ಆಂಧ್ರಪ್ರದೇಶದ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದವನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕಾಗಿ ಕೆಲಸದಿಂದ ವಜಾ 

ಆದೇಶವನ್ನು ಎತ್ತಿ ಹಿಡಿದ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ! 

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶ ಉಚ್ಚನ್ಯಾಯಾಲಯವು ಹಿಂದೂ ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ‘ಶ್ರೀ ಬ್ರಹ್ಮರಂಭ ಮಲ್ಲಿಕಾರ್ಜುನ ಸ್ವಾಮಿ ವರಲಾ ದೇವಸ್ಥಾನಂ’ನ ಓರ್ವ ನೌಕರನನ್ನು ಕೆಲಸದಿಂದ ವಜಾ ಮಾಡುವಂತೆ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. ನ್ಯಾಯಾಲಯವು, ನೌಕರನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಕಾರಣ ಅವನು ಈಗ ಹಿಂದೂ ಅಲ್ಲದ ಕಾರಣ, ಧಾರ್ಮಿಕ ಸಂಸ್ಥೆಗಳ ಕಾಯ್ದೆಯಡಿ ಕೆಲಸ ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಕಾಯಿದೆಯ ಪ್ರಕಾರ ಈ ದೇವಸ್ಥಾನದಲ್ಲಿ ಹಿಂದೂಗಳು ಮಾತ್ರ ಕೆಲಸ ಮಾಡಬಹುದು.

1. 2002 ರಲ್ಲಿ, ಈ ನೌಕರನು ದೇವಸ್ಥಾನದಲ್ಲಿ ಅನುಕಂಪದ ಆಧಾರದ ಮೇಲೆ ನೇಮಿಸಲ್ಪಟ್ಟಿದ್ದನು. ಅವನು 2010 ರಲ್ಲಿ ಚರ್ಚ್‌ನಲ್ಲಿ ಕ್ರೈಸ್ತ ಮಹಿಳೆಯನ್ನು ವಿವಾಹವಾಗಿದ್ದನು. ಇದಾದ ಬಳಿಕ ಆತನ ವಿರುದ್ಧ ದೂರು ದಾಖಲಾಗಿತ್ತು. ‘ಅವನು ನೌಕರಿ ಪಡೆಯುವ ಸಂದರ್ಭದಲ್ಲಿ ತನ್ನ ಕ್ರೈಸ್ತ ಧರ್ಮವನ್ನು ಮರೆ ಮಾಚಿದ್ದಾನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಾದ ಬಳಿಕ ಅವನನ್ನು ನೌಕರಿಯಿಂದ ವಜಾಗೊಳಿಸಲಾಗಿತ್ತು. ಅವನು ಸ್ಪಷ್ಟೀಕರಣ ನೀಡುವಾಗ `ನಾನು ನನ್ನ ಧರ್ಮವನ್ನು ಮುಚ್ಚಿಟ್ಟಿರಲಿಲ್ಲ. ನಾನು ಈ ಸಂದರ್ಭದ ಸರಕಾರಿ ಕಾಗದಪತ್ರಗಳನ್ನು ಸಲ್ಲಿಸಿದ್ದೇನೆ ಮತ್ತು ನಾನು ಪರಿಶಿಷ್ಟ ಜಾತಿಗೆ ಸೇರಿದ್ದೇನೆ ಎಂದು ತಿಳಿಸಿದ್ದೆನು. ‘ಕ್ರೈಸ್ತ ಯುವತಿಯನ್ನು ಮದುವೆಯಾದ ನಂತರ ನಾನು ಮತಾಂತರಗೊಂಡೆ’, ಎಂದು ಅರ್ಥಮಾಡಿಕೊಳ್ಳಬಾರದು. ನಾನು ಈಗಲೂ ಹಿಂದೂ ಧರ್ಮವನ್ನು ನಂಬುತ್ತೇನೆ.’ ಎಂಬುದಾಗಿ ತಿಳಿಸಿದ. ಅವನ ಸ್ಪಷ್ಟೀಕರಣವನ್ನು ತಳ್ಳಿಹಾಕುತ್ತಾ ಉಚ್ಚ ನ್ಯಾಯಾಲಯವು ಆತನನ್ನು ವಜಾಗೊಳಿಸಿದ ದೇವಾಲಯ ಸಮಿತಿಯ ಆದೇಶವನ್ನು ಎತ್ತಿ ಹಿಡಿದಿದೆ.

2. ನ್ಯಾಯಾಲಯವು ತೀರ್ಪು ನೀಡುವ ಸಮಯದಲ್ಲಿ ಒಂದು ವೇಳೆ ಅರ್ಜಿದಾರನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳದೆ ಕ್ರೈಸ್ತ ಹುಡುಗಿಯನ್ನು ಮದುವೆಯಾಗಿದ್ದರೆ, ‘ವಿಶೇಷ ವಿವಾಹ ಕಾಯ್ದೆ, 1954’ ರ ನಿಬಂಧನೆಗಳ ಅಡಿಯಲ್ಲಿ ವಿವಾಹವನ್ನು ಮಾಡಿಕೊಳ್ಳಬೇಕಿತ್ತು. ವಿವಾಹ ಪ್ರಮಾಣಪತ್ರವನ್ನು ‘ವಿಶೇಷ ವಿವಾಹ ಕಾಯಿದೆ’ಯ ಕಲಂ 13 ರ ಪ್ರಕಾರ ನೀಡಬೇಕಾಗಿತ್ತು; ಆದರೆ ಅರ್ಜಿದಾರರು ಇದುವರೆಗೆ ಕಲಂ13 ರ ಅಡಿಯಲ್ಲಿ ಯಾವುದೇ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ. ಇದರಿಂದ, ಅರ್ಜಿದಾರನು ಈ ನಿಯಮದಿಂದ ತಾನು ಹೊರಬರಲು ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿಯಬಹುದು. ನಂದ್ಯಾಲ್‌ನ ಚರ್ಚ್‌ನಲ್ಲಿ ವಿವಾಹ ನಡೆದಿದ್ದು, ಅಲ್ಲಿಯ ನೊಂದಣಿಯಲ್ಲಿ ಅರ್ಜಿದಾರ ಮತ್ತು ಅವನ ಪತ್ನಿಯ ಧರ್ಮ`ಕ್ರೈಸ್ತ’ ಎಂದು ಬರೆಯಲಾಗಿದೆ. ಮತ್ತು ಅಲ್ಲಿಯ ರಜಿಸ್ಟ್ರಾರನ ಹಸ್ತಾಕ್ಷರವೂ ಅದರಲ್ಲಿದೆ.

ಸಂಪಾದಕೀಯ ನಿಲುವು

ಹಿಂದೂಗಳ ದೇವಸ್ಥಾನದಲ್ಲಿ ಹಿಂದೂಗಳೇ ಕೆಲಸ ಮಾಡಲು ಬಯಸುತ್ತಾರೆ, ಇದನ್ನು ಯಾರೂ ವಿರೋಧಿಸುವುದಿಲ್ಲ !