|
ವಾರಣಾಸಿ (ಉತ್ತರಪ್ರದೇಶ) – ಉತ್ತರ ಪ್ರದೇಶದಲ್ಲಿನ ವಾರಣಾಸಿಯಲ್ಲಿನ ಬನಾರಸ ಹಿಂದೂ ವಿದ್ಯಾಪೀಠದಲ್ಲಿ ಕಮ್ಯುನಿಸ್ಟರಿಂದ ಹಿಂದೂ ವಿರೋಧಿ ಮತ್ತು ಸ್ವಾತಂತ್ರ್ಯದ ಘೋಷಣೆ ನೀಡಲಾಯಿತು. ಇದರ ಬಗ್ಗೆ ಕೆಲವು ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ಈ ಪ್ರಕರಣದಲ್ಲಿ ೧೭ ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಘೋಷಣೆಯ ವಿರೋಧ ಮಾಡುವುದಕ್ಕಾಗಿ ಅಲ್ಲಿ ಬಂದಿರುವ ವಿದ್ಯಾರ್ಥಿಗಳ ಮೇಲೆ ಆರೋಪಿಗಳು ದಾಳಿ ಮಾಡಿರುವ ಸಮಾಚಾರ ಇದೆ. ಕಳೆದ ಎರಡು ದಿನದಿಂದ ಕೆಲವು ಕಮ್ಯುನಿಸ್ಟ್ ವಿದ್ಯಾರ್ಥಿಗಳು ವಿದ್ಯಾಪೀಠದ ಪರಿಸರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಕೆಲವು ಹೊರಗಿನ ಜನರು ಕೂಡ ಸಹಭಾಗಿ ಆಗಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಈ ಜನರು ಹಿಂದುತ್ವದ ಸಮಾಧಿ ಕಟ್ಟುವೆವು ಮತ್ತು ಸ್ವಾತಂತ್ರ್ಯದ ಘೋಷಣೆ ಕೂಗುತ್ತಿದ್ದರು. ಇದರ ಒಂದು ವಿಡಿಯೋ ಕೂಡ ಪ್ರಸಾರವಾಗಿದ್ದು ಅದರಲ್ಲಿ ಪ್ರತಿಭಟನಾಕಾರ ಕಮ್ಯುನಿಸ್ಟ್ ವಿದ್ಯಾರ್ಥಿಗಳು ಪೊಲೀಸರೆದುರು ಮೋದಿ ಯೋಗಿ ಮುರ್ದಾಬಾದ್ ಈ ಘೋಷಣೆ ಕೂಗುತ್ತಿರುವುದು ಕಾಣುತ್ತಿದೆ. (ವಿದ್ಯಾಪೀಠ ಆಡಳಿತದಿಂದ ರಾಷ್ಟ್ರಧ್ರೋಹಿ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ !- ಸಂಪಾದಕರು)
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಒಂದು ವಿಡಿಯೋ ಪ್ರಸಾರ ಮಾಡಲಾಗಿದ್ದು ಕಮ್ಯುನಿಸ್ಟ್ ವಿಚಾರಧಾರೆಯ ವಿದ್ಯಾರ್ಥಿಗಳು ಓರ್ವ ಮಹಿಳಾ ಸುರಕ್ಷಾ ಕರ್ಮಚಾರಿಯ ಕತ್ತು ಹಿಸುಕಿರುವ ಆರೋಪ ಮಾಡಲಾಗಿದೆ. ಸಂತ್ರಸ್ತ ವಿದ್ಯಾರ್ಥಿಗಳು ನೀಡಿರುವ ದೂರಿನಲ್ಲಿ ಮುಂದಿನಂತೆ ಹೇಳಲಾಗಿದೆ, ದಾಳಿಕೋರ ಪ್ರತಿಭಟನಾಕಾರರು ತಮ್ಮನ್ನು ಎಳೆದುಕೊಂಡು ಹೋಗುತ್ತಾ ಥಳಿಸಿದ್ದಾರೆ, ಹಾಗೂ ಅವರು ದೂರು ನೀಡಿರುವ ವಿದ್ಯಾರ್ಥಿಗಳ ಜೊತೆ ಇರುವ ದಲಿತ ಜನಾಂಗದಲ್ಲಿನ ಯುವಕರನ್ನುಕೀಳಾಗಿ ನಿಂದಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.