ಒಬ್ಬ ಮಹಿಳೆಯನ್ನು ‘ಕಾನೂನುಬಾಹಿರ ಹೆಂಡತಿ’ ಎಂದು ಕರೆಯುವುದು ಸಂವಿಧಾನದ ಉಲ್ಲಂಘನೆ ! – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯವು ಮುಂಬಯಿ ಉಚ್ಚ ನ್ಯಾಯಾಲಯದ ಹೇಳಿಕೆಗೆ ಆಕ್ಷೇಪ !

ನವದೆಹಲಿ – ಸಂವಿಧಾನದ ಕಲಂ ೨೧ ರ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಗೌರವದಿಂದ ಬದುಕುವ ಮೂಲಭೂತ ಹಕ್ಕಿದೆ. ಒಬ್ಬ ಮಹಿಳೆಯನ್ನು ‘ಕಾನೂನುಬಾಹಿರ ಹೆಂಡತಿ’ ಅಥವಾ ‘ನಂಬಿಕೆ ದ್ರೋಹಿ ಪ್ರಿಯತಮೆ’ ಎಂದು ಕರೆಯುವುದು ಭಾರತೀಯ ಸಂವಿಧಾನದ ಕಲಂ ೨೧ ರ ಅಡಿಯಲ್ಲಿ ಆ ಮಹಿಳೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇಂತಹ ಪದಗಳನ್ನು ಬಳಸುವುದು ಸಂವಿಧಾನದ ನೈತಿಕತೆ ಮತ್ತು ಆದರ್ಶಗಳಿಗೆ ವಿರುದ್ಧವಾಗಿದೆ. ಮದುವೆ ರದ್ದು ಪಡಿಸುವ ಮಹಿಳೆಯನ್ನು ‘ಕಾನೂನುಬಾಹಿರ ಹೆಂಡತಿ’ ಎಂದು ಕರೆಯುವುದು ಅತ್ಯಂತ ತಪ್ಪು. ಇದು ಆಕೆಯ ಘನತೆಗೆ ಧಕ್ಕೆ ತರುತ್ತದೆ. ವಿಚ್ಛೇದನ ಪ್ರಕರಣಗಳಲ್ಲಿ ಮುಂಬಯಿ ಉಚ್ಚ ನ್ಯಾಯಾಲಯವು ಇಂತಹ ವಿಶೇಷಣಗಳನ್ನು ಬಳಸಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಪೀಠವು ಗಮನಿಸಿದೆ.