೩ ಇಸ್ರೇಲ್ ಒತ್ತೆಯಾಳು ಮಹಿಳೆಯರ ವಿಡಿಯೋ ಪ್ರಸಾರ ಮಾಡಿದ ಹಮಾಸ್ !

ತೆಲ್ ಅವಿವ (ಇಸ್ರೇಲ್) – ನೀವು ನಮ್ಮೆಲ್ಲರನ್ನು ಬಿಡುಗಡೆಗೊಳಿಸಬೇಕಿತ್ತು, ನೀವು ನಮ್ಮೆಲ್ಲರನ್ನು ಬಿಡುಗಡೆಗೊಳಿಸುವುದಕ್ಕೆ ಬದ್ಧರಾಗಿರುವಿರಿ. ಆದರೆ ಅದರ ಬದಲು ನಾವು ನಿಮ್ಮ ರಾಜಕೀಯ, ರಕ್ಷಣೆ, ಸೈನ್ಯ ಮತ್ತು ರಾಜನೈತಿಕ ವೈಫಲ್ಯವನ್ನು ಅನುಭವಿಸುತ್ತಿದ್ದೇವೆ. ಹಮಾಸನ ಮಾರಣಾಂತಿಕ ದಾಳಿಯಿಂದ ಇಸ್ರೇಲ್ ನಾಗರೀಕರ ರಕ್ಷಣೆ ಮಾಡುವಲ್ಲಿ ಮತ್ತು ಅವರನ್ನು ಸ್ವದೇಶಕ್ಕೆ ಕರೆತರುವಲ್ಲಿ ನೇತಾನ್ಯಾಹೂ ವಿಫಲರಾಗಿದ್ದಾರೆ ಎಂದು ಇಸ್ರೈಲ್ ಒತ್ತೆಯಾಳಾಗಿರುವವರು ಟೀಕಿಸಿರುವ ಒಂದು ವಿಡಿಯೋ ಹಮಾಸನಿಂದ ಪ್ರಸಾರ ಮಾಡಲಾಗಿದೆ. ಇದಲ್ಲದೆ ಅವರು ಪ್ಯಾಲೇಸ್ಟೇನಿ ಕೈದಿಗಳ ಬಿಡುಗಡೆ ಮಾಡಿದರೆ ಅದಕ್ಕೆ ಬದಲಾಗಿ ಒತ್ತೆ ಯಾಳಾಗಿರುವವರನ್ನು ಬಿಡುಗಡೆಗೊಳಿಸುವುದಕ್ಕಾಗಿ ಒಪ್ಪಂದ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ವಿಡಿಯೋಗೆ ಇಸ್ರೈಲ್ ನ ಪ್ರಧಾನಮಂತ್ರಿ ಬೆಂಜಮೀನ್ ನೇತಾನ್ಯಾಹೂ ಇವರು ‘ಅಮಾನುಷ ಮನೋವೈಜ್ಞಾನಿಕ ಪ್ರಚಾರ’ ಎಂದು ಹೇಳಿದ್ದಾರೆ.
ಹಮಾಸನಿಂದ ಪ್ರಸಾರ ಮಾಡಿರುವ ವಿಡಿಯೋದಲ್ಲಿ ಮೂರು ಮಹಿಳಾ ಒತ್ತೆಯಾಳುಗಳು ಮಾತನಾಡುತ್ತಿರುವುದು ಕಾಣುತ್ತಿದೆ. ಅಕ್ಟೋಬರ್ ೭ ರಿಂದ ಅವರು ಈ ಹಮಾಸನ ಬಂಧನದಲ್ಲಿದ್ದಾರೆ. ಟ್ರುಪಾನೊಬ್, ಡ್ಯಾನಿಯಲ್ ಅಲೋನಿ ಮತ್ತು ರಿಮೋವ್ ಕಿರ್ಷ್ಟ ಎಂಬುದು ಈ ಈ ಮಹಿಳೆಯರ ಹೆಸರಗಳಾಗಿವೆ. ಒಂದು ಮುಚ್ಚಿರುವ ಕೋಣೆಯಲ್ಲಿನ ಕುರ್ಚಿಯ ಮೇಲೆ ಅವರು ಕುಳಿತಿದ್ದಾರೆ. ಈ ವಿಡಿಯೋ ಬೆಳಕಿಗೆ ಬಂದ ನಂತರ ಬೆಂಜಮೀನ್ ನೇತಾನ್ಯಾಹೂ ಇವರು, ಒತ್ತೆಯಾಳುಗಳನ್ನು ಆದಷ್ಟು ಬೇಗನೆ ಸ್ವದೇಶಕ್ಕೆ ಕರೆಸಿಕೊಳ್ಳುವೆವು. ಹಮಾಸ ಅಪಹರಿಸಿರುವ ಇಸ್ರೇಲಿ ನಾಗರಿಕರ ಕುರಿತು ನಮಗೆ ಕಾಳಜಿ ಇದೆ. ನಾವು ಎಲ್ಲಾ ಕೈದಿಗಳನ್ನು ಮತ್ತು ನಾಪತ್ತೆ ಆಗಿರುವ ಜನರನ್ನು ಮನೆಗೆ ಹಿಂತಿರುಗಿ ತರಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ
ಇಸ್ರೇಲ್ ಹಮಾಸ್ ಯುದ್ಧದ ಅಕ್ಟೋಬರ್ ೩೧ ರ ಚಿತ್ರಗಳು
|
Hormuz Oil Tankers Explodes : ಎರಡು ತೈಲ ಟ್ಯಾಂಕರ್ ನೌಕೆಗಳಲ್ಲಿ ಸ್ಫೋಟ
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ