ಹಮಾಸ್ ಮಾಡಿದ ಇಸ್ರೇಲ್ ನರಮೇಧ ಯೋಗ್ಯ ! – ಶೇ. 57.5 ರಷ್ಟು ಅಮೇರಿಕನ್ ಮುಸ್ಲಿಮರ ಅಭಿಪ್ರಾಯ

ವಾಷಿಂಗ್ಟನ್ (ಅಮೇರಿಕಾ) – ಹಮಾಸ್ ಅಕ್ಟೋಬರ್ 7 ರಂದು ನಡೆಸಿದ ದಾಳಿಯಲ್ಲಿ 1 ಸಾವಿರದ 200 ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಇಸ್ರೇಲ್ ಹಮಾಸ್‌ನ ಭಯೋತ್ಪಾದಕರನ್ನು ಸಂಪೂರ್ಣ ನಾಶಗೊಳಿಸಲು ನಡೆಸಿದ ದಾಳಿಯ ವಿರುದ್ಧ, ಪ್ರಪಂಚದಾದ್ಯಂತದ ಮುಸ್ಲಿಮರು ತಮ್ಮ ದೇಶಗಳಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆಯನ್ನು ನಡೆಸಲು ಪ್ರಾರಂಭಿಸಿದರು. ಹಲವೆಡೆ ಹಿಂಸಾಚಾರ ನಡೆದಿದೆ. ಇಂತಹದುರಲ್ಲಿಯೇ ‘ಸಾಯಗ್ನಲ್’ ಎಂಬ ಸಂಸ್ಥೆ ಅಮೆರಿಕದ ಮುಸ್ಲಿಮರ ಸಮೀಕ್ಷೆ ನಡೆಸಿತ್ತು. ಅದರಲ್ಲಿ ಅಮೆರಿಕದ ಶೇ.57.5 ರಷ್ಟು ಮುಸ್ಲಿಮರು ಹಮಾಸ್ ನಿಂದ ಇಸ್ರೇಲಿಗಳ ನರಮೇಧ ಯೋಗ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಮೀಕ್ಷೆಯ ಅಡಿಯಲ್ಲಿ 2 ಸಾವಿರದ 20 ಅಮೆರಿಕನ್ ಮುಸ್ಲಿಮರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು.

ಈ ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ,

1. ‘ಇಸ್ಲಾಮಿಕ್ ಉಮ್ಮಾ’ ಪ್ರಕಾರ ಪ್ರಪಂಚದಾದ್ಯಂತ ಮುಸ್ಲಿಮರು ಪರಸ್ಪರ ಬೆಂಬಲಕ್ಕೆ ಎದ್ದು ನಿಲ್ಲಬೇಕು. ಈ ಸಮೀಕ್ಷೆಯ ಅಂಕಿಅಂಶಗಳು “ಅಮೆರಿಕನ್ ಮುಸ್ಲಿಮರು ‘ಇಸ್ಲಾಮಿಕ್ ಉಮ್ಮಾ’ ಬೋಧನೆಗಳನ್ನು ನಂಬುತ್ತಾರೆ” ಎಂದು ತೋರಿಸುತ್ತವೆ.

2. ಕೇವಲ ಶೇ. 31.9 ರಷ್ಟು ಅಮೇರಿಕನ್ ಮುಸಲ್ಮಾನರು ತಮ್ಮ ರಾಷ್ಟ್ರಾಧ್ಯಕ್ಷ ಜೋ ಬೈಡೆನ್ ಅವರನ್ನು ಬೆಂಬಲಿಸುತ್ತಾರೆ, ಆದರೆ ಶೇ.44 ರಷ್ಟು ಮುಸ್ಲಿಮರು ಪ್ಯಾಲೇಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನು ಬೆಂಬಲಿಸುತ್ತಾರೆ.

3. ನೀತಿ ಪ್ರಶ್ನೆಗಳ ಕುರಿತು ಅಮೇರಿಕನ್ ಮುಸ್ಲಿಮರ ಅಭಿಪ್ರಾಯ ಪಡೆದಾಗ, ಕೇವಲ ಶೇ. 46.8 ರಷ್ಟು ಮುಸ್ಲಿಮರು, ಹಮಾಸ್ ನಾಶಮಾಡಲು ಇಸ್ರೇಲ್ ಗಾಜಾದ ಮೇಲೆ ನಡೆಸಿದ ದಾಳಿ ಯೋಗ್ಯವೇ ಆಗಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಪಾದಕರ ನಿಲುವು

ಇಸ್ರೇಲ್‌ನ ದಾಳಿಯ ಮೇಲೆ ಟೀಕೆ ಮಾಡುವವರು ಹಮಾಸ್ ಮಾಡುತ್ತಿರುವ ನರಮೇಧದ ಚಕಾರವನ್ನೂ ಎತ್ತುವುದಿಲ್ಲ ಎಂಬುದನ್ನು ಗಮನಿಸಿರಿ !

ಭಾರತದಲ್ಲಿಯೂ ಇಂತಹ ಸಮೀಕ್ಷೆ ನಡೆದರೆ ಇದೇ ಚಿತ್ರಣ ಕಾಣಿಸುತ್ತದೆ, ಎನ್ನುವುದೂ ಅಷ್ಟೇ ಸತ್ಯ!