ಯಾರಿಗೂ ಯಾವುದೇ ವಿಚಾರಧಾರೆಯನ್ನು ನಾಶ ಮಾಡುವ ಅಧಿಕಾರವಿಲ್ಲ ! – ಮದ್ರಾಸ್ ಉಚ್ಚ ನ್ಯಾಯಾಲಯ

ಸನಾತನ ಧರ್ಮವನ್ನು ನಾಶ ಮಾಡುವ ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್ ಮತ್ತು ಪಿ.ಕೆ. ಶೇಖರ್ ಬಾಬು ಇವರ ಮೇಲೆ ಕ್ರಮ ಕೈಗೊಳ್ಳದ ಬಗ್ಗೆ ಪೊಲೀಸರಿಗೆ ಛೀಮಾರಿ !

ಚೆನ್ನೈ (ತಮಿಳುನಾಡು) : ಮದ್ರಾಸ್ ಉಚ್ಚ ನ್ಯಾಯಾಲಯವು ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದರ ಕುರಿತು ಉದಯನಿಧಿ ಸ್ಟಾಲಿನ್ ಮತ್ತು ಪಿ.ಕೆ. ಶೇಖರ್ ಬಾಬು ಇವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಪೊಲೀಸರ ಕಾರ್ಯಾಚರಣೆಯ ಬಗ್ಗೆ ಛೀಮಾರಿ ಹಾಕಿತು. ಮದ್ರಾಸ್ ಉಚ್ಚ ನ್ಯಾಯಾಲಯವು ಮುಂದಿನಂತೆ ಹೇಳಿತು, ಯಾವುದೇ ವ್ಯಕ್ತಿಗೆ ಪ್ರತ್ಯೇಕತಾವಾದಿ ಯೋಚನೆಗಳಿಗೆ ಚಾಲನೆ ನೀಡುವ ಅಥವಾ ಯಾವುದೇ ವಿಚಾರಧಾರೆಯನ್ನು ನಾಶ ಮಾಡುವ ಅಧಿಕಾರ ಇಲ್ಲ. ಅಧಿಕಾರದಲ್ಲಿ ಇರುವ ವ್ಯಕ್ತಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ಅವರು ಈ ರೀತಿಯ ಯೋಚನೆಗಳ ಪ್ರಸಾರ ಮಾಡಬಾರದು, ಯಾವ ವಿಚಾರಧಾರೆಯು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರಲ್ಲಿ ಬಿರುಕು ಮೂಡಿಸುತ್ತದೆಯೋ, ಆ ವಿಚಾರಧಾರೆಯನ್ನು ಸಾರ್ವಜನಿಕ ರೀತಿಯಲ್ಲಿ ಮಂಡಿಸುವ ಬದಲು ಅವರು (ಉದಯನಿಧಿ ) ರಾಜ್ಯದಲ್ಲಿನ ಮಾದಕ ವಸ್ತುಗಳ ಸಮಸ್ಯೆ ಪರಿಹರಿಸುವ ಕಡೆಗೆ ಗಮನ ಕೇಂದ್ರೀಕರಿಸಬಹುದು.

ದ್ರಾವಿಡ ವಿಚಾರಧಾರೆಯ ವಿರುದ್ಧ ನಡೆಯುವ ಸಭೆಗೆ ನ್ಯಾಯಾಲಯದಿಂದ ಅನುಮತಿ ನಿರಾಕರಣೆ !

ಈ ಸಮಯದಲ್ಲಿ ನ್ಯಾಯಾಲಯವು ದ್ರವಿಡ ವಿಚಾರಧಾರೆಯ ವಿರುದ್ಧ ಸಭೆ ನಡೆಸುವುದಕ್ಕೆ ಅನುಮತಿ ನಿರಾಕರಿಸಿದೆ. ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಸಪ್ಟೆಂಬರ್ ತಿಂಗಳಲ್ಲಿ ಈ ಸಭೆಗಾಗಿ ಅನುಮತಿ ಕೇಳಲಾಗಿತ್ತು. ಸ್ಟಾಲಿನ್ ಇವರ ಹೇಳಿಕೆಯ ಖಂಡನೆಗಾಗಿ ಈ ಸಭೆಯ ಆಯೋಜನೆ ಮಾಡಲಾಗುವುದಿತ್ತು.

ಸನಾತನವನ್ನು ನಾಶ ಮಾಡುವುದರ ಬಗ್ಗೆ ಮಾತನಾಡುವವರು ಮಾದಕ ವಸ್ತುಗಳು, ಭ್ರಷ್ಟಾಚಾರ ಮತ್ತು ಅಸ್ಪೃಶ್ಯತೆಯನ್ನು ನಾಶ ಮಾಡುವ ಕಾರ್ಯ ಮಾಡಬೇಕು !

ಶ್ರೀ. ಅರ್ಜುನ ಸಂಪತ್

ನ್ಯಾಯಾಲಯವು ಹೇಳಿರುವುದು ಏನೆಂದರೆ, ಯಾವುದರಿಂದ ಜನರ ನಡುವೆ ವೈಷಮ್ಯ ಮೂಡುವ ಸಾಧ್ಯತೆಯಿದೆಯೋ ಇಂತಹ ಯಾವುದೇ ಸಭೆಗೆ ನ್ಯಾಯಾಲಯ ಅನುಮತಿ ನೀಡದು,. ಈ ದೇಶದಲ್ಲಿ ಬೇರೆ ಬೇರೆ ವಿಚಾರಧಾರೆಯವರು ಒಟ್ಟಾಗಿ ವಾಸಿಸುತ್ತಾರೆ , ಅದೇ ಭಾರತದ ಪರಿಚಯವಾಗಿದೆ. ಯಾವ ಜನರು ಸನಾತನವನ್ನು ನಾಶ ಮಾಡುವುದರ ಬಗ್ಗೆ ಮಾತನಾಡುತ್ತಾರೆ, ಅವರು ಮಾದಕ ವಸ್ತುಗಳು, ಭ್ರಷ್ಟಾಚಾರ ಮತ್ತು ಅಸ್ಪೃಶ್ಯತೆ ನಾಶಕ್ಕಾಗಿ ಕೆಲಸ ಮಾಡಬೇಕು. ಇಲ್ಲಿ ಒಂದು ಸಭೆ ಆಯೋಜಿಸಲಾಗಿತ್ತು, ಅದರಲ್ಲಿ ಸನಾತನ ಧರ್ಮವನ್ನು ನಾಶ ಮಾಡುವ ಹೇಳಿಕೆ ನೀಡಲಾಗಿತ್ತು. ಇದರಲ್ಲಿ ಸಹಭಾಗಿಯಾದ ಜನರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ . ಆದ್ದರಿಂದ ಇಲ್ಲಿ ಇತರ ವಿಚಾರಧಾರೆಯನ್ನು ನಾಶ ಮಾಡುವುದಕ್ಕಾಗಿ ಸಭೆ ನಡೆಸಲು ಅನುಮತಿ ಕೇಳಲಾಗುತ್ತಿದೆ. ಇದರಿಂದ ಸಮಾಜದಲ್ಲಿ ವೈಷಮ್ಯ ಮೂಡುತ್ತದೆ.

  • ಮದ್ರಾಸ್ ಉಚ್ಚ ನ್ಯಾಯಾಲಯದ ಹೇಳಿಕೆಯ ನಂತರ ಕೂಡ ಸ್ಟಾಲಿನ್ ಇವರು ತಮ್ಮ ಹೇಳಿಕೆಗೆ ಬದ್ಧ!

  • ಸನಾತನ ಧರ್ಮವನ್ನು ವಿರೋಧಿಸುತ್ತಲೇ ಇರುವೆನು (ಅಂತೆ) !

ಮದ್ರಾಸ್ ಉಚ್ಚ ನ್ಯಾಯಾಲಯದ ಟಿಪ್ಪಣಿಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಉದಯನಿಧಿ ಸ್ಟಾಲಿನ್ ಹೇಳಿರುವುದು, ನಾವು ಅನೇಕ ವರ್ಷಗಳಿಂದ ಸನಾತನ ಧರ್ಮದ ಬಗ್ಗೆ ಮಾತನಾಡುತ್ತಿದ್ದೇವೆ, ಸನಾತನ ಧರ್ಮ ಇದು ಅನೇಕ ವರ್ಷಗಳ ಅಂಶವಾಗಿದೆ. ನಾವು ಯಾವಾಗಲೂ ಅದನ್ನು ವಿರೋಧಿಸುತ್ತೇವೆ.

ನಾನು ಏನು ತಪ್ಪು ಮಾತನಾಡಿಲ್ಲ ! –  ಸ್ಟಾಲಿನ್

ನಾನು ಏನು ತಪ್ಪು ಮಾತನಾಡಿಲ್ಲ. ನಾನು ನನ್ನ ಹೇಳಿಕೆಗಾಗಿ ಕಾನೂನಿನ ರೀತಿಯಲ್ಲಿ ಕ್ರಮವನ್ನು ಎದುರಿಸಲು ಸಿದ್ಧನಿದ್ದೇನೆ. ಕ್ರಮ ಕೈಗೊಳ್ಳುವ ಭೀತಿಯಿಂದ ನಾನು ನನ್ನ ಹೇಳಿಕೆ ಬದಲಾಯಿಸುವುದಿಲ್ಲ. ನಾನು ನನ್ನ ವಿಚಾರಧಾರೆ ಮಂಡಿಸಿದ್ದೇನೆ. ಅಂಬೇಡ್ಕರ್, ಪೆರಿಯಾರ್ ಮತ್ತು ತಿರುಮಾವಲವನ್ ಇವರು ಏನು ಹೇಳಿದ್ದಾರೆ, ಅದನ್ನೇ ನಾನು ಹೇಳಿದ್ದೇನೆ ಅದಕ್ಕಿಂತಲೂ ಹೆಚ್ಚಾಗಿ ನಾನು ಏನು ಮಾತನಾಡಿಲ್ಲ, ಸನಾತನ ಧರ್ಮದ ತುಲನೆ ಡೆಂಗ್ಯು ,ಮಲೇರಿಯಾ ಅಂತಹ ರೋಗಗಳ ಜೊತೆಗೆ ಮಾಡಿರುವ ತಮಿಳುನಾಡುವಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇವರು ಪತ್ರಕರ್ತರ ಜೊತೆಗೆ ಮಾತನಾಡುವಾಗ ಈ ರೀತಿ ಹೇಳಿಕೆ ನೀಡಿದರು .

ಸಂಪಾದಕೀಯ ನಿಲುವು

ನ್ಯಾಯಾಲಯವು ಕೇವಲ ಛೀಮಾರಿ ಹಾಕಿ ಸುಮ್ಮನಿರಬಾರದು, ಸಂಬಂಧಿತ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದು ಹಾಗೂ ಆರೋಪಿಗಳನ್ನು ಬಂಧಿಸಲು ಆದೇಶ ಕೂಡ ನೀಡಬೇಕೆಂದು ಜನರಿಗೆ ಅನಿಸುತ್ತದೆ !