದ ಆಂದೋಲನಗಳು, ರಸ್ತೆತಡೆ, ರೈಲು-ಅಪಘಾತ ಇತ್ಯಾದಿ ಮಾಧ್ಯಮಗಳನ್ನು ಭಾರತದಲ್ಲಿ ಉಪಯೋಗಿಸಲಾಗುವುದು

ಆ. ಈಗ ತಂತ್ರಜ್ಞಾನ ತುಂಬಾ ಮುಂದುವರಿದಿದೆ. ಇಸ್ರೈಲ್‌ನಲ್ಲಿಯೇ ಕ್ಷಿಪಣಿಗಳನ್ನು ಗಾಳಿಯಲ್ಲಿಯೇ ನಾಶ ಗೊಳಿಸುವ ’ಐರನ್‌ ಡೋಮ್‌’ಗಳು ಇದ್ದವು; ಆದರೆ ಅವು ಸಕಾಲದಲ್ಲಿ ಕಾರ್ಯವನ್ನು ಮಾಡಲಿಲ್ಲ. ಭಾರತದಲ್ಲಿ ಇಂತಹ ಅನೇಕ ಪ್ರಕಾರದ ತಂತ್ರಜ್ಞಾನವಿದ್ದು ಅದನ್ನು ಉಪಯೋಗಿಸಲೂ ಒಳ್ಳೆಯ ಕ್ಷಮತೆಯಿರುವವರೇ ಬೇಕಾಗುತ್ತಾರೆ. ಅವರಿಗೆ ಒಳ್ಳೆಯ ತರಬೇತಿಯನ್ನು ನೀಡಬೇಕು. ಪುಣೆಯಲ್ಲಿಯೇ ನೋಡಿದರೆ ಸಾವಿರಾರು ಸ್ಥಳಗಳಲ್ಲಿ ’ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಲಾಗಿದೆ. ಕಳ್ಳತನ ಅಥವಾ ಇನ್ನಿತರ ಯಾವುದೇ ಪ್ರಕರಣಗಳಲ್ಲಿ ಎಷ್ಟು ಪ್ರಮಾಣದಲ್ಲಿ ಅವುಗಳ ಉಪಯೋಗವಾಗುತ್ತದೆ ?’

ಇ. ಶಸ್ತ್ರಗಳಿಗೆ ಪ್ರತಿದಾಳಿ ಮಾಡುವ ಶಸ್ತ್ರಗಳನ್ನು ತಯಾರಿಸ ಲಾಗುತ್ತದೆ. ಕ್ಷಿಪಣಿಗಳನ್ನು ತಯಾರಿಸಿದರೆ ಅವುಗಳನ್ನು ನಾಶ ಮಾಡುವ ಹೆಚ್ಚು ಕ್ಷಮತೆಯ ಕ್ಷಿಪಣಿಗಳನ್ನು ತಯಾರಿಸ ಲಾಗುತ್ತದೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು ಅವುಗಳಲ್ಲಿ ಶತ್ರುವಿನ ವಿರುದ್ಧ ಯಾವುದನ್ನು ಉಪಯೋಗಿಸಬೇಕೆಂದು ನಾವು ನಿರ್ಧರಿಸಬೇಕು. ೨೦೨೨ ರಲ್ಲಿ ಪಾಕಿಸ್ತಾನ ಪಂಜಾಬ್‌ನಲ್ಲಿ ೨೮೮ ಬಾರಿ ಡ್ರೋನ್‌ ಕಳುಹಿಸಿ ೧೫-೧೬ ಸಾವಿರ ಕಿಲೋದಷ್ಟು ಚರಸ್, ಅಫೂ, ಗಾಂಜಾ ಇತ್ಯಾದಿ ಕಳುಹಿಸಿತು. ಪಾಕಿಸ್ತಾನದ ಈ ’ಡ್ರೋನ್‌ ಯುದ್ಧ’ಕ್ಕೆ ಭಾರತ ಯೋಗ್ಯ ಪ್ರತ್ಯುತ್ತರ ನೀಡಲಿಲ್ಲ. ನಾವು ಪ್ರತ್ಯುತ್ತರ ಕೊಡಲು ಸಾಧ್ಯವಾಗದಿರುವುದು ಎಂದರೆ ಭಾರತೀಯ ವ್ಯವಸ್ಥೆಯ ವೈಫಲ್ಯವಾಗಿದೆ.

ಈ. ದೇಶದಲ್ಲಿ ಶಾಂತಿ ಇದ್ದಾಗ ಯಾರೂ ಜಾಗರೂಕರಾಗಿರು ವುದಿಲ್ಲ. ವಾಸ್ತವದಲ್ಲಿಯೂ ನಾಗರಿಕರು, ಸೈನ್ಯದಳದವರು ೨೪ ಗಂಟೆ ಜಾಗರೂಕರಾಗಿರಲು ಸಾಧ್ಯವಿಲ್ಲ. ಶಾಂತಿ ಕಾಲದಲ್ಲೂ ಹೇಗೆ ಜಾಗರೂಕ ಇರಬೇಕು ? ಇದನ್ನು ನೋಡಬೇಕು.

ಉ. ಪಾಕಿಸ್ತಾನ ಈಗ ಪಾರಂಪರಿಕ ಯುದ್ಧ ಮಾಡುವುದಿಲ್ಲ; ಏಕೆಂದರೆ ಯುದ್ಧವಾದರೆ ನಾವು (ಭಾರತ) ’ಸರ್ಜಿಕಲ್‌ ಸ್ಟೈಕ್’ ಮಾಡುವೆವು ಎಂದು ಅದಕ್ಕೂ ತಿಳಿದಿದೆ. ಆದ್ದರಿಂದಲೇ ಪಾಕಿಸ್ತಾನದಿಂದ ಸಾವಿರಾರು ಕಿಲೋ ಅಮಲು ಪದಾರ್ಥಗಳನ್ನು, ನಕಲಿ ನೋಟುಗಳನ್ನು ಭಾರತಕ್ಕೆ ಕಳುಹಿಸ ಲಾಗುತ್ತ್ತದೆ. ಬಾಂಗ್ಲಾದೇಶಿ ನುಸುಳುಕೋರರು ಹೆಚ್ಚುತ್ತಿದ್ದಾರೆ. ಇದು ಯುದ್ಧದ ಬದಲಾಗುತ್ತಿರುವ ಸವಾಲುಗಳಾಗಿವೆ. ಅದನ್ನು ಎದುರಿಸುವ ವಿಚಾರವಾಗÀಬೇಕು.

ಊ. ಸಾಮಾಜಿಕ ಮಾಧ್ಯಮಗಳ ಉಪಯೋಗವನ್ನು ನಿಯಂತ್ರಿಸಬೇಕು. ಸೋಶಲ್‌ಮಿಡಿಯಾ, ಫೇಸ್‌ಬುಕ್‌ ಇವುಗಳ ಲೇಖನಗಳಿಂದ ಗಲಭೆಗಳಾಗುತ್ತವೆ. ಅದಕ್ಕಾಗಿ ನನ್ನ ಅಭಿಪ್ರಾಯವೆಂದರೆ, ಸಾಮಾಜಿಕ ಮಾಧ್ಯಮಗಳಲ್ಲಿನ ಖಾತೆಗಳನ್ನು ತೆರೆಯಲು ಆಧಾರಕಾರ್ಡ್‌ವನ್ನು ಕಡ್ಡಾಯ ಗೊಳಿಸಿದರೆ ಮಾತ್ರ ನಕಲೀ ಖಾತೆಗಳನ್ನು ತೆರೆದು ದೇಶದ್ರೋಹಿ, ಪ್ರಚೋದನಕಾರಿ ಲೇಖನಗಳನ್ನು ಕಳಿಸುವವರ ಮೇಲೆ ಕಡಿವಾಣ ಬೀಳುವುದು.

ಎ. ಅಪತ್ಕಾಲದಲ್ಲಿ ಹೇಗೆ ವರ್ತಿಸಬೇಕು ? ಎಂಬ ಬಗ್ಗೆ ಜನಸಾಮಾನ್ಯರಿಗೆ ಶಿಕ್ಷಣ ನೀಡುವುದು ಆವಶ್ಯಕವಾಗಿದೆ.

– ಬ್ರಿಗೇಡಿಯರ್‌ ಹೇಮಂತ ಮಹಾಜನ (ನಿವೃತ್ತ) (೧೫.೧೦.೨೦೨೩)