ಅಯೋಧ್ಯೆಯಲ್ಲಿ ದೇಶದ ಅತಿ ದೊಡ್ಡ ಬಾಣ-ಬಿಲ್ಲು ಸ್ಥಾಪನೆ

3 ಸಾವಿರದ 900 ಕೆಜಿ ತೂಕದ ಗದೆಯನ್ನು ಕೂಡ ಸ್ಥಾಪಿಸಲು ನಿರ್ಧಾರ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಯೋಧ್ಯೆಯಲ್ಲಿ ದೇಶದ ಅತಿ ಉದ್ದದ ಬಾಣ-ಬಿಲ್ಲು ಸ್ಥಾಪಿತಗೊಳ್ಳಲಿದೆ. ಈ ಧನಸ್ಸು ಬಾಣದ ಉದ್ದ 33 ಅಡಿ ಮತ್ತು ತೂಕ 3,400 ಕೆ.ಜಿ. ಇರಲಿದೆ. ಧನಸ್ಸು ಬಾಣದ ಜೊತೆಗೆ 3,900 ಕೆಜಿ ತೂಕದ ಗದೆಯೂ ನಿರ್ಮಾಣವಾಗಲಿದೆ. ಈ ಬಿಲ್ಲು, ಬಾಣ ಮತ್ತು ಗದೆಯನ್ನು ಎಲ್ಲಿ ಸ್ಥಾಪಿಸಬೇಕು? ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಗದೆ, ಬಿಲ್ಲು ಮತ್ತು ಬಾಣಗಳನ್ನು ಪಂಚ ಧಾತುಗಳಿಂದ ಸಿದ್ಧಪಡಿಸಲಾಗಿದೆ. ಇದನ್ನು ರಾಜಸ್ಥಾನದ ಸುಮೇರಪುರದ ಶಿವಗಂಜ, ಸುಮೇರಪೂರನ ‘ಶ್ರೀಜಿ ಸನಾತನ ಸೇವಾ ಸಂಸ್ಥೆ’ ನಿರ್ಮಿಸಿದೆ. ಅಲ್ಲಿಂದ ಅದನ್ನು ಅಯೋಧ್ಯೆಗೆ ತರಲಾಗುವುದು.

1. ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸ’ದ ಮುಖ್ಯಸ್ಥ ಚಂಪತ್ ರಾಯ್ ಮಾತನಾಡಿ, ಬಿಲ್ಲು, ಬಾಣ, ಗದೆಯನ್ನು ಸದ್ಯ ಕರಸೇವಕಪುರದಲ್ಲಿ ಇಡಲಾಗುವುದು. ನಂತರ ಅದನ್ನು ಎಲ್ಲಿ ಸ್ಥಾಪಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

2. ಈ ಹಿಂದೆ ರಾಜಸ್ಥಾನದ ಭಿಲವಾಡಾದಲ್ಲಿ 17 ಅಡಿ ಉದ್ದ ಮತ್ತು 900 ಕೆಜಿ ತೂಕದ ಬಿಲ್ಲು ತಯಾರಿಸಲಾಗಿತ್ತು. ಹಾಗೆಯೇ ಇಂದೋರ್‌ನ ಪಿತೃ ಪರ್ವತದಲ್ಲಿ ದೇಶದ ಅತ್ಯಂತ ಭಾರವಾದ ಮತ್ತು ಉದ್ದದ ಗದೆಯನ್ನು ಸ್ಥಾಪಿಸಲಾಗಿದೆ. ಅದರ ತೂಕ 21 ಟನ್ ಮತ್ತು ಉದ್ದ 45 ಅಡಿ ಆಗಿದೆ.

3. ಮತ್ತೊಂದೆಡೆ, ಅಲಿಗಡದಿಂದ ಅಯೋಧ್ಯೆಗೆ 400 ಕಿಲೋ ತೂಕದ ಬೀಗವನ್ನು ತರಲಾಗಿದೆ. 10 ಅಡಿ ಉದ್ದ ಮತ್ತು 4 ಅಡಿ ಅಗಲವಿರುವ ಈ ಬೀಗದ ದಪ್ಪ 9.5 ಇಂಚು ಆಗಿದೆ. 4 ಅಡಿ ಉದ್ದದ ಕೀಲಿ 30 ಕೆ.ಜಿ. ಭಾರವಿದೆ. ಈ ಬೀಗವನ್ನು ಸಿದ್ಧಪಡಿಸಲು ಎರಡು ಲಕ್ಷ ರೂಪಾಯಿ ಖರ್ಚಾಗಿದೆ. ಬೀಗದ ಉದ್ಯಮಿ ಶ್ರೀ. ಸತ್ಯಪ್ರಕಾಶರಿಗೆ ಶ್ರೀರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ದೇವಸ್ಥಾನಕ್ಕೆ ಬೀಗವನ್ನು ಉಡುಗೊರೆಯಾಗಿ ನೀಡಬೇಕು ಎನ್ನುವ ಆಶಯವಾಗಿತ್ತು. ಆದರೆ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯಾಗುವ 41 ದಿನಗಳ ಮೊದಲೇ ಅವರು ನಿಧನರಾದರು.