Gaza Hospital Bulldozer : ಗಾಝಾದ ಅತಿದೊಡ್ಡ ‘ಅಲ್ ಶಿಫಾ’ ಆಸ್ಪತ್ರೆಯನ್ನು ಕೆಡವಲು ಇಸ್ರೇಲ್ ಬುಲ್ಡೋಜರ್ ಉಪಯೋಗ !

ತೆಲ್ ಅವೀವ (ಇಸ್ರೇಲ್) – ಗಾಝಾ ಪಟ್ಟಿಯಲ್ಲಿರುವ ಅತಿದೊಡ್ಡ ಅಲ್ ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲಿ ಸೇನೆಯು ತನ್ನ ನಿಯಂತ್ರಣಕ್ಕೆ ಪಡೆದುಕೊಂಡ ಬಳಿಕ ಅದನ್ನು ನೆಲಸಮಗೊಳಿಸಲು ಸಿದ್ಧಗೊಳಿಸಲಾಗಿದೆ. ಇದಕ್ಕಾಗಿ ಬುಲ್ಡೋಜರ್‌ಗಳನ್ನು ಕರೆಸಲಾಗಿದೆ. ಅಲ್ ಶಿಫಾ ಆಸ್ಪತ್ರೆಯ ಅಡಿಯಲ್ಲಿ ಸುರಂಗಗಳಿದ್ದು, ಅಲ್ಲಿ ಹಮಾಸ್ ನೆಲೆಗಳು ಇವೆಯೆಂದು ಅಮೇರಿಕಾ ಮತ್ತು ಇಸ್ರೇಲ್ ಹೇಳಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ದಾಸ್ತಾನು ಪತ್ತೆಯಾಗಿದೆ. ಹಾಗೆಯೇ ಇಲ್ಲಿ ಹಮಾಸ ಭಯೋತ್ಪಾದಕರೊಂದಿಗೆ ಚಕಮಕಿ ನಡೆದಿದೆ. ಇದರಲ್ಲಿ 5 ಭಯೋತ್ಪಾದಕರು ಹತರಾಗಿದ್ದಾರೆ. ಸಧ್ಯಕ್ಕೆ ಈ ಆಸ್ಪತ್ರೆಯಲ್ಲಿ ನವಜಾತ ಶಿಶುಗಳು ಸೇರಿದಂತೆ 2 ಸಾವಿರ 300 ರೋಗಿಗಳು, ವೈದ್ಯರು, ದಾದಿಯರು ಮತ್ತು ನಾಗರಿಕರಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿಕೊಂಡಿದೆ.

ಪ್ಯಾಲೆಸ್ಟೈನ್‌ನಿಂದ ಭಾರತಕ್ಕೆ ಸಹಾಯಕ್ಕಾಗಿ ಕರೆ !

ಮತ್ತೊಂದೆಡೆ, ಪ್ಯಾಲೆಸ್ಟೈನ್ ಈಗ ಭಾರತದ ಬಳಿ ಸಹಾಯಕ್ಕಾಗಿ ಕರೆ ನೀಡಿದೆ. ಭಾರತದಲ್ಲಿರುವ ಪ್ಯಾಲೆಸ್ಟೈನ್ ರಾಯಭಾರಿ ಅದನಾನ್ ಅಬು ಅವರು ಮಾತನಾಡಿ, ಭಾರತವು ಒಂದು ಶಕ್ತಿಶಾಲಿ ರಾಷ್ಟ್ರವಾಗಿದೆ. ಅದು ಇಸ್ರೇಲ್ ಅನ್ನು ತಡೆಯಬಲ್ಲದು ಎಂದು ಹೇಳಿದರು. ಮ. ಗಾಂಧಿಯವರ ನಂತರ, ಭಾರತವು ಯಾವಾಗಲೂ ಪ್ಯಾಲೆಸ್ಟೈನ್ ಸಮಸ್ಯೆಯನ್ನು ಅರ್ಥಮಾಡಿಕೊಂಡಿದೆ ಮತ್ತು ಶಾಂತಿ ಸ್ಥಾಪನೆಗೆ ಯಾವಾಗಲೂ ಆದ್ಯತೆಯನ್ನು ನೀಡಿದೆ ಎಂದು ಹೇಳಿದ್ದಾರೆ.