ಹಿಂದೂ ಪಕ್ಷದ ವಕೀಲರಾದ ಪೂ. ಹರಿಶಂಕರ್ ಜೈನ್ ಅವರ ಆಕ್ಷೇಪಣೆಯ ನಂತರ ಅಲಹಾಬಾದ ಉಚ್ಚನ್ಯಾಯಾಲಯದ ಆದೇಶದಲ್ಲಿ ಉಲ್ಲೇಖ
ಪ್ರಯಾಗರಾಜ (ಉತ್ತರ ಪ್ರದೇಶ) – ಸಂಭಲನಲ್ಲಿರುವ ಶಾಹಿ ಜಾಮಾ ಮಸೀದಿ ಹಿಂದಿನ ಶ್ರೀ ಹರಿಹರ ದೇವಸ್ಥಾನವಾಗಿದ್ದ ಪ್ರಕರಣದಲ್ಲಿ, ಅಲಹಾಬಾದ್ ಉಚ್ಚನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮಸೀದಿಗೆ ಭೇಟಿ ನೀಡಿ ರಮಜಾನ್‌ಗೂ ಮೊದಲು ಬಣ್ಣ ಬಳಿಯುವುದು ಎಷ್ಟು ಅಗತ್ಯವಿದೆ, ಎಂಬುದು ನೋಡುವಂತೆ ಆದೇಶಿಸಿದೆ; ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿ, ಅದು ಅಗತ್ಯವಿಲ್ಲ ಎಂದು ಹೇಳಿತು. ಹಿಂದೂ ಪಕ್ಷದ ವಕೀಲರಾದ ಪೂ. ಹರಿಶಂಕರ್ ಜೈನ್ ಅವರು, “ಬಣ್ಣ ಬಳಿಯುವ ನಿಮಿತ್ತದಿಂದ ಮಸೀದಿಯಲ್ಲಿರುವ ಹಿಂದೂ ಚಿಹ್ನೆಗಳನ್ನು ಅಳಿಸಿಹಾಕಬಹುದು”. ನ್ಯಾಯಾಲಯವು ಈ ವಾಸ್ತುವನ್ನು ಕೇವಲ ಮಸೀದಿ ಎಂದು ಪರಿಗಣಿಸಬಾರದು’, ಎಂದು ಹೇಳಿದರು. ನಂತರ ನ್ಯಾಯಾಲಯವು ಆದೇಶದಲ್ಲಿ ‘ತಥಾಕಥಿತ ಮಸೀದಿ’ ಎಂದು ಬರೆಯಿತು. ಹಾಗೂ “ಹಿಂದೂ ಚಿಹ್ನೆಗಳಿಗೆ ಅಪಾಯ ಆಗುವುದಿಲ್ಲ” ಎಂದೂ ಅವರು ಭರವಸೆ ನೀಡಿದರು.
ಪುರಾತತ್ವ ಇಲಾಖೆಯ ತಂಡವು ಇಂದು, ಫೆಬ್ರವರಿ 28 ರಂದು ಮಸೀದಿಯನ್ನು ಪರಿಶೀಲಿಸಲಿದ್ದು, ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲಿದೆ. ಮಸೀದಿಯ ನಿರ್ವಹಣಾ ಸಮಿತಿಯ ಅರ್ಜಿಯ ಮೇರೆಗೆ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿತು. ಮಾರ್ಚ್ 1 ರಿಂದ ಪ್ರಾರಂಭವಾಗುವ ರಮಜಾನ್ ತಿಂಗಳಿಗೆ ಮಸೀದಿಯಲ್ಲಿ ಬಣ್ಣ ಬಳಿಯುವುದು ಮತ್ತು ಇತರ ಕೆಲಸಗಳನ್ನು ಮಾಡಲು ಸಮಿತಿಯು ಬಯಸಿತು; ಆದರೆ ಪೊಲೀಸರು ಮತ್ತು ಪುರಾತತ್ವ ಇಲಾಖೆ ಇದನ್ನು ವಿರೋಧಿಸಿದ್ದರು.
ನ್ಯಾಯಾಲಯವು ತನ್ನ ಆದೇಶದಲ್ಲಿ, ರಮಜಾನ್ ತಿಂಗಳಿನಲ್ಲಿ ಧಾರ್ಮಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಎರಡೂ ಪಕ್ಷಗಳ ಹಿತಾಸಕ್ತಿಗಳನ್ನು ರಕ್ಷಿಸಬೇಕು ಎಂದು ತಿಳಿಸಿದೆ.