ಮಹಿಳೆಯರಿಗೆ ಸಂಬಂಧಿಸಿದ ಅಪರಾಧಿಗಳ ಮೇಲೆ ಉತ್ತರ ಪ್ರದೇಶ ಪೊಲೀಸರಿಂದ ಕಠಿಣ ಕ್ರಮ !

  • ಯೋಗಿ ಆದಿತ್ಯನಾಥ ಇವರ ದೃಢವಾದ ನಿಲುವಿನ ಪರಿಣಾಮ !

  • ಆರೋಪಿಗಳ ನಡುವೆ ನಡೆದ ಚಕಮಕಿಯಲ್ಲಿ ಒಬ್ಬ ಹತ ಮತ್ತು ಇನ್ನೊಬ್ಬನ ಕಾಲಿಗೆ ಗುಂಡು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧದ ವಿರುದ್ಧ ಉತ್ತರಪ್ರದೇಶ ಪೊಲೀಸರು ಹೆಚ್ಚು ಕಠೋರವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಇದರಲ್ಲಿನ ೨ ಘಟನೆ ರಾಜ್ಯದಲ್ಲಿನ ಗಾಝೀಯಾಬಾದ್ ಮತ್ತು ಗ್ರೇಟರ್ ನೋಯ್ಡಾಗಳಲ್ಲಿ ನಡೆದಿವೆ. ಕೆಲವು ದಿನಗಳ ಹಿಂದೆ ಪೊಲೀಸ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸಭೆ ನಡೆದಿತ್ತು. ಆ ಸಮಯದಲ್ಲಿ ಅವರು, ‘ಮಹಿಳೆಯರ ವಿರುದ್ಧ ಯಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪರಾಧ ನಡೆಯುತ್ತದೆಯೋ ಆ ಪ್ರದೇಶದಲ್ಲಿನ ಪೊಲೀಸರು ಅವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳದೆ ಇದ್ದರೆ, ಸಂಬಂಧಿತ ಪೊಲೀಸ ಅಧಿಕಾರಿಗೆ ಇದಕ್ಕೆ ಹೊಣೆ ಎಂದು ನಿಶ್ಚಯಿಸಲಾಗುವುದೆಂದು ಸೂಚನೆ ನೀಡಿದ್ದರು. ಇದರಿಂದ ಪ್ರತ್ಯಕ್ಷ ಕ್ರಮ ಕೈಗೊಳ್ಳುವುದು ಕಾಣುತ್ತಿದೆ.

೧. ಮೊದಲನೆಯ ಉದಾಹರಣೆ ಗಾಝೀಯಾಬಾದನ ಇಂಜಿನಿಯರಿಂಗ್ ಶಿಕ್ಷಣ ಪಡೆಯುವ ಕೀರ್ತಿ ಎಂಬ ಯುವತಿಗೆ ಗಾಯಗೊಳಿಸಿ ಆಕೆಯ ಮೊಬೈಲ್ ಅಪಹರಿಸಲಾಗಿತ್ತು. ಆ ಸಮಯದಲ್ಲಿ ಆಕೆಯ ತಲೆಗೆ ಗಂಭೀರ ಗಾಯವಾಗಿರುವುದರಿಂದ ಚಿಕಿತ್ಸೆ ಸಮಯದಲ್ಲಿ ಆಕೆ ಸಾವನ್ನಪ್ಪಿದಳು. ಆಕೆಯ ಮೊಬೈಲ್ ಕಳುವ ಮಾಡಿರುವ ಆರೋಪಿಯನ್ನು ಬಂಧಿಸಲಾಗಿದೆ. ಹಾಗೂ ಇನ್ನೊಂದು ಆರೋಪಿ ಪರಾರಿ ಆಗಿದ್ದನು. ಪೊಲೀಸರು ಬಲೆ ಬೀಸಿ ಅವನನ್ನು ಬಂಧಿಸುವ ಪ್ರಯತ್ನ ಮಾಡಿದರು. ಆ ಸಮಯದಲ್ಲಿ ಅವನು ಗುಂಡಿನ ದಾಳಿ ನಡೆಸಿರುವುದರಿಂದ ಪೊಲೀಸರು ಕೂಡ ಅವನ ಮೇಲೆ ಗುಂಡು ಹಾರಿಸಿದರು. ಅವನ ಕಾಲಿಗೆ ಗುಂಡು ತಾಗಿದೆ. ಚಿಕಿತ್ಸೆಯ ಸಮಯದಲ್ಲಿ ಅವನು ಸಾವನ್ನಪ್ಪಿದ್ದಾನೆ.

೨. ಇನ್ನೊಂದು ಘಟನೆ ಗ್ರೇಟರ್ ನೋಯ್ಡಾ ಇಲ್ಲಿಯದಾಗಿದ್ದು ‘ಬ್ಲಿಂಕ್ ಇಟ್’ ಕಂಪನಿಯ ‘ಡಿಲೆವರಿ ಬಾಯ್’ ಓರ್ವ ಯುವತಿಯ ಮನೆಗೆ ಸಾಮಾನ ತಲುಪಿಸುವ ಸಮಯದಲ್ಲಿ ಆಕೆ ಒಬ್ಬಂಟಿಯಾಗಿರುವುದನ್ನು ನೋಡಿ ಆಕೆಯ ಮೇಲೆ ಬಲತ್ಕಾರ ಮಾಡುವ ಪ್ರಯತ್ನ ಮಾಡಿದನು. ಆಕೆಯ ಕಿರುಚಾಟ ಕೇಳಿ ಅವನು ಪರಾರಿ ಆದನು; ಆದರೆ ಪೊಲೀಸರು ಅವನನ್ನು ಹುಡುಕಿ ಬಂಧಿಸಿದ್ದಾರೆ. ಈ ಸಮಯದಲ್ಲಿ ಅವನು ಪೋಲೀಸರ ಪಿಸ್ತೂಲು ಕಸಿದುಕೊಂಡು ಓಡಿ ಹೋಗುವ ಪ್ರಯತ್ನ ಮಾಡಿದನು, ಆ ಸಮಯದಲ್ಲಿ ಪೊಲೀಸರು ಹಾರಿಸಿದ ಗುಂಡಿನಿಂದ ಅವನು ಗಾಯಗೊಂಡನು.

೩. ಯೋಗಿ ಆದಿತ್ಯನಾಥ್ ಇವರು ‘ಮಹಿಳೆಯರ ವಿರೋಧದಲ್ಲಿನ ಅಪರಾಧಗಳು ನಿಲ್ಲಬೇಕು’, ಅದಕ್ಕಾಗಿ ತೆಗೆದುಕೊಂಡುರುವ ಕಠೋರ ನಿಲುವು ಪೊಲೀಸರ ಕ್ರಮದಿಂದ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಕೇವಲ ಉತ್ತರಪ್ರದೇಶ ಅಷ್ಟೇ ಅಲ್ಲದೆ, ದೇಶಾದ್ಯಂತ ಮಹಿಳೆಯರ ಮೇಲಿನ ಅತ್ಯಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಕೇಂದ್ರ ಸರಕಾರದಿಂದ ಅಭಿಯಾನ ರೂಪಿಸುವುದು ಅಪೇಕ್ಷಿತ !