‘ವಾಘ್ ಬಕರೀ ಚಾಯ’ ಎಂಬ ಖ್ಯಾತ ಕಂಪನಿಯ ಕಾರ್ಯನಿರ್ವಾಹಕ ಪರಾಗ ದೇಸಾಯಿ ಇವರು ಬೀದಿನಾಯಿಗಳ ಆಕ್ರಮಣದ ಸಮಯದಲ್ಲಿ ಕಾಲು ಜಾರಿ ಬಿದ್ದು ಮೆದುಳಿಗೆ ಪೆಟ್ಟಾಗಿ ನಿಧನರಾದರು. ಈ ಘಟನೆಯಿಂದ ಬೀದಿನಾಯಿಗಳ ಸಮಸ್ಯೆ ಪುನಃ ಮುನ್ನೆಲೆಗೆ ಬಂದಿದೆ. ೨೦೦೧ ರಲ್ಲಿನ ನ್ಯಾಯಾಲಯದ ಒಂದು ಆದೇಶದ ನಂತರ ಭಾರತದಲ್ಲಿ ನಾಯಿಗಳ ಹತ್ಯೆಗೆ ನಿರ್ಬಂಧ ಹೇರಲಾಯಿತು. ಅನಂತರ ದೇಶದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಯಿತು. ಪಾಲಘರ್‌ನಲ್ಲಿ ರಸ್ತೆ ಅಪಘಾತವಾಗಿ ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸಾಯರಸ್ ಮಿಸ್ತ್ರಿ ಇವರ ಮೃತ್ಯುವಿನ ನಂತರ ‘ಈ ರಸ್ತೆ ಎಷ್ಟು ಅಪಾಯಕಾರಿಯಾಗಿದೆ’, ಎಂಬುದು ಜಗತ್ತಿಗೆ ತಿಳಿಯಿತು. ಇದಕ್ಕೂ ಮೊದಲು ಈ ರಸ್ತೆಯಲ್ಲಿ ಅನೇಕ ಅಪಘಾತಗಳಾಗಿದ್ದರೂ ಅದರಲ್ಲಿ ಸುಧಾರಣೆ ಮಾಡಬೇಕೆಂದು ಗಾಂಭೀರ್ಯದಿಂದ ಪ್ರಯತ್ನವಾಗಿರಲಿಲ್ಲ. ಈ ಅಪಘಾತದ ನಂತರ ಅದರಲ್ಲಿ ಸುಧಾರಣೆ ಮಾಡಲಾಗುತ್ತಿದೆ.
ಅದೇ ರೀತಿ ಮಿಸ್ತ್ರಿಯವರು ಸೀಟ್ ಬೆಲ್ಟ್ ಹಾಕಿರಲಿಲ್ಲ ಹಾಗೂ ಅವರ ವಾಹನದಲ್ಲಿ ಅಪಘಾತದ ಸಮಯದಲ್ಲಿ ತೆರೆಯುವ ಗಾಳಿಯ ಚೀಲವನ್ನು ಅಳವಡಿಸಿರಲಿಲ್ಲ, ಈ ಎರಡು ವಿಷಯಗಳು ಬೆಳಕಿಗೆ ಬಂದವು. ಅನಂತರ ಸರಕಾರ ಈ ರೀತಿಯ ಚೀಲಗಳನ್ನು ವಾಹನ ತಯಾರಿಕಾ ಕಂಪನಿಗಳಿಗೆ ಕಡ್ಡಾಯಗೊಳಿಸಿದೆ ಹಾಗೂ ಸೀಟ್ ಬೆಲ್ಟ್ ಬಗ್ಗೆ ಸಮಾಜದಲ್ಲಿ ಗಾಂಭೀರ್ಯ ಮೂಡಿದೆ. ಇದರ ಅರ್ಥ ‘ಯಾವುದೇ ದೊಡ್ಡ ಘಟನೆ ಘಟಿಸುವ ವರೆಗೆ ಸಮಸ್ಯೆಗೆ ಪರಿಹಾರ ಹುಡುಕುವ ಅಥವಾ ಅದರ ಕಡೆಗೆ ಗಾಂಭೀರ್ಯದಿಂದ ನೋಡುವ ದೃಷ್ಟಿಕೋನ ನಿರ್ಮಾಣ ವಾಗುವುದೇ ಇಲ್ಲ, ಇದು ದೇಶದಲ್ಲಿನ ಎಲ್ಲಕ್ಕಿಂತ ದೊಡ್ಡ ಸಮಸ್ಯೆಯಾಗಿದೆ’, ಎಂಬುದು ಅರಿವಾಗುತ್ತದೆ. ಭಾರತದಲ್ಲಿ ಪ್ರತಿವರ್ಷ ಸುಮಾರು ೨ ಕೋಟಿ ಜನರಿಗೆ ಪ್ರಾಣಿಗಳು ಕಚ್ಚುತ್ತವೆ. ಅವುಗಳಲ್ಲಿ ಶೇ. ೯೨ ರಷ್ಟು ಘಟನೆಗಳು ಕೇವಲ ನಾಯಿಗಳ ಕಚ್ಚುವಿಕೆಯದ್ದಾಗಿರುತ್ತವೆ. ನಾಯಿ ಕಚ್ಚುವುದರಿಂದ ‘ರೆಬೀಜ್’ ಎಂಬ ಕಾಯಿಲೆ ಬರುತ್ತದೆ. ಜಾಗತಿಕ ಆರೋಗ್ಯ ಸಂಘಟನೆಯ ಅಂಕಿಅಂಶಗಳಿಗನುಸಾರ ಜಗತ್ತಿನಲ್ಲಿ ರೆಬೀಜ್‌ನಿಂದ ಮರಣ ಹೊಂದುವವರಲ್ಲಿ ಶೇ. ೩೬ ರಷ್ಟು ಭಾರತದವರಾಗಿರುತ್ತಾರೆ. ಅಂದರೆ ಪ್ರತಿವರ್ಷ ೧೮ ಸಾವಿರದಿಂದ ೨೦ ಸಾವಿರ ಜನರು ರೆಬೀಜ್‌ನಿಂದ ಸಾಯುತ್ತಾರೆ. ಭಾರತದಲ್ಲಿ ರೆಬೀಜ್‌ನಿಂದಾಗುವ ಮರಣದಲ್ಲಿ ಶೇ. ೩೦ ರಿಂದ ೬೦ ರಷ್ಟು ೧೫ ವರ್ಷಕ್ಕಿಂತ ಕೆಳಗಿನ ಮಕ್ಕಳಿರುತ್ತಾರೆ. ಇದರಿಂದ ‘ನಾಯಿಗಳು ಕಚ್ಚುವ ಸಮಸ್ಯೆ ಎಷ್ಟು ಭಯಂಕರವಾಗಿದೆ’, ಎಂಬುದು ಅರಿವಾಗುತ್ತದೆ. ಈ ಹಿಂದೆ ಮುಂಬಯಿ ಮಹಾನಗರ ಪಾಲಿಕೆಯ ಆಂಗ್ಲರ ಕಾಲದ ಅಂದರೆ ೧೮೮೮ ರ ಕಾನೂನಿನ ಕಲಮ್ ೧೯೧ (ಬ) (ಅ) ಗನುಸಾರ ವಿದ್ಯುತ್ ಆಘಾತ ನೀಡಿ ಬೀದಿನಾಯಿಗಳನ್ನು ಸಾಯಿಸುವ ವ್ಯವಸ್ಥೆ ಇದೆ. ಮುಂಬಯಿ ಪಾಲಿಕೆಯ ಹಾಗೆ ದೆಹಲಿ ಮಹಾಪಾಲಿಕೆಯೂ ಇದೇ ಪದ್ದತಿಯನ್ನು ಅನೇಕ ವರ್ಷಗಳ ವರೆಗೆ ಅವಲಂಬಿಸುತ್ತಿತ್ತು; ಆದರೆ ೨೦೦೧ ರಲ್ಲಿ ಪ್ರಾಣಿಪ್ರೇಮಿ ಹಾಗೂ ಇಂದಿನ ಭಾಜಪದ ಸಂಸದೆ ಮೇನಕಾ ಗಾಂಧಿ ಇವರು ಪ್ರಾಣಿಗಳ ಅಧಿಕಾರ ಮತ್ತು ರಕ್ಷಣೆಗಾಗಿ ಚಳುವಳಿಯನ್ನು ಹಮ್ಮಿಕೊಂಡರು ಹಾಗೂ ನಾಯಿಗಳಿಗೆ ವಿದ್ಯುತ್ ಆಘಾತ ನೀಡಿ ಕೊಲ್ಲುವುದು ಅಮಾನವೀಯ ಆಗಿದೆಯೆಂದು ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಅದಕ್ಕೆ ನ್ಯಾಯಾಲಯ ಈ ಪದ್ಧತಿಯಲ್ಲಿ ನಾಯಿಗಳನ್ನು ಸಾಯಿಸಬಾರದೆಂದು ನಿರ್ಬಂಧ ಹೇರಿತು. ಅನಂತರ ಗಾಂಧಿಯವರು ಮುಂಬಯಿ ಮಹಾಪಾಲಿಕೆಗೂ ವಿನಂತಿ ಮಾಡಿದಾಗ ಪಾಲಿಕೆಯು ನಾಯಿಗಳನ್ನು ಕೊಲ್ಲುವ ರೂಢಿಯನ್ನು ನಿಲ್ಲಿಸಿ ಅವುಗಳ ನಿರ್ಬೀಜೀಕರಣ ಪ್ರಾರಂಭಿಸಿತು.
೧೯೯೮ ರಲ್ಲಿ ನಾಯಿಗಳನ್ನು ಕೊಲ್ಲುವ ಪದ್ಧತಿಯನ್ನು ಪುನಃ ಪ್ರಾರಂಭಿಸಿತು. ಆಗ ಕೆಲವು ಪ್ರಾಣಿಮಿತ್ರ ಸಂಘಟನೆಗಳು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯ ಪಾಲಿಕೆಯ ನಿರ್ಣಯವನ್ನು ಸ್ಥಗಿತಗೊಳಿಸಿತು. ೨೦೧೧ ರಲ್ಲಿ ಬೀದಿ ನಾಯಿಗಳಿಗೆ ಸಂಬಂಧಿಸಿ ಉಚ್ಚ ನ್ಯಾಯಾಲಯಕ್ಕೆ ಬಂದಿರುವ ಒಂದು ಪ್ರಕರಣದಲ್ಲಿ ನಿರ್ಣಯ ನೀಡುವಾಗ ಉಪದ್ರವಿ ನಾಯಿಗಳನ್ನು ಸಾಯಿಸುವ ಪಾಲಿಕೆಯ ಕಾನೂನನ್ನು ನ್ಯಾಯಾಲಯ ಮನ್ನಿಸಿತು. ಆದ್ದರಿಂದ ಪ್ರಾಣಿಮಿತ್ರ ಸಂಘಟನೆಗಳು ಹಾಗೂ ‘ಎನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ’ ಇವು ಸರ್ವೋಚ್ಚ ನ್ಯಾಯಾಲಯ ದಲ್ಲಿ ಅರ್ಜಿ ಸಲ್ಲಿಸಿದವು. ಇದರ ನಿರ್ಣಯ ಇದುವರೆಗೆ ಬಂದಿಲ್ಲ. ಇದರಿಂದ ‘ನಾಯಿಗಳ ಅಧಿಕಾರದ ವಿಚಾರ ಮಾಡುವ ಒಂದು ಸಮೂಹ ಭಾರತದಲ್ಲಿದೆ; ಆದರೆ ಮನುಷ್ಯನ ವಿಚಾರ ಮಾಡುವ ಸಮೂಹವಿಲ್ಲ’, ಎಂದೇ ಹೇಳಬೇಕಾಗುತ್ತದೆ. ‘ನಾಯಿಗಳಿಂದಾಗುವ ತೊಂದರೆಯು ಪ್ರಾಣಿಮಿತ್ರ ಸಂಘಟನೆಗಳಿಗೆ ಅರಿವಾಗುವುದಿಲ್ಲವೋ ಅಥವಾ ಉದ್ದೇಶಪೂರ್ವಕ ಇದನ್ನು ದುರ್ಲಕ್ಷಿಸುತ್ತಾರೆಯೇ ? ಅಥವಾ ಅವರಿಗೆ ಯಾರಾದರೂ ಹೀಗೆ ವಿರೋಧಿಸಲು ಉತ್ತೇಜಿಸುತ್ತಿದ್ದಾರೆಯೆ ? ಎಂಬುದು ತಿಳಿಯುವುದಿಲ್ಲ.
ವರದಿ ತೆಗೆದುಕೊಳ್ಳಿರಿ !
ಈ ಹಿಂದೆ ದೇಶದಲ್ಲಿ ವಿವಿಧ ಸ್ಥಳಗಳಲ್ಲಿ ಸಣ್ಣ ಮಕ್ಕಳ ಮೇಲೆ ನಾಯಿಗಳು ಆಕ್ರಮಣ ಮಾಡಿದ ಅನೇಕ ಘಟನೆಗಳು ಘಟಿಸಿವೆ. ಆದರೂ ಆ ಬಗ್ಗೆ ಯಾರು ಕೂಡ ಧ್ವನಿ ಎತ್ತಲು ಸಿದ್ಧರಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡ ಇದರ ಕಡೆಗೆ ನಿಷ್ಕ್ರಿಯವಾಗಿ ನೋಡುತ್ತಿವೆ. ಯಾವಾಗಲೂ ‘ಸುಮೋಟೋ ಅಂದರೆ ಸ್ವಯಂಪ್ರೇರಿತವಾಗಿ ಅರ್ಜಿ ಸಲ್ಲಿಸುವ ನ್ಯಾಯಾಲಯಗಳು ಈ ವಿಷಯದಲ್ಲಿ ಕೃತಿ ಮಾಡುವುದಿಲ್ಲ’, ಎಂಬುದು ಜನರಿಗೆ ಕಾಣಿಸುತ್ತದೆ. ಇಂತಹ ಸಂವೇದನಾಶೂನ್ಯತೆಯು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಯಾಗಿದೆ. ‘ಜನರು, ಜನರಿಗಾಗಿ ಮತ್ತು ಜನರ ಮೂಲಕ ನಡೆಸಲ್ಪಡುವ ವ್ಯವಸ್ಥೆಯೆಂದರೆ ಪ್ರಜಾಪ್ರಭುತ್ವ’, ಎಂದು ಹೇಳಲಾಗುತ್ತದೆ; ಆದರೆ ಎಲ್ಲಿ ಬೀದಿನಾಯಿಗಳ ಸಮಸ್ಯೆ ಯಿಂದ ಜನರಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆಯಾಗು ತ್ತಿದೆಯೋ ಹಾಗೂ ಅದರ ಬಗ್ಗೆ ಇದೇ ಜನರು ಯಾವುದೇ ಪರಿಹಾರವನ್ನು ಹುಡುಕುವುದಿಲ್ಲವೋ, ಈ ಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕವೇ ಆಗಿದೆ. ನಾಯಿಗಳ ಸಮಸ್ಯೆಗೆ
ಕೆಲವೆಡೆ ನಾಗರಿಕರು ತಾವಾಗಿ ಕಾನೂನನ್ನು ಕೈಗೆತ್ತಿಕೊಂಡು ಬೀದಿನಾಯಿಗಳಿಗೆ ವಿಷ ನೀಡಿ ಸಾಯಿಸಿರುವ ಘಟನೆಗಳಿವೆ. ಒಬ್ಬ ಕಿಸೆಗಳ್ಳ ಸಿಕ್ಕಿಬಿದ್ದರೆ ಜನರು ಗುಂಪು ಸೇರಿ ಅವನನ್ನು ಥಳಿಸುತ್ತಾರೆ; ಅದೇ ರೀತಿ ನಾಯಿಗಳ ವಿರುದ್ಧ ಮಾಡಲು ಪ್ರಯತ್ನಿಸಿದರೆ ಅದು ಹೇಗೆ ತಪ್ಪಾಗುವುದು ? ಎನ್ನುವ ಯುಕ್ತಿವಾದ ಇಲ್ಲಿಯೂ ಆಗಬಹುದು.
ಉಪದ್ರವಿ ನಾಯಿಗಳನ್ನು ಕೊಲ್ಲುವ ಕಾನೂನು ದೇಶದಲ್ಲಿ ಇರಬೇಕು. ಇದರ ಬಗ್ಗೆ ‘ನಾಯಿಗಳ ಅಧಿಕಾರ’ ಎನ್ನುವ ಯಾವುದೇ ನಿಯಮ ಇರುವುದೆಂದರೆ ಇದು ಮನುಷ್ಯನ ಅಧಿಕಾರಕ್ಕೆ ಅನ್ಯಾಯವಾಗುತ್ತದೆ. ನಾವು ಅಪರಾಧ ಮಾಡುವವರಿಗೆ ಗಲ್ಲು ಶಿಕ್ಷೆ ನೀಡುತ್ತೇವೆ, ಆಗ ನಾವು ಅವರ ತಥಾಕಥಿತ ಅಧಿಕಾರದ ವಿಚಾರ ಮಾಡುವುದಿಲ್ಲ, ಸಮಾಜದ ವಿಚಾರ ಮಾಡುತ್ತೇವೆ. ಅದೇ ರೀತಿ ಉಪದ್ರವಿ ನಾಯಿಗಳನ್ನು ದೂರ ಅರಣ್ಯದಲ್ಲಿ ಬಿಟ್ಟು ಬರುವುದು ಅಥವಾ ಸಾಯಿಸುವುದು, ಈ ಮಾರ್ಗವನ್ನು ಆಯ್ದುಕೊಳ್ಳುವುದು ಯೋಗ್ಯವೆನಿಸುತ್ತದೆ. ಈ ಹಿಂದೆ ಈ ಕಾನೂನು ಅಸ್ತಿತ್ವದಲ್ಲಿತ್ತು. ಮೇನಕಾ ಗಾಂಧಿ ಇವರು ಕಳೆದ ೨೨ ವರ್ಷಗಳ ವರದಿಯನ್ನು ಸಂಗ್ರಹಿಸಬೇಕು. ಅವರು ‘ನ್ಯಾಯಾಲಯದಿಂದ ನಾಯಿಗಳನ್ನು ಸಾಯಿಸುವುದಕ್ಕೆ ನಿರ್ಬಂಧ ಹೇರುವ ಆದೇಶ ಪಡೆದಂದಿನಿಂದ ಇಷ್ಟರವರೆಗೆ ಸಮಾಜಕ್ಕೆ ಎಷ್ಟು ಲಾಭ ಹಾಗೂ ನಷ್ಟವಾಯಿತು’, ಎಂಬುದನ್ನು ಹೇಳಬೇಕು. ಇದರಿಂದ ಅವರಿಗೆ ಬೀದಿನಾಯಿಗಳ ಸಮಸ್ಯೆ ಭಯೋತ್ಪಾದನೆಯಷ್ಟೆ ಭಯಂಕರವಾಗಿದೆಯೆಂಬುದು ಅರಿವಾಗಬಹುದು.