Allahabad High Court Order : ಉಚ್ಚ ನ್ಯಾಯಾಲಯದಿಂದ ಸಂಭಲ್‌ನ ಶಾಹಿ ಮಸೀದಿಯ ಉಲ್ಲೇಖ ಈಗ ‘ವಿವಾದಾತ್ಮಕ ಕಟ್ಟಡ’ ಆಗಲಿದೆ!

ಪ್ರಯಾಗರಾಜ (ಉತ್ತರ ಪ್ರದೇಶ) – ಸಂಭಲ್‌ನ ಶ್ರೀ ಹರಿಹರ ದೇವಸ್ಥಾನದ ಮೇಲೆ ನಿರ್ಮಿಸಲಾದ ಶಾಹಿ ಜಾಮಾ ಮಸೀದಿಯ ಪ್ರಕರಣದಲ್ಲಿ, ಹಿಂದೂ ಪಕ್ಷದ ವಕೀಲ (ಪೂ.) ಹರಿ ಶಂಕರ್ ಜೈನ್ ಅವರು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರಿಗೆ ತಮ್ಮ ಆದೇಶದಲ್ಲಿ ಮಸೀದಿಯ ಬದಲು ‘ವಿವಾದಿತ ಕಟ್ಟಡ’ ಎಂಬ ಪದವನ್ನು ಬಳಸುವಂತೆ ವಿನಂತಿಸಿದರು. ನ್ಯಾಯಾಲಯವು ಈ ವಿನಂತಿಯನ್ನು ಒಪ್ಪಿಕೊಂಡು ನ್ಯಾಯಾಲಯದ ಸಿಬ್ಬಂದಿಗೆ ‘ಮಸೀದಿ’ ಬದಲಿಗೆ ‘ವಿವಾದಿತ ಕಟ್ಟಡ’ ಎಂಬ ಪದವನ್ನು ಬಳಸಲು ಆದೇಶಿಸಿತು. ಇದಕ್ಕೂ ಮೊದಲು, ಪೂ. ಜೈನ್ ಅವರ ಕೋರಿಕೆಯ ಮೇರೆಗೆ ಹೈಕೋರ್ಟ್ ಲಿಖಿತ ಆದೇಶದಲ್ಲಿ ಮಸೀದಿಯ ಬದಲು ‘ಕಥಿತ ಮಸೀದಿ’ ಎಂಬ ಪದವನ್ನು ಬಳಸಿತ್ತು.

ಸಂಭಲ್‌ನ ಈ ವಿವಾದಿತ ಕಟ್ಟಡವನ್ನು ರಂಜಾನ್ ಸಮಯದಲ್ಲಿ ಬಣ್ಣ ಬಳಿಯಲು ಅನುಮತಿ ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವರದಿಯನ್ನು ಉಲ್ಲೇಖಿಸಿ, ಹೈಕೋರ್ಟ್ ಕಟ್ಟಡವನ್ನು ಸ್ವಚ್ಛಗೊಳಿಸಲು ಮಾತ್ರ ಅನುಮತಿ ನೀಡಿತ್ತು.