ಪಾಕಿಸ್ತಾನದ ಸಿಂಧ ಮತ್ತೊಮ್ಮೆ ಭಾರತದ ಭಾಗವಾಗುವುದು ! – ಪೂಜ್ಯ ಡಾ. ಯುಧಿಷ್ಠಿರ ಲಾಲ

ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ದರ್ಶನ ಪಡೆದ ೨೫೦ ಪಾಕಿಸ್ತಾನಿ ಹಿಂದೂಗಳು !

ಅಯೋಧ್ಯೆ (ಉತ್ತರಪ್ರದೇಶ) – ಪಾಕಿಸ್ತಾನದಿಂದ ಬಂದ ೨೫೦ ಹಿಂದೂಗಳು ಅಯೋಧ್ಯೆಯಲ್ಲಿ ಶರಯೂ ನದಿಯಲ್ಲಿ ಸ್ನಾನ ಮಾಡಿ ಪ್ರಭು ಶ್ರೀರಾಮನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು. ಜೊತೆಗೆ ಅಯೋಧ್ಯೆಯಲ್ಲಿನ ಹನುಮಾನಗಢಿ, ಕನಕ ಭವನ ಮುಂತಾದ ಇತರ ಪ್ರಾಚೀನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು. ಛತ್ತೀಸ್ಗಡದಲ್ಲಿನ ರಾಯಪುರ ಇಲ್ಲಿಯ ಪ್ರಸಿದ್ಧ ಶದಾನಿ ದರಬಾರದ ಪ್ರಮುಖ ಪೂ. ಡಾ. ಯುಧಿಷ್ಠಿರ ಲಾಲ ಇವರು ದರ್ಶನಕ್ಕಾಗಿ ನೇತೃತ್ವ ವಹಿಸಿದ್ದರು. ಪೂ. ಡಾ. ಯುಧಿಷ್ಠಿರ ಲಾಲ್ ಇವರು, ಯಾವ ರೀತಿ ೫೦೦ ವರ್ಷಗಳ ನಂತರ ಶ್ರೀರಾಮ ಜನ್ಮ ಭೂಮಿ ನಮಗೆ ದೊರೆತಿದೆ ಮತ್ತು ಅಲ್ಲಿ ಭವ್ಯ ಶ್ರೀರಾಮ ಮಂದಿರ ಕಟ್ಟಲಾಗಿದೆ. ಅದರಂತೆಯೇ ಪಾಕಿಸ್ತಾನದ ಸಿಂಧಪ್ರಾಂತ ಕೂಡ ಮತ್ತೊಮ್ಮೆ ಭಾರತದ ಭಾಗವಾಗುವುದು ಎಂದು ಹೇಳಿದರು.

೧. ಸಿಂಧ ಪ್ರಾಂತದಲ್ಲಿನ ಜರವಾರ ಗ್ರಾಮದಿಂದ ಬಂದಿರುವ ಗೋವಿಂದ ರಾಮ ಮಾಖೇಜ ಇವರು ಮಾತನಾಡಿ, ಭಾರತದಲ್ಲಿ ಪೂರ್ಣಶಾಂತಿ ಇದೆ, ತಡ ರಾತ್ರಿಯವರೆಗೆ ಜನರು ರಸ್ತೆಯಲ್ಲಿ ಓಡಾಡಬಹುದು. ವ್ಯಾಪಾರ ಮಾಡಬಹುದು. ಎಲ್ಲಾ ಹಬ್ಬಗಳು ಉತ್ಸಾಹದಿಂದ ಮತ್ತು ಶ್ರದ್ಧೆಯಿಂದ ಆಚರಿಸಬಹುದು. ಮೆರವಣಿಗೆ ನಡೆಸಬಹುದು. ಆದರೆ ಪಾಕಿಸ್ತಾನದಲ್ಲಿ ಹಿಂದುಗಳಿಗೆ ಈ ರೀತಿ ಹಬ್ಬ ಆಚರಿಸುವ ಸ್ವಾತಂತ್ರ್ಯವಿಲ್ಲ ಎಂದು ಹೇಳಿದರು.

೨. ಸಿಂಧದಲ್ಲಿನ ಮೀರಪುರ ಮಾಥೆಲೋ ಇಲ್ಲಿಯ ನಿವಾಸಿ ಓಂಪ್ರಕಾಶ ಇವರು, ಪಾಕಿಸ್ತಾನದಲ್ಲಿ ಯಾವಾಗಲೂ ಭಯದ ವಾತಾವರಣ ಇರುತ್ತದೆ. ಭಾರತದಲ್ಲಿ ಸೊಸೆ ಸುರಕ್ಷಿತವಾಗಿದ್ದಾಳೆ, ಆದರೆ ಪಾಕಿಸ್ತಾನದಲ್ಲಿ ಸಂಜೆ ಮಗಳು ಮನೆಗೆ ಹಿಂತಿರುಗಿ ಬರಲಿಲ್ಲ, ಅಂದರೆ ಏನಾದರೂ ಅಯೋಗ್ಯ ಘಟನೆ ಘಟಿಸಿರಬಹುದೆ ಎಂದು ಭಯ ಕಾಡುತ್ತದೆ ಎಂದು ಹೇಳಿದರು.