ಲಕ್ಷ್ಮಣಪುರಿ(ಉತ್ತರಪ್ರದೇಶ) – ಕೇರಳದಲ್ಲಿ ಕ್ರಿಶ್ಚಿಯನ್ನರ ಪ್ರಾರ್ಥನಾ ಸ್ಥಳದಲ್ಲಿ ನಡೆದ ಬಾಂಬ್ ಸ್ಪೋಟದ ನಂತರ ಉತ್ತರಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ. ವಿಶೇಷ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ ಕುಮಾರ ಹೇಳಿಕೆಯಂತೆ ಇಸ್ರೇಲ್ ಮತ್ತು ಹಮಾಸ ಯುದ್ಧದ ಹಿನ್ನಲೆಯಲ್ಲಿ ತನಿಖಾ ಸಂಸ್ಥೆ ಎಚ್ಚರಿಕೆ ನೀಡಿದೆ. ಕೇರಳದ ಘಟನೆಯ ನಂತರ ಹೆಚ್ಚಿನ ಮಾಹಿತಿ ಪಡೆದಿದ್ದೇವೆ. ಇಸ್ರೇಲ್ ನ ವಿರುದ್ಧ ನಡೆಯುವ ಆಂದೋಲನದ ಬಗ್ಗೆ ಗಮನ ಇಟ್ಟಿದ್ದೇವೆ.ನಾವು ಕೇರಳದ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳ ಸಂಪರ್ಕದಲ್ಲಿದ್ದೇವೆ.
ಉತ್ತರಪ್ರದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ,ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ,ವಹದತ್ ಎ ಇಸ್ಲಾಮಿ ಮೊದಲಾದ ಜಿಹಾದಿ ಸಂಘಟನೆಗಳ ಶಂಕಿತರನ್ನು ಶೋಧಿಸಲಾಗುತ್ತಿದೆ.ಕೆಲ ದಿನಗಳ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ ಲಕ್ಷಣಪುರಿ,ಭದೋಹಿ,ಸಂತ ಕಬೀರನಗರ,ಬಲಿಯಾ ಮೊದಲಾದ ೭ ಜಿಲ್ಲೆಗಳಲ್ಲಿ ಈ ಸಂಘಟನೆಗಳ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯು ದಾಳಿ ನಡೆಸಿತ್ತು.
ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಬಾಂಬ್ ದಾಳಿಯ ಹೊಣೆಯನ್ನು ಒಪ್ಪಿಕೊಂಡ !
ಕೇರಳ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ (ಕಾನೂನು ಮತ್ತು ಸುವ್ಯವಸ್ಥೆ) ಎಂ. ಆರ್. ಅಜಿತ ಕುಮಾರ್ ಇವರು, ಒಬ್ಬ ವ್ಯಕ್ತಿ ತ್ರಿಶೂರ್‌ನ ಕೋಡ್ಕರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ಹೇಳಿದ್ದಾರೆ. ಬಾಂಬ್ ಸ್ಫೋಟಕ್ಕೆ ನಾನೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಅವನ ಹೆಸರು ಡೊಮಿನಿಕ್ ಮಾರ್ಟಿನ್ ಎಂದು ಹೇಳಿದ್ದೂ ತಾನು ಯೆಹೋವನ ಸಾಕ್ಷಿಗಳ ಗುಂಪಿನ ಸದಸ್ಯನೆಂದು ಅವನು ಹೇಳಿಕೊಂಡನು. ನಾವು ಎಲ್ಲಾ ರೀತಿಯಿಂದಲೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.