ಕೇರಳದ ಕಮ್ಯುನಿಸ್ಟ್ ಯುತಿ ಸರಕಾರದ ಹಿಂದೂದ್ವೇಷಿ ಆದೇಶ
ತಿರುವನಂತಪುರಂ (ಕೇರಳ) – ಕೇರಳ ಉಚ್ಚ ನ್ಯಾಯಾಲಯವು ಚಿರಾಯಂಕಿಳು ದೇವಸ್ಥಾನದ ಪರಿಸರದಲ್ಲಿ ಶಸ್ತ್ರಾಸ್ತ್ರಗಳ ಪ್ರಶಿಕ್ಷಣ ನೀಡಬಾರದು, ಇದಕ್ಕಾಗಿ ಪೊಲೀಸರಿಗೆ ಆದೇಶ ನೀಡಿತ್ತು. ಈ ನಿರ್ಣಯದ ಆಧಾರವಾಗಿ ರಾಜ್ಯದಲ್ಲಿನ ದೇವಸ್ಥಾನದ ಪರಿಸರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರುವ ಆದೇಶ ಕೇರಳ ಸರಕಾರದ ನೇತೃತ್ವದಲ್ಲಿ ದೇವಸ್ವಂ ಮಂಡಳಿಯಿಂದ ನೀಡಲಾಗಿದೆ. ಶಬರಿಮಲೈ ದೇವಸ್ಥಾನ ಸಹಿತ ಕೇರಳ ರಾಜ್ಯದಲ್ಲಿನ ೧ ಸಾವಿರದ ೨೦೦ ಪ್ರಮುಖ ದೇವಸ್ಥಾನಗಳು ರಾಜ್ಯ ಸರಕಾರದ ಆಧೀನದಲ್ಲಿದೆ. ಚಿರಾಯಂಕಿಳು ದೇವಸ್ಥಾನದ ಪರಿಸರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಜನರಿಗೆ ಶಸ್ತ್ರಾಸ್ತ್ರದ ಪ್ರಶಿಕ್ಷಣ ನೀಡಲಾಗುತ್ತಿದೆ. ಇದರ ಸಂದರ್ಭದಲ್ಲಿ ಅರ್ಜಿ ದಾಖಲಿಸಲಾಗಿತ್ತು. ಆ ಸಮಯದಲ್ಲಿ ನ್ಯಾಯಾಲಯವು ಪೊಲೀಸರಿಗೆ ಈ ಮೇಲಿನ ಆದೇಶ ನೀಡಿದೆ.
೧. ಅಕ್ಟೋಬರ್ ೨೦ ರಂದು ದೇವಸ್ವಂ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ, ದೇವಸ್ಥಾನದ ಪರಿಸರದಲ್ಲಿ ಹಾಗೂ ದೇವಸ್ಥಾನದ ನ್ಯಾಯ ವ್ಯಾಪ್ತಿಯಲ್ಲಿನ ಭೂಮಿಯ ಮೇಲೆ ಆಂದೋಲನಗಳಿಗೆ ನಿಷೇಧ ಹೇರಗಾಲಾಗಿದೆ. ದೇವಸ್ವಂ ಮಂಡಳಿಯ ಅನುಮತಿ ಇಲ್ಲದಿದ್ದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಇತರ ಸಂಘಟನೆಗಳ ಕಾರ್ಯಕ್ರಮ ಮೇಲೆ ನಿಷೇಧ ಹೇರಲಾಗಿದೆ. ಈ ಸಂಘಟನೆಗಳಿಂದ ದೇವಸ್ಥಾನದ ಪರಿಸರದಲ್ಲಿ ಶಾಖೆ ನಡೆಯುತ್ತಿದ್ದರೆ ಅದರ ಮೇಲೆ ಮಂಡಳದ ದೇವಸ್ಥಾನ ರಕ್ಷಣಾ ವ್ಯವಸ್ಥೆಯಿಂದ ಅನಿರೀಕ್ಷಿತ ದಾಳಿ ನಡೆಸಿರಿ ಎಂದು ಆದೇಶ ನೀಡಲಾಗಿದೆ ಎಂದು ಹೇಳಿದೆ.
೨. ದೇವಸ್ವಂ ಮಂಡಳಿ, ಸಂಘ ಮತ್ತು ಇತರ ಸಂಘಟನೆಗಳಿಂದ ದೇವಸ್ಥಾನದ ಪರಿಸರದಲ್ಲಿ ಅತಿಕ್ರಮಣ ಮಾಡಿ ದೇವಸ್ಥಾನದ ಪಾವಿತ್ರ್ಯ ಹಾಗೂ ಭಕ್ತರ ಹಿತದ ವಿರುದ್ಧ ಕಾರ್ಯ ಮಾಡುತ್ತಿದ್ದಾರೆ. ಎಂದೂ ದೂರುಗಳ ಬಂದಿರುವ ವರದಿ ಇದೆ. (ಶಬರಿಮಲೈ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಲು ಆಗ್ರಹಿಸಿ ಅಲ್ಲಿ ಹಾಗೆ ಮಾಡಲಾಯಿತು, ಆದ್ದರಿಂದ ಹಿಂದೂ ವಿರೋಧಿ ನಿರ್ಣಯ ತೆಗೆದುಕೊಳ್ಳುವ ಕಮಿನಿಸ್ಟ್ ಸರಕಾರ ದೇವಸ್ವಂ ಮಂಡಳಿಗೆ ದೇವಸ್ಥಾನದ ಪಾವಿತ್ರದ ಬಗ್ಗೆ ಮಾತನಾಡುವ ಅಧಿಕಾರ ಇದೆಯೆ ? – ಸಂಪಾದಕರು) ರಾತ್ರಿಯ ಸಮಯದಲ್ಲಿ ಈ ಸಂಸ್ಥೆ ಶಸ್ತ್ರಾಸ್ತ್ರ ಪ್ರಶಿಕ್ಷಣ, ಸಾಮೂಹಿಕ ವ್ಯಾಯಾಮ ಮತ್ತು ಸಂಚಲನ ನಡೆಸುತ್ತದೆ.
ಸಂಪಾದಕೀಯ ನಿಲುವುಕಮ್ಯುನಿಸ್ಟ್ ಸರಕಾರ ನಾಳೆ ದೇವಸ್ಥಾನದ ಪರಿಸರದಲ್ಲಿ ಮುಸಲ್ಮಾನರಿಗೆ ನಮಾಜಗಾಗಿ ಆದೇಶ ಹೊರಡಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ ! ದೇವಸ್ಥಾನಗಳು ಸರಕಾರದ ನಿಯಂತ್ರಣದಲ್ಲಿದ್ದರೆ ಏನು ಆಗುತ್ತದೆ, ಇದೇ ಇದರ ಒಂದು ಉದಾಹರಣೆ ! ಕೇಂದ್ರ ಸರಕಾರದಿಂದ ಇದನ್ನು ಗಂಭೀರವಾಗಿ ಪರಿಗಣಿಸಿ, ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವುದಕ್ಕಾಗಿ ಕಾನೂನು ರೂಪಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ ! |