ನವ ದೆಹಲಿ : ಸದ್ಯ ಶ್ರೀರಾಮನ ಬಗ್ಗೆ ಫೇಸ್‌ಬುಕ್ ನಲ್ಲಿ ಪ್ರಸಾರವಾಗಿರುವ ಸಂದೇಶದಲ್ಲಿ ‘ಶ್ರೀರಾಮನು ರಾವಣನನ್ನು ವಿಜಯ ದಶಮಿಯಂದು ವಧಿಸಿದ ನಂತರ ೨೧ ದಿನಗಳಲ್ಲಿ ಅವರು ಕಾಲ್ನಡಿಗೆ ಯಲ್ಲಿ ಅಯೋಧ್ಯೆಯನ್ನು ತಲುಪಿದ್ದರು. ಹಾಗಾಗಿ ವಿಜಯದಶಮಿಯ ೨೧ ದಿನಗಳ ನಂತರ ದೀಪಾವಳಿ ಯನ್ನು ಆಚರಿಸಲಾಗುತ್ತದೆ’, ಎಂಬ ಅರ್ಥದ ಒಂದು ಮಾಹಿತಿಯನ್ನು ಪ್ರಸಾರ ಮಾಡಲಾಗಿದೆ. ಪ್ರಭು ಶ್ರೀರಾಮಚಂದ್ರರು ಪುಷ್ಪಕ ವಿಮಾನದಿಂದ ಅಯೋಧ್ಯೆ ತಲುಪಿದರು, ಎಂದು ರಾಮಾಯಣದಲ್ಲಿ ಉಲ್ಲೇಖವಿದೆ. ‘ಪುಷ್ಪಕ ವಿಮಾನ ಅತ್ಯಂತ ವೇಗದಿಂದ ಚಲಿಸುತ್ತದೆ. ಆದರೂ ಅದಕ್ಕೆ ಅಯೋಧ್ಯೆ ತಲುಪಲು ೨೧ ದಿನಗಳು ಏಕೆ ತಗಲಿದವು ?’, ಎಂದು ಹಿಂದೂಗಳ ಗೊಂದಲವನ್ನು ಮೂಡಿಸಿ ‘ರಾಮಾಯಣ ಕಾಲ್ಪನಿಕವಾಗಿದೆ’, ಎಂಬ ತಪ್ಪು ಅಭಿಪ್ರಾಯ ಹರಡಲು ಹಿಂದೂದ್ವೇಷಿಗಳು ಪ್ರಯತ್ನಿಸುತ್ತಾರೆ.
ಶ್ರೀರಾಮಚಂದ್ರರ ಪ್ರವಾಸದ ಬಗ್ಗೆ ತರ್ಕ-ವಿತರ್ಕಗಳು
೧. ಶ್ರೀಲಂಕೆಯಿಂದ ಅಯೋಧ್ಯಾ ೨ ಸಾವಿರದ ೫೮೬ ಕಿ.ಮೀ. ದೂರವಿದೆ. ಇಷ್ಟು ದೂರ ಕ್ರಮಿಸಲು ಕಾಲ್ನಡಿಗೆಯಿಂದ ೨೧ ದಿನಗಳು (೫೧೪ ಗಂಟೆ) ಬೇಕಾಗುವವು. ಅಂದರೆ ಪ್ರತಿದಿನ ಸುಮಾರು ೧೨೩ ಕಿ.ಮೀ. ನಡೆಯಬೇಕಾಗುತ್ತದೆ. ಇದರ ಅರ್ಥ ಎಲ್ಲಿಯೂ ನಿಲ್ಲದೆ ಪ್ರತಿ ಗಂಟೆಗೆ ೫ ಕಿ.ಮೀ. ದಷ್ಟು ನಡೆಯ ಬೇಕಾಗುತ್ತದೆ.
೨. ಇನ್ನೊಂದೆಡೆ ಕೆಲವರು, ಶ್ರೀರಾಮರು ಕಾಲ್ನಡಿಗೆಯಿಂದ ಅಲ್ಲ, ಪುಷ್ಪಕ ವಿಮಾನದಿಂದ ಶ್ರೀಲಂಕೆಯಿಂದ ಅಯೋಧ್ಯೆ ತಲುಪಿದ್ದರು ಎಂದು ಹೇಳುತ್ತಾರೆ. ಗೂಗಲ್‌ನಲ್ಲಿ ಶ್ರೀರಾಮರ ಈ ಮಾರ್ಗವನ್ನು ತೋರಿಸಲಾಗಿದೆ. ಗೂಗಲ್‌ನಲ್ಲಿ ಶ್ರೀಲಂಕೆಯ ಡಮ್‌ಬುಲ್ಲಾ-ಚಾಂದನಾದಿಂದ ಈ ಮಾರ್ಗ ಆರಂಭವಾಗುತ್ತದೆ. ಅಲ್ಲಿಂದ ಅದು ಕಿಂಬಿಸಾ, ಗಲಕುಲಾಮಾ, ಮಿಹಿಂಟಾಲೆ, ಮೆಡವಾಛಿಯಾ, ತಲಾಯಿಮನ್ನಾರದ ವರೆಗೆ ತಲುಪುತ್ತದೆ. ಅನಂತರ ಸಮುದ್ರದಿಂದ ರಾಮೇಶ್ವರಕ್ಕೆ ತಲುಪುತ್ತದೆ.
೩. ಕೆಲವರ ಅಭಿಪ್ರಾಯಕ್ಕನುಸಾರ ಶ್ರೀರಾಮರು ಭಾರತದಲ್ಲಿ ರಾಮೇಶ್ವರದಿಂದ ಕುಂಬಕೋಣಮ್, ಕಾಂಚೀಪುರಮ್, ತಿರುಪತಿ, ನೆಲ್ಲೋರ್, ಓಂಗಲೆ, ಸೂರ್ಯಪೇಟ್‌ನ ವರೆಗೆ ತಲುಪಿದರು. ಅಲ್ಲಿಂದ ಮಹಾರಾಷ್ಟ್ರದಲ್ಲಿನ ಚಂದ್ರಪುರ, ನಾಗಪುರದಿಂದ ಮಧ್ಯಪ್ರದೇಶದ ಸಿವನೀ, ಜಬಲಪುರ, ಕಟನೀ, ರೀವಾದವರೆಗೆ, ಅನಂತರ ಉತ್ತರಪ್ರದೇಶದ ಪ್ರಯಾಗ, ಸಾರೋನ, ಪ್ರತಾಪಗ, ಸುಲ್ತಾನಪುರ, ರೇಹಟದಿಂದ ಅಯೋಧ್ಯೆಗೆ ತಲುಪಿದರು.
೪. ಜಾಲತಾಣ ಕ್ವೋರಾದಲ್ಲಿ (www.quora.com) ೨೦೧೫ ರಿಂದ ಈ ವಿಷಯದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ಬಹಳಷ್ಟು ಜನರು ತಮ್ಮ ಹೇಳಿಕೆಯನ್ನು ನೀಡಿದ್ದಾರೆ.
ಶ್ರೀರಾಮಚಂದ್ರರಿಗೆ ಅಯೋಧ್ಯೆ ತಲುಪಲು ೨೧ ದಿನಗಳೇಕೆ ಬೇಕಾದವು ?
ರಾವಣವಧೆಯ ನಂತರ ಶ್ರೀರಾಮರು ಗೌರವಯುತವಾಗಿ ರಾವಣನ ಅಂತ್ಯಸಂಸ್ಕಾರವನ್ನು ವಿಭೀಷಣನ ಕೈಯಿಂದ ಮಾಡಿಸಿಕೊಂಡರು. ಅನಂತರ ವಿಭೀಷಣನ ರಾಜ್ಯಾಭಿಷೇಕ ಮಾಡಲಾಯಿತು. ರಾವಣ ಬ್ರಾಹ್ಮಣನಾಗಿದ್ದರಿಂದ ಬ್ರಹ್ಮಹತ್ಯೆಯ ಪಾಪ ತಗಲಬಾರದೆಂದು ಶ್ರೀರಾಮರು ವಿಧಿ ಮಾಡಿದರು. ಅನಂತರ ಶ್ರೀರಾಮ, ಸೀತೆ, ಲಕ್ಷ್ಮಣ ಇವರು ಪುಷ್ಪಕ ವಿಮಾನ ದಿಂದ ಅಯೋಧ್ಯೆಗೆ ಹಿಂತಿರುಗಿದರು. ದಾರಿಯಲ್ಲಿ ಅವರು ಸ್ವಲ್ಪ ಸಮಯ ಭಾರದ್ವಾಜ ಋಷಿಗಳ ಆಶ್ರಮದಲ್ಲಿ ತಂಗಿದರು.ಅನಂತರ ಅವರು ನಂದೀಗ್ರಾಮಕ್ಕೆ ಹೋಗಿ ಭರತನನ್ನು ಭೇಟಿಯಾದರು. ರಾವಣವಧೆಯಿಂದ ಅಯೋಧ್ಯೆಗೆ ಬರುವ ವರೆಗಿನ ಅವಧಿಯಲ್ಲಿ ಶ್ರೀರಾಮರು ಏನೇನು ಮಾಡಿದರು, ಎಂಬುದರ ಸವಿಸ್ತಾರ ವರ್ಣನೆ ರಾಮಾಯಣದಲ್ಲಿದೆ. ಹೀಗಿರುವಾಗ ರಾಮಾಯಣವನ್ನು ಓದದೆ ನಿರರ್ಥಕ ಚರ್ಚೆಯನ್ನು ಮಾಡಿ ರಾಮಾಯಣದ ಬಗ್ಗೆ ಗೊಂದಲ ಮೂಡಿಸುವವರು ಹಿಂದೂದ್ರೋಹಿಗಳೇ ಆಗಿದ್ದಾರೆ.
(ಆಧಾರ : ದೈನಿಕ ಸನಾತನ ಪ್ರಭಾತ)