Mosab Hassan Yousef : ಹಿಂದೂಗಳಿಗೆ ಯಾವುದೇ ಸಮಸ್ಯೆ ಇಲ್ಲ, ಆದರೂ ಹೆಚ್ಚಿನ ಹಿಂಸಾಚಾರದ ಘಟನೆಗಳ ಹಿಂದೆ ಇಸ್ಲಾಮವಾದಿಗಳೇ ಏಕೆ ಇರುತ್ತಾರೆ?

ಭಯೋತ್ಪಾದಕ ಸಂಘಟನೆ ಹಮಾಸ್‌ನ ಸಹ ಸಂಸ್ಥಾಪಕ ಶೇಖ್ ಹಸನ್ ಯೂಸುಫ್ ಅವರ ಹಿರಿಯ ಮಗ ಮೊಸಾಬ್ ಹಸನ್ ಯೂಸುಫ್

ಗಾಝಾ (ಪ್ಯಾಲೆಸ್ತೇನ್) – ಭಾರತೀಯರಿಗೆ ಯಾವುದೇ ಸಮಸ್ಯೆ ಇಲ್ಲ. ಹಿಂದೂಗಳಿಗೆ ಇತರ ಧರ್ಮಗಳ ಸಹಅಸ್ತಿತ್ವದಿಂದ ಯಾವುದೇ ತೊಂದರೆ ಇಲ್ಲ. ಕ್ರಿಶ್ಚಿಯನ್ನರು ಅಥವಾ ಯಹೂದಿಗಳಿಗೂ ಸಹ-ಅಸ್ತಿತ್ವದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಹಾಗಾದರೆ ಪ್ರತಿ ಬಾರಿಯೂ ಇಸ್ಲಾಂವಾದಿಗಳಿಂದಲೇ ಯಾಕೆ ಹಿಂಸೆ ನಡೆಸಲಾಗುತ್ತದೆ ? ಮೂಲಭೂತವಾದಿಗಳು ಎಲ್ಲೆಡೆ ಇದ್ದಾರೆ ಎಂಬುದು ಸತ್ಯವಾಗಿದೆ.; “ಆದರೆ ಹೆಚ್ಚಿನ ಬಾರಿ ಹಿಂಸಾಚಾರಗಳು ಇಸ್ಲಾಂವಾದಿಗಳಿಂದಲೇ ನಡೆಯುತ್ತದೆ. ಎಂಬುದನ್ನು ನಾವು ಸ್ಪಷ್ಟವಾಗಿ ಮತ್ತು ಜೋರಾಗಿ ಹೇಳಬೇಕು ಆಗ ಮಾತ್ರ ಇದು ನಿಲ್ಲುವುದು’ ಎಂದು ಹಮಾಸ್ ಸಹ-ಸಂಸ್ಥಾಪಕನ ಮಗ ಮೊಸಾಬ್ ಹಸನ್ ಯೂಸೆಫ್ ಹೇಳಿದ್ದಾನೆ.

1. ಕೆಲವು ದಿನಗಳ ಹಿಂದೆ ಯುಸೂಫನು, ಅಕ್ಟೋಬರ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ದಾಳಿ ಮತ್ತು ಭಯೋತ್ಪಾದಕರು ಪ್ರದರ್ಶಿಸಿದ ಕ್ರೌರ್ಯದಿಂದ ನನಗೆ ಏನೂ ಆಶ್ಚರ್ಯವಾಗಲಿಲ್ಲ ಎಂದು ಹೇಳಿದ್ದನು.

2. ಯೂಸುಫ್ ಇಂಗ್ಲಿಷ್ ಸುದ್ದಿ ವಾಹಿನಿಯೊಂದಕ್ಕೆ ನಡೆಸಿದ ಸಂದರ್ಶನದಲ್ಲಿ ಭಾರತೀಯರು ಹಮಾಸ್ ವಿರುದ್ಧ ನಿಲ್ಲಬೇಕು, ಏಕೆಂದರೆ ಹಮಾಸ್ ಒಂದು ಮೂಲಭೂತವಾದಿ ಸಂಘಟನೆಯಾಗಿದೆ. ಹಮಾಸ್ ಗೆ ನಾಗರಿಕರ ಮೇಲೆ ದಾಳಿ ಮಾಡುವ ಸುದೀರ್ಘ ಇತಿಹಾಸವಿದೆ. ಹಮಾಸ್ ಸ್ಥಾಪನೆಯಾದಾಗಿನಿಂದಲೂ ಒಂದೇ ಗುರಿಯನ್ನು ಹೊಂದಿದೆ ಮತ್ತು ಅದೆಂದರೆ ‘ಇಸ್ರೇಲ್ ಅನ್ನು ನಾಶಮಾಡುವುದು.’ ಅವರಿಗೆ ಇಸ್ರೇಲ್ ಅಸ್ತಿತ್ವವೇ ಒಪ್ಪಿಗೆಯಿಲ್ಲ ಎಂದೂ ಹೇಳಿದ್ದಾರೆ

ಮೊಸಾಬ್ ಹಸನ್ ಯೂಸುಫ್ ಯಾರು?

ಮೊಸಾಬ್ ಹಸನ್ ಯೂಸುಫ್ ಇವನು ಭಯೋತ್ಪಾದಕ ಸಂಘಟನೆ ಹಮಾಸ್‌ನ ಸಹ ಸಂಸ್ಥಾಪಕ ಶೇಖ್ ಹಸನ್ ಯೂಸುಫ್ ಅವರ ಹಿರಿಯ ಮಗ. 2000 ರ ದಶಕದ ಆರಂಭದಲ್ಲಿ, ಅವನು ಶಿನ್ ದ್ವೀಪದಲ್ಲಿ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದನು. ಇದರಿಂದಾಗಿ ಅವನಿಗೆ ‘ಹಸಿರು ರಾಜಕುಮಾರ’ ಎಂಬ ಬಿರುದು ಬಂದಿತ್ತು. 45 ವರ್ಷದ ಯೂಸುಫ್ ಇವನು ಪ್ಯಾಲೆಸ್ತೀನ್‌ನ ರಾಮಲ್ಲಾದಲ್ಲಿ ಜನಿಸಿದ್ದನು ಮತ್ತು ಅವನಿಗೆ 1986 ರಲ್ಲಿ ಹಮಾಸ್ ಸ್ಥಾಪನೆಯಾದ ದಿನ ನೆನಪಿದೆ.

ಸಂಪಾದಕೀಯ ನಿಲುವು

ಪ್ಯಾಲೆಸ್ತೇನ್ಅನ್ನು ಮತ್ತು ಪರ್ಯಾಯವಾಗಿ ಹಮಾಸ್ ಅನ್ನು ಬೆಂಬಲಿಸುವ ಕಾಂಗ್ರೆಸ್, ಎಂ.ಐ.ಎಂ.ಗಳಂತಹ ರಾಜಕೀಯ ಪಕ್ಷಗಳು, ಪ್ರಗತಿ(ಅಧೋ)ಗಾಮಿ ಸಂಘಟನೆಗಳು ಮತ್ತು ಭಾರತೀಯ ಮುಸಲ್ಮಾನರಿಗೆ ಈಗ ಇದರ ಬಗ್ಗೆ ಏನಾದರೂ ಹೇಳಲಿಕ್ಕಿದೆಯೇ ?