ಐಯಝಾಲ (ಮಿಜೋರಾಮ) – ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಇಲ್ಲಿಗೆ (ಮಿಜೋರಾಮ ರಾಜ್ಯದಲ್ಲಿ) ಬಂದಾಗ ನಾನು ಅವರೊಂದಿಗೆ ವೇದಿಕೆಯಲ್ಲಿ ಇರುವುದಿಲ್ಲ. ಪ್ರಧಾನಮಂತ್ರಿಯವರು ಇಲ್ಲಿಗೆ ಬಂದು ತಮ್ಮ ವಿಚಾರಗಳನ್ನು ವೇದಿಕೆಯಲ್ಲಿ ಒಬ್ಬರೇ ಮಂಡಿಸಿದರೆ ಉತ್ತಮವಾಗುವುದು. ಅವರ ನಂತರ ನಾನು ಪ್ರತ್ಯೇಕವಾಗಿ ವೇದಿಕೆಗೆ ಬರುತ್ತೇನೆ. ಮಿಜೋರಾಮನ ಜನರು ಕ್ರೈಸ್ತರಾಗಿದ್ದಾರೆ. ಮಣಿಪುರದಲ್ಲಿ ಮೈತೆಯಿ (ಹಿಂದೂ ಸಮುದಾಯ) ಜನರು ನೂರಾರು ಚರ್ಚ್‌ಗಳನ್ನು ಸುಟ್ಟಾಗ, ಮಿಜೋರಾಮನ ಎಲ್ಲಾ ಜನರು ಪ್ರತಿಭಟಿಸಿದರು. ಇಂತಹ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸಹಾನುಭೂತಿ ತೋರಿಸುವುದು ನನ್ನ ಪಕ್ಷಕ್ಕೆ ದೊಡ್ಡ ನಕಾರಾತ್ಮಕ ವಿಷಯವಾಗಿರಲಿದೆ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಾಮಥಂಗಾ ಹೇಳಿದ್ದಾರೆ. ಮಿಝೋರಾಮನಲ್ಲಿ ನವೆಂಬರ್ 7 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಅಕ್ಟೋಬರ್ 30 ರಂದು ಪ್ರಧಾನಮಂತ್ರಿ ಮೋದಿಯವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಸಭೆಗಾಗಿ ಪಶ್ಚಿಮ ಮಿಜೋರಾಮನ ಮಮಿತ್ ಗ್ರಾಮಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.
ಝೋರಾಮಥಾಂಗಾ ಅವರ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್ ಇದು ಭಾರತೀಯ ಜನತಾ ಪಕ್ಷದ ಮುಖಂಡತ್ವದಲ್ಲಿ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ ಮತ್ತು ಕೇಂದ್ರದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸದಸ್ಯವಾಗಿದೆ.
ಸಂಪಾದಕೀಯ ನಿಲುವುಮಣಿಪುರದಲ್ಲಿ ಕುಕಿ ಕ್ರೈಸ್ತರು ಹಿಂದೂಗಳ ಹತ್ಯೆ ಮಾಡಿದರು, ಅವರ ಮೇಲೆ ದಾಳಿ ಮಾಡಿದರು, ಈ ವಿಷಯದ ಬಗ್ಗೆ ಜೋರಾಮಥಾಂಗಾ ಏಕೆ ಮಾತನಾಡುವುದಿಲ್ಲ ? |