ಆರೋಪಿಗಳ ಬಂಧನ
ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ‘ಹೋಂ ಸ್ಟೇ’ ಉಪಹಾರ ಗೃಹದಲ್ಲಿ ಓರ್ವ ೨೫ ವಯಸ್ಸಿನ ಮಹಿಳಾ ಸಿಬ್ಬಂದಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ. ಇದರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಮಹಿಳೆ ಆಕೆಯನ್ನು ಬಿಟ್ಟುಬಿಡುವುದಕ್ಕೆ ವಿನಂತಿಸುತ್ತಿರುವುದು ಕಾಣುತ್ತಿದೆ. ಪೊಲೀಸರು ಈ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ ಆರೋಪಿಗಳು ಆಕೆಯನ್ನು ಬಲವಂತವಾಗಿ ಕೋಣೆಗೆ ಕರೆದುಕೊಂಡು ಹೋದರು ಮತ್ತು ಥಳಿಸಿದರು.
(ಸೌಜನ್ಯ – Oneindia Hindi | वनइंडिया हिंदी)
ಅದರಲ್ಲಿ ಆಕೆಯ ಸ್ನೇಹಿತರು ಕೂಡ ಸೇರಿದ್ದರು, ಅವರೇ ಇತರ ನಾಲ್ಕು ಜನರನ್ನು ಕರೆತಂದಿದ್ದರು. ಅವರು ಈ ಮಹಿಳೆಗೆ ಸಾರಾಯಿ ಕೂಡಿಸಿ ಆಕೆಯ ಆಕ್ಷೇಪಾರ್ಯ ಸ್ಥಿತಿಯಲ್ಲಿ ವಿಡಿಯೋ ತಯಾರಿಸಿದರು. ಅದರ ಆಧಾರವಾಗಿ ಅವರು ಆಕೆಯನ್ನು ಬ್ಲಾಕ್ ಮೇಲ್ ಮಾಡುತಿದ್ದರು. ಅದರ ನಂತರ ಅವರು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು.
ಸಂಪಾದಕೀಯ ನಿಲುವುಇಂತಹ ಬಲತ್ಕಾರಿಗಳಿಗೆ ನಡು ಬೀದಿಯಲ್ಲಿ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಮಾಡಬೇಕಾಗಿರುವುದು ಕಾಲದ ಆವಶ್ಯಕತೆ ಆಗಿದೆ ! |