ಪ್ಯಾಲೆಸ್ಟೇನ ಆಡಳಿತಕ್ಕೆ ಗಾಝಾದಲ್ಲಿ ಭಯೋತ್ಪಾದನೆಗೆ ಬೆಂಬಲಿಸಲು ಅನುಮತಿಸುವುದಿಲ್ಲ ! – ಪ್ರಧಾನಮಂತ್ರಿ ನೆತನ್ಯಾಹು ಇವರ ಎಚ್ಚರಿಕೆ

ತೆಲ್ ಅವಿವ (ಇಸ್ರೇಲ್) – ನಾವು ಹಮಾಸ್ ಅನ್ನು ನಾಶಪಡಿಸಿದ ನಂತರ, ಗಾಜಾದಲ್ಲಿ ಆಡಳಿತ ನಡೆಸುವವರಿಂದ ಭಯೋತ್ಪಾದನೆಗೆ ಬೆಂಬಲಿಸಲು ನಾವು ಅನುಮತಿಸುವುದಿಲ್ಲ ಎಂದು ನಾನು ಅತ್ಯಂತ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ಪ್ಯಾಲೆಸ್ಟೇನ ಆಡಳಿತವು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ದಾಳಿಯಲ್ಲಿ ಹಮಾಸ್ ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿದ ನಂತರ ಪ್ರಧಾನಮಂತ್ರಿ ನೆತನ್ಯಾಹು ಈ ಎಚ್ಚರಿಕೆ ನೀಡಿದ್ದಾರೆ.

ನೇತನ್ಯಾಹು ತಮ್ಮ ಮಾತನ್ನು ಮುಂದುವರಿಸಿ, ಸದ್ಯಕ್ಕೆ ಪ್ಯಾಲೆಸ್ಟೇನ್ ನ ಸ್ಥಳೀಯ ಆಡಳಿತವು ಭಯೋತ್ಪಾದಕ ಕೃತ್ಯಗಳು ನಡೆಯುತ್ತಿರುವುದನ್ನು ನಿರಾಕರಿಸುತ್ತದೆ, ಭಯೋತ್ಪಾದಕರನ್ನು ಬೆಂಬಲಿಸುತ್ತದೆ, ಭಯೋತ್ಪಾದಕರ ಮಕ್ಕಳಿಗೆ ಭಯೋತ್ಪಾದನೆಗಾಗಿ ಮತ್ತು ಇಸ್ರೇಲ್ ಅನ್ನು ನಾಶಮಾಡಲು ತರಬೇತಿ ನೀಡುತ್ತದೆ ಎಂದು ಹೇಳಿದ್ದಾರೆ. ನಾವು ಹಮಾಸ್ ಅನ್ನು ಸೋಲಿಸಿದ ನಂತರ ಗಾಝಾದಲ್ಲಿ ಇದನ್ನು ಮಾಡಲು ಅನುಮತಿಸುವುದಿಲ್ಲ. ಪ್ಯಾಲೆಸ್ಟೇನ್ ವಿದೇಶಾಂಗ ಇಲಾಖೆಯ ಆಘಾತಕಾರಿ ಹೇಳಿಕೆಗಳನ್ನು ನೀಡುತ್ತಿದೆ. ಇದರಲ್ಲಿ ಹಮಾಸ್ ಇಸ್ರೇಲ್ ಮೇಲಿನ ದಾಳಿಯಲ್ಲಿ ಭಾಗಿಯಾಗಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಇಸ್ರೇಲ್ ಮೇಲಿನ ದಾಳಿಯಲ್ಲಿ ಹಮಾಸ್ ಭಾಗಿಯಾಗಿಲ್ಲ ಎಂದು ಪ್ಯಾಲೆಸ್ಟೇನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಹೇಳಿಕೆ ನೀಡಿದ್ದಾರೆ. ಯುದ್ಧಕ್ಕೆ 44 ದಿನಗಳು ಕಳೆದರೂ, ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಇಸ್ರೇಲ್ ಮೇಲಿನ ದಾಳಿಯನ್ನು ಖಂಡಿಸಲು ನಿರಾಕರಿಸಿದ್ದಾರೆ ಎಂದು ಹೇಳಿದರು.