ಉತ್ತರ ಕಾಶಿಯಲ್ಲಿನ ಸುರುಂಗದಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿರುವುದು ವಿಡಿಯೋ ಮೂಲಕ ದೃಢಪಟ್ಟಿದೆ !

ಉತ್ತರಕಾಶಿ (ಉತ್ತರಾಖಂಡ) – ಇಲ್ಲಿಯ ಸಿಲ್ಕಿಯಾರ ಸುರುಂಗದಲ್ಲಿ ಕಳೆದ ೧೦ ದಿನಗಳಿಂದ ಸಿಲುಕಿಕೊಂಡಿರುವ ೪೧ ಕಾರ್ಮಿಕರ ವಿಡಿಯೊ ಬೆಳಕಿಗೆ ಬಂದಿದೆ. ಸುರುಂಗದಲ್ಲಿ ೬ ಇಂಚು ಅಗಲವಾದ ಪೈಪಿನ ಮೂಲಕ ‘ಎಂಡೋಸ್ಕೋಪಿಕ್ ಕ್ಯಾಮೆರಾ’ ಕಳುಹಿಸಲಾಗಿತ್ತು. ಈ ಮೂಲಕ ಕಾರ್ಮಿಕರ ಜೊತೆಗೆ ಚರ್ಚಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲಾಗಿದೆ. ಕಾರ್ಮಿಕರ ಸಂಖ್ಯೆ ಕೂಡ ಎಣಿಸಲಾಯಿತು. ಈಗ ಎಲ್ಲಾ ಕಾರ್ಮಿಕರು ಸೌಖ್ಯವಾಗಿದ್ದಾರೆ. ಈ ಕಾರ್ಮಿಕರಿಗೆ ಸಹಾಯ ತಂಡದಿಂದ ಬಿಸಿ ಹುಗ್ಗಿಯನ್ನು ತಯಾರಿಸಿ ಬಾಟಲಿನಲ್ಲಿ ತುಂಬಿಸಿ ಪೈಪಿನ ಮೂಲಕ ಕಳುಹಿಸಲಾಗಿದೆ. ಕಳೆದ ೧೦ ದಿನದ ನಂತರ ಈ ಕಾರ್ಮಿಕರಿಗೆ ಮೊದಲು ಬಾರಿ ಬಿಸಿ ಊಟ ಸಿಕ್ಕಿದೆ.

(ಸೌಜನ್ಯ : CNN-News18)