ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಶ್ರೀರಾಮ ಜನ್ಮಭೂಮಿಯಲ್ಲಿ ಕಟ್ಟಲಾದ ಶ್ರೀರಾಮ ಮಂದಿರದಲ್ಲಿ ಜನವರಿ ೨೨ ರಂದು ನಡೆದಿರುವ ಪ್ರಾಣ ಪ್ರತಿಷ್ಠಾಪನೆಯ ನಂತರ ಜುಲೈ ೧೪ ರ ವರೆಗೆ ಸುಮಾರು ೨ ಕೋಟಿ ಭಕ್ತರು ಶ್ರೀರಾಮಲಲ್ಲಾನ ದರ್ಶನ ಪಡೆದಿದ್ದಾರೆ. ದೇವಸ್ಥಾನದಲ್ಲಿ ಪ್ರತಿದಿನ ಸುಮಾರು ೧ ಲಕ್ಷ ೧೨ ಸಾವಿರ ಭಕ್ತರು ಬರುತ್ತಿದ್ದಾರೆ. ಈಗ ಉತ್ತರ ಭಾರತದಲ್ಲಿ ನಡೆಯುತ್ತಿರುವ ಶ್ರಾವಣ ಮಾಸದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.
೧. ಇಲ್ಲಿಯ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ೫ ಲಕ್ಷ ೨೦ ಸಾವಿರ ಯಾತ್ರಿಕರು ಇಲ್ಲಿಯವರೆಗೆ ಬಂದಿದ್ದಾರೆ. ಪ್ರತಿದಿನ ಸುಮಾರು ಎರಡುವರೆ ಸಾವಿರ ಪ್ರಯಾಣಿಕರ ಓಡಾಟ ನಡೆಯುತ್ತಿದೆ. ಅಯೋಧ್ಯೆ ರೈಲು ನಿಲ್ದಾಣದಿಂದ ೩೨ ರೈಲುಗಳು ಸಂಚರಿಸುತ್ತಿವೆ.
೨. ಅಯೋಧ್ಯೆ ಹೋಟೆಲ್ ಅಸೋಸಿಯೇಷನನ ಸಚಿವ ಅನಿಲ್ ಅಗ್ರವಾಲ್ ಇವರು ಮಾತನಾಡಿ, ೬೦ ಹೊಸ ಹೋಟೆಲಗಳು ಆಗಿವೆ. ೩೦ ಹೋಟೆಲಗಳ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.