|
ವಾರಣಾಸಿ (ಉತ್ತರ ಪ್ರದೇಶ)- ‘ಕೇವಲ ಹಿಂದೂಹಿತದ ಬಗ್ಗೆ ಮಾತನಾಡುವವರಲ್ಲ, ಕಾರ್ಯ ಮಾಡುವವರು’ ಎಂಬ ಧೋರಣೆಯಂತೆ, ಹಿಂದೂ ರಾಷ್ಟ್ರ ಮತ್ತು ಹಿಂದೂಹಿತ , ಈ ಅಂಶಗಳ ಮೇಲೆ ಕಾರ್ಯ ಮಾಡುವ ಭರವಸೆ ನೀಡುವ ರಾಜಕೀಯ ಪಕ್ಷಗಳು ಮತ್ತು ಪ್ರಾಮಾಣಿಕ ಜನಪ್ರತಿನಿಧಿಗಳಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ಹಿಂದೂಗಳ ಬೆಂಬಲ ಸಿಗುತ್ತದೆ ಎಂದು ಇಲ್ಲಿ ಠರಾವನ್ನು ಇಲ್ಲಿ ನವೆಂಬರ 4 ಮತ್ತು 5. ರಂದು ಆಯೋಜಿಸಲಾಗಿದ್ದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಅನುಮೋದಿಸಲಾಯಿತು. ಈ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಅಧಿವೇಶನದ ಬಳಿಕ ಇಲ್ಲಿನ ಪರಾಡಕರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ಈ ವೇಳೆ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯ ಸಮನ್ವಯಕ ಶ್ರೀ. ವಿಶ್ವನಾಥ ಕುಲಕರ್ಣಿ ಉಪಸ್ಥಿತರಿದ್ದರು.
ಸದ್ಗುರು(ಡಾ.) ಚಾರುದತ್ತ ಪಿಂಗಳೆಯವರು ಮಾತನ್ನು ಮುಂದುವರಿಸಿ, ಈ ಅಧಿವೇಶನದಲ್ಲಿ ನೇಪಾಳ, ಹಾಗೆಯೇ ಭಾರತದ ಉತ್ತರಪ್ರದೇಶ, ಬಿಹಾರ, ಒಡಿಶಾ, ದೆಹಲಿ, ಅಸ್ಸಾಂ ಮತ್ತು ಬಂಗಾಳ ಈ ರಾಜ್ಯಗಳ 51 ಸಂಸ್ಥೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ದೇವಾಲಯಗಳ ವಿಶ್ವಸ್ತರು, ಕೈಗಾರಿಕೋದ್ಯಮಿಗಳು ಮುಂತಾದ 210 ಜನರು ಹಾಜರಿದ್ದರು ಎಂದು ಹೇಳಿದರು. ಈ ಸಮಯದಲ್ಲಿ, ಭವಿಷ್ಯದಲ್ಲಿ ಹಿಂದೂಗಳ ಹಿತಕ್ಕಾಗಿ ರಾಜಕೀಯ ಪಕ್ಷಗಳು ಯಾವ ರೀತಿಯ ಕೆಲಸಗಳನ್ನು ಮಾಡುವುದು ಅಪೇಕ್ಷಿತವಿದೆಯೆಂದು ಚರ್ಚಿಸಲಾಯಿತು. ಇದರಲ್ಲಿ ಭಾರತ ಮತ್ತು ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು, ಲವ್ ಜಿಹಾದ್, ಮತಾಂತರ ಮತ್ತು ಗೋಹತ್ಯೆಯ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದು, ಹಲಾಲ್ ಪ್ರಮಾಣಪತ್ರವನ್ನು ನಿಷೇಧಿಸುವುದು, ದೇವಸ್ಥಾನಗಳ ಸರಕಾರೀಕರಣವನ್ನು ರದ್ದುಗೊಳಿಸುವುದು, ಧಾರ್ಮಿಕ ಸ್ಥಳಗಳ ಅಧಿನಿಯಮ ರದ್ದುಗೊಳಿಸುವುದು, ವಕ್ಫ್ ಬೋರ್ಡ್ ಕಾಯ್ದೆಯ ರದ್ದುಗೊಳಿಸುವುದು, ಜನಸಂಖ್ಯೆ ನಿಯಂತ್ರಣ ಕಾನೂನು ರಚಿಸುವುದು, ಕಾಶ್ಮೀರಿ ಹಿಂದೂಗಳ ಪುನರ್ವಸತಿ ನಿರ್ಮಿಸುವುದು ಇತ್ಯಾದಿಗಳ ಬಗ್ಗೆ ಹಿಂದುತ್ವನಿಷ್ಠರಿಂದ ರಾಜಕೀಯ ಪಕ್ಷಗಳಿಗೆ ಬೇಡಿಕೆ ಪತ್ರವನ್ನು ಸಿದ್ಧಗೊಳಿಸಲಾಯಿತು. ಈ ಬೇಡಿಕೆ ಪತ್ರವನ್ನು ರಾಜಕೀಯ ಪಕ್ಷಗಳ ಮುಂದೆ ಮಂಡಿಸಲಾಗುವುದು.
100ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಗುರಿ! – ಚೇತನ ರಾಜಹಂಸ
ಶ್ರೀ. ಚೇತನ ರಾಜಹಂಸರು ಮಾತನಾಡುತ್ತಾ, ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆ ಮತ್ತು ಸಂವರ್ಧನೆಗಾಗಿ 100 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಗುರಿ ಹೊಂದಲಾಗಿದೆಯೆಂದು ಹೇಳಿದರು.