ಬೋರ್ಡ್ ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಮಾವೇಶ
ವಿಜಯವಾಡ (ಆಂಧ್ರಪ್ರದೇಶ) – ಇಲ್ಲಿಯ ಶ್ರೀ ಶೈವ ಕ್ಷೇತ್ರದ ಪೀಠಾಧಿಪತಿ ಶ್ರೀ ಶ್ರೀ ಶಿವ ಸ್ವಾಮೀಜಿ ಇವರ ನೇತೃತ್ವದಲ್ಲಿ ‘ಆಝಾದ ಹಿಂದ ಬೋರ್ಡ್’ನ ಸ್ಥಾಪನೆ ಮಾಡಲಾಯಿತು. ದೇವಸ್ಥಾನದ ಸರಕಾರಿಕರಣದ ವಿರುದ್ಧ ಈ ಬೋರ್ಡ್ ಕಾರ್ಯ ಮಾಡಲಿದೆ. ಈ ಬೋರ್ಡಿನ ಮೂಲಕ ಆಂಧ್ರಪ್ರದೇಶದಲ್ಲಿನ ದೇವಸ್ಥಾನಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುವುದು.
೧. ಸರಕಾರಿಕರಣಗೊಂಡಿರುವ ದೇವಸ್ಥಾನಗಳನ್ನು ಮುಕ್ತಗೊಳಿಸಿ ಅವುಗಳನ್ನು ಭಕ್ತರ ಕೈಗೆ ನೀಡುವುದು, ಸರಕಾರಿಕರಣಗೊಂಡಿರುವ ದೇವಸ್ಥಾನದ ಆಸ್ತಿಯನ್ನು ರಕ್ಷಿಸುವುದು ಮತ್ತು ದೇವಸ್ಥಾನಗಳಲ್ಲಿ ಮತ್ತೆ ಧರ್ಮ ಶಿಕ್ಷಣದ ಕೇಂದ್ರಗಳನ್ನು ಮಾಡುವುದು, ಈ ಉದ್ದೇಶದಿಂದ ಆಝಾದ ಹಿಂದ ಬೋರ್ಡಿನ ಸ್ಥಾಪನೆ ಮಾಡಲಾಗಿದೆ.
೨. ಈ ಬೋರ್ಡಿನಲ್ಲಿ ಹಿಂದೂ ಸಂಘಟನೆಗಳು, ದೇವಸ್ಥಾನದ ಅರ್ಚಕರು, ಟ್ರಸ್ಟಿ, ಮಠಾಧಿಪತಿ, ದತ್ತಿ ಇಲಾಖೆಯ ನಿವೃತ್ತ ಅಧಿಕಾರಿ, ದೇವಸ್ಥಾನಕ್ಕಾಗಿ ಕಾರ್ಯ ಮಾಡುವ ನ್ಯಾಯವಾದಿಗಳು, ಮಾಹಿತಿ ಅಧಿಕಾರಿ ಕಾರ್ಯಕರ್ತರು ಮತ್ತು ಭಾರತೀಯ ಸರಕಾರಿ ಅಧಿಕಾರಿಗಳನ್ನು ಸದಸ್ಯರೆಂದು ಸಮಾವೇಶಗೊಳಿಸಲಾಗುವುದು. ಇದರಲ್ಲಿ ಹಿಂದೂ ಸಂಘಟನೆ ಎಂದು ಜನಜಾಗೃತಿ ಸಮಿತಿಯ ಸಮಾವೇಶ ಕೂಡ ಮಾಡಲಾಗಿದೆ. ಈ ಬೋರ್ಡ್ ಮುಜರಾಯಿ ಇಲಾಖೆಯಂತೆ ಸಮಾಂತರ ಕಾರ್ಯ ಮಾಡುವುದು.