ಕಾಶ್ಮೀರದ ನಿರಪರಾಧಿ ಹಿಂದೂಗಳ ಬಗ್ಗೆ ಸೋನಿಯಾ ಗಾಂಧಿ ಯಾವಾಗ ಮಾತನಾಡುತ್ತಾರೆ ?

೧. ಕಾಶ್ಮೀರದ ನಿರಪರಾಧಿ ಹಿಂದೂಗಳ ಬಗ್ಗೆ ಸೋನಿಯಾ ಗಾಂಧಿ ಯಾವಾಗ ಮಾತನಾಡುತ್ತಾರೆ ?

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇಸ್ರೈಲ್‌ ಮತ್ತು ಹಮಾಸ್‌ ಯುದ್ಧದ ಬಗ್ಗೆ ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ‘ಇಸ್ರೈಲ್‌ ನಿರಪರಾಧಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ’ ಎಂದು ಟೀಕಿಸಿದ್ದಾರೆ.

೨. ಜಾತ್ಯತೀತರು ಈ ವಾಸ್ತವದ ಬಗ್ಗೆ ಯಾವಾಗ ಮಾತನಾಡುತ್ತಾರೆ ?

ಕಳ್ಳತನ, ದರೋಡೆ, ಅತ್ಯಾಚಾರ ಇತ್ಯಾದಿ ಅಪರಾಧಗಳಲ್ಲಿ ನಾವು (ಮುಸಲ್ಮಾನರು) ಮೊದಲ ಸ್ಥಾನದಲ್ಲಿದ್ದೇವೆ. ಜೈಲಿಗೆ ಹೋಗುವುದರಲ್ಲೂ ನಾವು ಮೊದಲ ಸ್ಥಾನದಲ್ಲಿದ್ದೇವೆ ಎಂದು ‘ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್‌ ಅಸ್ಸಾಂ’ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಮೌಲಾನಾ ಬದ್ರುದ್ದೀನ್‌ ಅಜ್ಮಲ್‌ ಹೇಳಿದ್ದಾರೆ.

೩. ಹಮಾಸ್‌ ನಾಯಕನ ಮಗನ ಪ್ರಶ್ನೆಗೆ ಮುಸಲ್ಮಾನರಲ್ಲಿ ಉತ್ತರವಿದೆಯೇ ?

ಇತರ ಧರ್ಮೀಯರೊಂದಿಗೆ ಸಹಬಾಳ್ವೆ ನಡೆಸಲು ಹಿಂದೂಗಳಿಗೆ ಕ್ರೈಸ್ತರು ಅಥವಾ ಯಹೂದಿಗಳಿಗೂ ಯಾರಿಗೂ ತೊಂದರೆಯಿಲ್ಲ; ಆದರೂ ಪ್ರತಿ ಬಾರಿ ಇಸ್ಲಾಂವಾದಿಗಳಿಂದಲೇ ಏಕೆ ಹಿಂಸಾಚಾರ ನಡೆಯುತ್ತದೆ ? ಎಂದು ಹಮಾಸ್‌ನ ಸಹಸಂಸ್ಥಾಪಕನ ಮಗ ಮೊಸಾಬ್‌ ಪ್ರಶ್ನಿಸಿದ್ದಾನೆ.

೪. ರಾಜಕಾರಣಿಗಳು ಜನರಿಗೆ ನೈತಿಕತೆ ಕಲಿಸದ ಪರಿಣಾಮ !

ದೆಹಲಿಯಲ್ಲಿ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಪಿಯೂಷ್‌ ಪಾಲ್‌ ಅವರಿಗೆ ಯಾರೂ ಸಹಾಯ ಮಾಡದ ಕಾರಣ ಅವರು ಸಾವನ್ನಪ್ಪಿದ್ದಾರೆ. ಪಿಯೂಷ್‌ ಸಹಾಯ ಕೇಳಿದಾಗ, ಜನರು ಅವನ ವೀಡಿಯೊವನ್ನು ಮಾಡುತ್ತಿದ್ದರು. ಈ ವೇಳೆಗೆ ಕಳ್ಳರು ಅವನ ಸಂಚಾರಿವಾಣಿ ಮತ್ತು ಲ್ಯಾಪ್‌ಟಾಪ್‌ ಅನ್ನು ಕದ್ದೊಯ್ದಿದ್ದರು.

೫. ಭಾರತದ ಜಾತ್ಯತೀತರು ಈ ಬಗ್ಗೆ ಏಕೆ ಮೌನವಾಗಿದ್ದಾರೆ ?

ಭಾರತದಲ್ಲಿ ಮಸೀದಿಗಳಿಂದ ಸಂಗ್ರಹಿಸಿದ ಹಣವನ್ನು ಜಿಹಾದಿ ಭಯೋತ್ಪಾದನೆಗೆ ಬಳಸಲಾಗುತ್ತದೆ ಎಂದು ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳುವ ಎಫ್‌.ಎ.ಟಿ.ಎಫ್. ತನ್ನ ವರದಿಯಲ್ಲಿ ಹೇಳಿದೆ.

೬. ಭಾರತದಲ್ಲಿನ ಎಷ್ಟು ಹಿಂದೂ ಆಟಗಾರರು ಹಿಂದೂಗಳ ಮೇಲಿನ ಅತ್ಯಾಚಾರಗಳ ಕುರಿತು ಮಾತನಾಡುತ್ತಾರೆ ?

‘ಗಾಜಾದ ಮೇಲಿನ ಆಕ್ರಮಣದಲ್ಲಿ ಸಾವನ್ನಪ್ಪಿದ ಮಕ್ಕಳ ಕುರಿತು ಜಗತ್ತು ಮೌನವಾಗಿದೆ’, ಎಂಬ ಭಾರತದ ಮಾಜಿ ಕ್ರಿಕೆಟ್‌ ಆಟಗಾರ ಇರ್ಫಾನ್‌ ಪಠಾಣ್‌ ಇವರ ಟ್ವೀಟ್‌ಗೆ ಪಾಕಿಸ್ತಾನದ ಮಾಜಿ ಕ್ರಿಕೆಟ್‌ ಆಟಗಾರ ಹಿಂದೂ ಧರ್ಮೀಯ ದಾನೀಶ ಕನೇರಿಯಾ ಇವರು ಪಠಾಣ್‌ ಇವರು ಪಾಕಿಸ್ತಾನದ ಹಿಂದೂಗಳ ಕುರಿತು ಮಾತನಾಡಬೇಕೆಂದು ಕರೆ ನೀಡಿದ್ದಾರೆ.

೭. ಕೇಂದ್ರ ಸರಕಾರವೂ ಇಂತಹ ನಿರ್ಣಯ ಕೈಗೊಳ್ಳಬೇಕು !

ಸಂಸ್ಕೃತ ಭಾಷೆ ಮತ್ತು ವೇದಗಳಿಗೆ ಉತ್ತೇಜನ ನೀಡಲು, ಗೋವಾ ಸರಕಾರವು ಸಾಂಪ್ರದಾಯಿಕ ನಿವಾಸಿ ಗುರುಕುಲದ ಪದ್ದತಿಯನ್ನು ಅನುಸರಿಸಿ ನಡೆಸಲಾಗುವ ಸಂಸ್ಕೃತ ಪಾಠಶಾಲೆ ಮತ್ತು ಕೇಂದ್ರಗಳಿಗೆ ಆರ್ಥಿಕ ಅನುದಾನವನ್ನು ನೀಡಲಿದೆ.