|
ನವ ದೆಹಲಿ – ದೆಹಲಿಯಲ್ಲಿನ ಪ್ರಸಿದ್ಧ ಜಾಮಾ ಮಸೀದಿಯ ಹತ್ತಿರ ಒಂದು ಸಾರ್ವಜನಿಕ ಉದ್ಯಾನವನದ ಮೇಲೆ ಮಸೀದಿಯಿಂದ ಅತಿಕ್ರಮಣ ನಡೆಸಿ ವಶಕ್ಕೆ ತೆಗೆದುಕೊಂಡಿದೆ. ಈ ಬಗ್ಗೆ ಮಹಮ್ಮದ್ ಅರ್ಸಲಾನ ಎಂಬ ವ್ಯಕ್ತಿಯು ದೆಹಲಿಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ಬಗ್ಗೆ ವಿಚಾರಣೆ ನಡೆಸುವಾಗ ನ್ಯಾಯಾಲಯವು ದೆಹಲಿ ಮಹಾನಗರ ಪಾಲಿಕೆಗೆ ಉದ್ಯಾವವನವನ್ನು ಅತಿಕ್ರಮಣದಿಂದ ಮುಕ್ತಗೊಳಿಸದೆ ಇದ್ದರೆ ‘ಕಾನೂನಿನ ರಾಜ್ಯ ಇಲ್ಲದ ಇಂತಹ ಯುಗದಲ್ಲಿ ವಾಸಿಸುತ್ತಿದ್ದೇವೆ ? ಹಾಗಾದರೆ ಮಹಾನಗರ ಪಾಲಿಕೆ ಉದ್ಯಾನವನ ಮುಕ್ತಗೊಳಿಸಿ ತನ್ನ ನಿಯಂತ್ರಣಕ್ಕೆ ಏಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ?’, ಎಂದು ತಪರಾಕಿ ನೀಡಿದೆ.
🏛️ Delhi High Court instructs MCD to acquire ownership of parks near Jama Masjid
🌳 MCD to take action; instructed to submit status report in 4 weeks
👥 Public parks should be accessible to all citizens, court reminds MCDhttps://t.co/1AtY7unnbB
— Swarajya (@SwarajyaMag) November 17, 2023
೧. ವಿಚಾರಣೆಯ ಸಮಯದಲ್ಲಿ ಮಹಾನಗರ ಪಾಲಿಕೆಯು ನ್ಯಾಯಾಲಯಕ್ಕೆ, ಉದ್ಯಾನವನದ ಮೇಲೆ ಜಾಮಾ ಮಸೀದಿಯ ಟ್ರಸ್ಟಿ ಮತ್ತು ಶಾಹಿ ಇಮಾಮ ಇವರು ಕಾನೂನು ಬಾಹಿರ ನಿಯಂತ್ರಣ ಪಡೆದಿದ್ದಾರೆ. ಅವರು ಅದಕ್ಕೆ ಬೀಗ ಕೂಡ ಹಾಕಿದ್ದಾರೆ. ಅಲ್ಲಿ ಮಹಾನಗರ ಪಾಲಿಗೆ ಅಧಿಕಾರಿಗಳಿಗೆ ಪ್ರವೇಶಿಸಲು ಅಡ್ಡಿಪಡಿಸಲಾಗುತ್ತಿದೆ. ಇನ್ನೊಂದು ಕಡೆ ದೆಹಲಿ ವಕ್ಫ್ ಬೋರ್ಡ್ ಕೂಡ ಈ ಸ್ವತ್ತು ತನ್ನದಾಗಿದೆ ಎಂದು ದಾವೆ ಮಾಡುತ್ತಿದೆ. (ಇದನ್ನು ನ್ಯಾಯಾಲಯದಲ್ಲಿ ಹೇಳುವಾಗ ಪಾಲಿಕೆಗೆ ನಾಚಿಕೆ ಅನ್ನಿಸಲಿಲ್ಲವೇಕೆ ? ‘ಹಿಂದೂ’ ದೇಶವನ್ನು ನುಂಗಲು ಹೊರಟಿರುವ ‘ವಕ್ಪ್ ಕಾನೂನು’ ರದ್ದು ಪಡಿಸುವುದಕ್ಕಾಗಿ ಈಗ ಕೇಂದ್ರ ಸರಕಾರವೇ ಸೊಂಟ ಕಟ್ಟಿ ನಿಲ್ಲಬೇಕು ! – ಸಂಪಾದಕರು)
೨. ಮಹಾನಗರ ಪಾಲಿಕೆಯ ಹೇಳಿಕೆ ಕೇಳಿ ಉಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸುತ್ತಾ, ‘ಸಾರ್ವಜನಿಕ ಉದ್ಯಾನವನಗಳ ಮೇಲೆ ಯಾರು ಹೇಗೆ ನಿಯಂತ್ರಣ ಪಡೆಯಲು ಸಾಧ್ಯ ? ಪಾಲಿಗೆಯ ಕಾನೂನಿನ ಪ್ರಕಾರ ಉದ್ಯಾನವನ ನಿಯಂತ್ರಣಕ್ಕೆ ಪಡೆಯಲು ಕ್ರಮ ಕೈಗೊಳ್ಳಬೇಕು. ಪೊಲೀಸರ ಅವಶ್ಯಕತೆ ಇದ್ದರೆ ಆಗ ಅದು ಕೂಡ ನೀಡಲಾಗುವುದು. ಈ ರೀತಿ ಸಾರ್ವಜನಿಕ ಉದ್ಯಾನವನಗಳನ್ನು ಆಡಳಿತ ಅಧಿಕಾರ ಹೀಗೆ ಬಿಟ್ಟುಕೊಡಲು ಸಾಧ್ಯವಿಲ್ಲ. (ದೆಹಲಿ ಮಹಾಪಾಲಿಕೆ ಈಗ ಧೈರ್ಯ ತೋರುವುದೇ ? – ಸಂಪಾದಕರು)
ಸಂಪಾದಕೀಯ ನಿಲುವುಎಲ್ಲಾ ವ್ಯವಸ್ಥೆಗಳು ಕೈಯಲ್ಲಿರುವಾಗಲೂ ಮಸೀದಿಯು ಸಾರ್ವಜನಿಕ ಆಸ್ತಿಯನ್ನು ಕಾನೂನ ಬಾಹಿರವಾಗಿ ನಿಯಂತ್ರಣಕ್ಕೆ ಪಡೆದುಕೊಳ್ಳುತ್ತದೆ ಮತ್ತು ಮಹಾನಗರ ಪಾಲಿಕೆ ನಿಷ್ಕ್ರಿಯವಾಗಿರುತ್ತದೆ ಇದು ಲಚ್ಚಾಸ್ಪದ ! ಉದ್ಯಾನವನ ವಶಕ್ಕೆ ತೆಗೆದುಕೊಳ್ಳುವವರೆಗೆ ಆಡಳಿತ ನಿದ್ರಿಸುತ್ತಿತ್ತೆ ? ಈ ಪ್ರಕರಣ ನ್ಯಾಯಾಲಯಕ್ಕೆ ಬರದೆ ಇದ್ದಿದ್ದರೆ ಮತ್ತು ನ್ಯಾಯಾಲಯ ಆದೇಶ ನೀಡದೇ ಇದ್ದರೆ, ‘ಈ ಜಾಗ ಮಸೀದಿಗೆ ಸೇರಿದೆ’, ಎಂದು ಜಗಜ್ಜಾಹಿರವಾಗುತ್ತಿತ್ತು ! ದೆಹಲಿ ಅಷ್ಟೇ ಅಲ್ಲ, ಮಸೀದಿಯು ದೇಶಾದ್ಯಂತ ಇಂತಹ ಎಷ್ಟು ಸ್ಥಳಗಳಲ್ಲಿ ಸಾರ್ವಜನಿಕ ಜಾಗವನ್ನು ಅತಿಕ್ರಮಣ ಮಾಡಿದೆ. ಇದರ ವಿಚಾರಣೆ ನಡೆಸಿ ಈ ಜಾಗವನ್ನು ಹಿಂಪಡೆಯುವುದಕ್ಕೆ ಒಂದು ಸ್ವತಂತ್ರ ಇಲಾಖೆಯ ನಿರ್ಮಾಣ ಮಾಡುವ ಆವಶ್ಯಕತೆ ಇದೆ ! |