No Compromise on Quality: ಮಂದಿರ ನಿರ್ಮಾಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ! – ನೃಪೇಂದ್ರ ಮಿಶ್ರಾ ಸ್ಪಷ್ಟೀಕರಣ

ಅಯೋಧ್ಯೆ: ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಮಳೆಯ ನೀರು ಸೋರಿಕೆ

ಅಯೋಧ್ಯ(ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ, ಹಾಗೂ ಇತರೆಡೆ ಮಳೆಯ ನೀರಿನ ಸೋರಿಕೆಯಾಗಿರುವ ಬಗ್ಗೆ ವರದಿ ಪ್ರಸಾರವಾಗಿದ್ದವು. ಈ ಕುರಿತು ವಿವರಣೆ ನೀಡಿದ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ, ದೇವಾಲಯದ ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆಯಾಗಲು ಎರಡು ಕಾರಣಗಳಿವೆ. ಗರ್ಭಗುಡಿಯ ಮುಂಭಾಗದಲ್ಲಿರುವ ಆಧ್ಯಾತ್ಮ ಮಂಟಪ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ದೇವಸ್ಥಾನದ ಆವರಣದೊಳಗೆ ಮಳೆ ನೀರು ನುಗ್ಗಿದೆ. ಇನ್ನೊಂದು ಕಾರಣವೆಂದರೆ ದೇವಾಲಯದ ಮೊದಲ ಮಹಡಿಯಲ್ಲಿ ವಿದ್ಯುತ್ ತಂತಿಗಳನ್ನು ಹಾಕಲು ತೆರೆದ ಪೈಪ್‌ಗಳಿವೆ. ಇದರಿಂದಾಗಿ ದೇವಸ್ಥಾನದಲ್ಲಿ ನೀರು ಬಂದಿದೆ. ನಾನೇ ಸ್ವತಃ ದೇವಸ್ಥಾನವನ್ನು ಪರಿಶೀಲಿಸಿ ಎಲ್ಲ ಸ್ಥಳಗಳನ್ನು ನೋಡಿದ್ದೇನೆ. ದೇವಸ್ಥಾನದಲ್ಲಿ ನೀರು ಸೋರಿಕೆಯಾಗುತ್ತಿದೆ ಎಂಬ ಭ್ರಮೆಯನ್ನು ಕೆಲವರು ಮೂಡಿಸಿದ್ದಾರೆ. ಮಂದಿರ ನಿರ್ಮಾಣದ ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ಭಕ್ತರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಗರ್ಭಗುಡಿಯ ಮುಂಭಾಗದಲ್ಲಿ ತಾತ್ಕಾಲಿಕ ಗೋಪುರ ಮಂಟಪ ನಿರ್ಮಿಸಲಾಗಿದೆ. ಅದನ್ನು ತೆಗೆಯಲಾಗುವುದು.

ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ ನೃಪೇಂದ್ರ ಮಿಶ್ರಾ ಹೇಳಿದ್ದೇನೆಂದರೆ, ಈ ದೇವಾಲಯವನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಹೊರಗಡೆಯ ಮಂಟಪಗಳು ತೆರೆದಿರುತ್ತವೆ. ಭಾರಿ ಮಳೆಯ ಸಂದರ್ಭದಲ್ಲಿ ನೀರು ಬರುವ ಸಾಧ್ಯತೆ ಇದ್ದರೂ, ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ದೇವಸ್ಥಾನದೊಳಗೆ ನೀರು ಬರುವ ಸಾಧ್ಯತೆ ಇಲ್ಲ ಎಂದರು.

ಜ್ಯೋತಿಯ ಬೆಳಕಿನಲ್ಲಿ ಆರತಿ ಮಾಡಬೇಕಾಯಿತು!

ಜೂನ್ 22ರಂದು ರಾತ್ರಿ 2 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಧಾರಾಕಾರ ಮಳೆ ಸುರಿದಿತ್ತು. ಇದರಿಂದಾಗಿ ದೇವಸ್ಥಾನದ ಗರ್ಭ ಗುಡಿಯ ಮುಂಭಾಗದ ಮಂಟಪದಲ್ಲಿ 4 ಇಂಚು ನೀರು ನಿಂತಿತ್ತು. ದೇವಸ್ಥಾನದಲ್ಲಿ ಜನರಿಗೆ ವಿದ್ಯುತ್ ಸ್ಪರ್ಶವಾಗುವ(ಕರೆಂಟ್ ಶಾಕ್ ತಗಲುವ) ಅವಕಾಶವಿತ್ತು ಹಾಗಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಬೆಳಗಿನ ಜಾವ 4