ನಮಾಜು ಪಠಣಕ್ಕೆ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಕೊಠಡಿಯ ಬೇಡಿಕೆ ಮತ್ತು ಗೌಹಾತಿ ಉಚ್ಚನ್ಯಾಯಾಲಯದ ನಕಾರ !

೧. ವಿಮಾನ ನಿಲ್ದಾಣದಲ್ಲಿ ನಮಾಜಪಠಣಕ್ಕಾಗಿ ಪ್ರತ್ಯೇಕ ಕೊಠಡಿಗಾಗಿ ಗೌಹಾತಿ ಉಚ್ಚನ್ಯಾಯಾಲಯದಲ್ಲಿ ಮನವಿ

‘’ವಿಮಾನ ನಿಲ್ದಾಣ ಪ್ರಾಧಿಕಾರವು ನಮಾಜ ಪಠಣಕ್ಕಾಗಿ ವಿಮಾನ ನಿಲ್ದಾಣದಲ್ಲಿ ಒಂದು ಪ್ರತ್ಯೇಕ ಕೊಠಡಿಯನ್ನು ಒದಗಿಸ ಬೇಕೆಂಬ ಬೇಡಿಕೆಗಾಗಿ ಮತಾಂಧ ರಾಣಾ ಸೈದುರ ಝಮನ ಇವನು ಗೌಹಾತಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದನು. ಅದರಲ್ಲಿ ಕೇಂದ್ರ ಸರಕಾರ, ಆ ಇಲಾಖೆಯ ಸಚಿವಾಲಯ ಮತ್ತು ವಿಮಾನ ನಿಲ್ದಾಣಗಳ ವಿವಿಧ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.ಅವನ ಅಭಿಪ್ರಾಯದಂತೆ, ವಿಮಾನ ನಿಲ್ದಾಣದಲ್ಲಿ ಉಪಾಹಾರ ಗೃಹಗಳು, ಆಹಾರಪದಾರ್ಥಗಳ ಮಳಿಗೆಗಳು, ‘ಸ್ಪಾ’ ಸೆಂಟರ್‌ (ಮಸಾಜ್‌ ಸೆಂಟರ್‌), ‘ಸ್ಮೋಕಿಂಗ್‌ ಝೋನ್’ (ಧೂಮಪಾನ ಪ್ರದೇಶ) ಇವುಗಳ ವ್ಯವಸ್ಥೆಯಿದೆ. ಅದೇ ರೀತಿ ಮುಸಲ್ಮಾನರಿಗೆ ನಮಾಜಪಠಣ ಮಾಡಲು ಪ್ರತ್ಯೇಕ ಕೊಠಡಿಯನ್ನು ಒದಗಿಸಬೇಕು ಎಂದು ಹೇಳಲಾಗಿತ್ತು.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೨. ನಮಾಜಪಠಣಕ್ಕಾಗಿ ಪ್ರತ್ಯೇಕ ಸ್ಥಳ ನೀಡಲು ನ್ಯಾಯಾಲಯದ ನಕಾರ

ಮಾನ್ಯ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯ ಮೂರ್ತಿ ಸುಶ್ಮಿತಾ ಖೋಂಡ ಅವರ ಮುಂದೆ ಈ ಅರ್ಜಿಯ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ, ‘‘ಧೂಮಪಾನ ಮಾಡುವವರಿಂದ ಇತರ ಪ್ರಯಾಣಿಕರ ಆರೋಗ್ಯಕ್ಕೆ ಅಪಾಯವುಂಟಾಗಬಾರದೆಂದು ‘ಧೂಮಪಾನ ವಲಯ’ವನ್ನು ಇಡಲಾಗಿದೆ. ಸ್ಪಾಗಳು, ಉಪಾ ಹಾರಗೃಹಗಳು, ಆಹಾರ ಪದಾರ್ಥಗಳ ಮಳಿಗೆಗಳಿಂದ ಸರಕಾರಕ್ಕೆ ಆದಾಯ ಬರುತ್ತದೆ. ನಮಾಜದಿಂದ ಸರಕಾರದ ಆರ್ಥಿಕತೆಯಲ್ಲಿ ಯಾವುದೇ ವ್ಯತ್ಯಾಸ ವಾಗುವುದಿಲ್ಲ. ನೀವು ಪ್ರಾರ್ಥನಾ ಸ್ಥಳಕ್ಕಾಗಿ ಪ್ರತ್ಯೇಕ ಸ್ಥಳವನ್ನು ಕೇಳುತ್ತೀರಿ, ಆದರೆ ಸಂವಿಧಾನದ ಕಲಂ ೨೫ ರ ಅಡಿಯಲ್ಲಿ ನಿಮಗೆ ಅಂತಹ ಅಧಿಕಾರ ಇದೆಯೇ ? ಯಾವುದೋ ಒಂದು ವಿಮಾನ ನಿಲ್ದಾಣದಲ್ಲಿ ಅಥವಾ ಕಂಪನಿಯಲ್ಲಿ ಪ್ರಾರ್ಥನಾ ಸ್ಥಳವನ್ನು ಒದಗಿಸಿ ಕೊಟ್ಟಿದ್ದಾರೆಂದರೆ ಇದರರ್ಥ ‘ಪ್ರತಿಯೊಂದು ಸರಕಾರಿ, ಅರೆ-ಸರಕಾರಿ ಮತ್ತು ಸ್ಥಳೀಯ ಸ್ವತಂತ್ರ ಸಂಸ್ಥೆಗಳಲ್ಲಿ, ಮುಸಲ್ಮಾನರಿಗೆ ನಮಾಜಪಠಣಕ್ಕಾಗಿ ಸ್ಥಳವನ್ನು ನೀಡಬೇಕು’, ಎಂದು ಎಲ್ಲಿ ಹೇಳಲಾಗಿದೆ ? ಅಲ್ಲದೆ, ಭಾರತವು ಜಾತ್ಯತೀತ ರಾಷ್ಟ್ರ ವಾಗಿರುವಾಗ, ನಿಮಗಾಗಿ ಈ ವಿಶೇಷ ಸೌಲಭ್ಯವನ್ನು ಏಕೆ ಕೊಡಬೇಕು ?’’ ಎಂದು ಅರ್ಜಿದಾರರಿಗೆ ಕೇಳಿ ದಾಗ, ನ್ಯಾಯಾಲಯಕ್ಕೆ ಉತ್ತರಿಸಲು ಅರ್ಜಿದಾರರಿಗೆ ಸಾಧ್ಯವಾಗಲಿಲ್ಲ. ನ್ಯಾಯಾಲಯವು ಮುಂದುವರಿದು, ‘ನಿಮಗಾಗಿ ಬಹಳಷ್ಟು ಕಡೆ ಮಸೀದಿಗಳನ್ನು ನಿರ್ಮಿಸಲಾಗಿದೆ. ಅಲ್ಲಿಗೆ ಹೋಗಿ ನಮಾಜಪಠಣ ಮಾಡಿರಿ ಮತ್ತು ನೀವು ಏನು ಪ್ರಾರ್ಥಿಸಬೇಕೆಂದು ಬಯಸುತ್ತೀರೋ ಅದನ್ನು ಅಲ್ಲಿ ಪ್ರಾರ್ಥಿಸಿರಿ’, ಎಂದು ಹೇಳಿತು.

ಈ ಪ್ರಕರಣದಲ್ಲಿ ಗೌಹಾತಿ ನ್ಯಾಯಾಲಯವು ‘ಕಾರಣ ತೋರಿಸಿ’ ಎಂಬ ನೋಟಿಸ್‌ ತೆಗೆಯಲೂ ನಿರಾಕರಿಸಿತು. ಇದಕ್ಕೆ ವಿರುದ್ಧ ಅರ್ಜಿದಾರರಿಗೆ, ‘ಇಂತಹ ಯಾವ ಮೂಲ ಭೂತ ಅಧಿಕಾರವು ನಿಮಗೆ, ಅಂದರೆ ಒಂದು ಪಂಥ ದವರಿಗೆ ಪ್ರಾರ್ಥನೆ ಮಾಡಲು ವಿಮಾನ ನಿಲ್ದಾಣದಲ್ಲಿ ಸ್ವತಂತ್ರ ಕೊಠಡಿಯನ್ನು ನೀಡುವಂತೆ ಹೇಳುತ್ತದೆ ?’’ ಎಂದು ಕೇಳುತ್ತಾ, ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿತು. ಅರ್ಜಿದಾರರು ಸ್ವತಃ ಯುಕ್ತಿವಾದವನ್ನು ಮಾಡಿದ್ದರು. ಅವರು ನ್ಯಾಯಾಲಯದಿಂದ ೨ ವಾರಗಳ ಕಾಲಾವಕಾಶವನ್ನು ಕೋರಿದಾಗ, ನ್ಯಾಯಾಲ ಯವು ಅದನ್ನು ನಿರಾಕರಿಸಿ, ಅರ್ಜಿದಾರರಿಗೆ ಅರ್ಜಿಯನ್ನು ಹಿಂಪಡೆಯುವಂತೆ ಸೂಚಿಸಿತು.

೩. ಪ್ರಜಾಪ್ರಭುತ್ವದ ೪ ಸ್ತಂಭಗಳಿಂದ ಹೆಚ್ಚು ಲಾಭ ಪಡೆಯುವವರು ಮತಾಂಧರೇ !

ಈ ಸುದ್ದಿ ಮಾಧ್ಯಮಗಳ ಮುಂದೆ ಬಂದಾಗ ಜನರು ಈ ಪ್ರಾರ್ಥನಾ ಸ್ಥಳದ ಬೇಡಿಕೆಗೆ ವಿರೋಧವನ್ನು ವ್ಯಕ್ತಪಡಿಸಿದರು ಮತ್ತು ವಿವಿಧ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರು. ಇದರಿಂದ ಒಂದು ವಿಷಯ ಗಮನಕ್ಕೆ ಬರುವುದೇನೆಂದರೆ, ಪ್ರಜಾಪ್ರಭುತ್ವದ ೪ ಸ್ತಂಭಗಳ ಹೆಚ್ಚಿನ ಲಾಭವನ್ನು ಮತಾಂಧರೇ ತೆಗೆದುಕೊಳ್ಳುತ್ತಾರೆ. ಬೇರೆ ಯಾರೂ ಅಲ್ಪಸಂಖ್ಯಾತರೇ ಇಲ್ಲವೇನೋ ಎಂಬಂತೆ, ಅಲ್ಪಸಂಖ್ಯಾತ ಸಚಿವರು ಸಹ ಯಾವತ್ತೂ ಮುಸಲ್ಮಾನರೇ ಆಗಿರುತ್ತಾರೆ. ಅಲ್ಲಿನ ಅಧಿಕಾರಿಗಳು ಮತ್ತು ನೌಕರರು ಕೂಡ ಮುಸಲ್ಮಾನರೇ ಆಗಿರುತ್ತಾರೆ. ಮುಸಲ್ಮಾನ ಅಥವಾ ಕ್ರೈಸ್ತ ರಾಷ್ಟ್ರದಲ್ಲಿ ಹಿಂದೂಗಳನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಇತ್ತೀಚೆಗೆ ಆನಂದ್‌ ರಂಗನಾಥನ್‌ ಅವರು ‘ಹಿಂದೂಜ್‌ ಇನ್‌ ಹಿಂದೂರಾಷ್ಟ್ರ’ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ತಮ್ಮ ತಾಯ್ನಾಡಿನಲ್ಲಿಯೇ ಹಿಂದೂಗಳು ‘ಎಂಟನೇ ದರ್ಜೆಯ ನಾಗರಿಕ’ ಸ್ಥಾನಮಾನವನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ಇದೆಲ್ಲವನ್ನೂ ಬದಲಾಯಿಸಲು, ಹಿಂದೂಗಳ ಪರಿಣಾಮಕಾರಿ ಸಂಘಟನೆ ಮತ್ತು ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಪ್ರಯತ್ನಿಸುವುದು ಕಾಲದ ಆವಶ್ಯಕತೆಯಾಗಿದೆ.’

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚನ್ಯಾಯಾಲಯ (೧.೧೦.೨೦೨೩)