ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನ !

ಪೂ. ಉಮೇಶ ಶೆಣೈ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಯವರು ವ್ಯಕ್ತಿಯ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪಾಯೋಗ ವನ್ನು ನಿರ್ಮಿಸಿದ್ದಾರೆ. ಇದರ ಅಂತರ್ಗತ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗೆ ಆದ್ಯತೆ ನೀಡಲಾಗಿದೆ. ಈಶ್ವರಪ್ರಾಪ್ತಿಯಾಗಲು ಮನಸ್ಸಿನ ಶುದ್ಧೀಕರಣ ವಾಗುವುದು ಮಹತ್ವದ್ದಾಗಿದ್ದು ಸ್ವಭಾವದೋಷ ಮತ್ತು ಅಹಂಅನ್ನು ದೂರಗೊಳಿಸುವುದು ಅತ್ಯಂತ ಆವಶ್ಯಕವಾಗಿದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯ ಮಹತ್ವವನ್ನು ಮನಸ್ಸಿನ ಮೇಲೆ ಬಿಂಬಿಸಲು ಸನಾತನದ ೧೭ ನೇ ಸಂತರಾದ ಪೂ. ಉಮೇಶ ಶೆಣೈ ಇವರು ಮಾಡಿದ ಮಾರ್ಗದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ. (ಮುಂದುವರಿದ ಭಾಗ)

೮. ಸ್ವಯಂಸೂಚನೆಯ ಸತ್ರಗಳನ್ನು ಏಕಾಗ್ರತೆಯಿಂದ ಮಾಡಿದರೆ ಅವು ಅಂತರ್ಮನಸ್ಸಿನ ವರೆಗೆ ತಲುಪುತ್ತವೆ, ಎಂಬುದು ಖಂಡಿತ !

ಅದಕ್ಕಾಗಿ ೫ ನಿಮಿಷ ಜಪ ಮಾಡಿ ಸ್ವಯಂಸೂಚನೆಗಳನ್ನು ಕೊಡಲು ಆರಂಭಿಸಬೇಕು.

೯. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಆದ ನಂತರವೇ ಗುಣಸಂವರ್ಧನೆ ಆಗಲು ಸಹಾಯವಾಗುವುದು : ಸ್ವಯಂಸೂಚನೆ ಸಕಾರಾತ್ಮಕವಾಗಿದೆಯೇ ? ಸ್ವಭಾವ ದೋಷಕ್ಕೆ ಸಂಬಂಧಿಸಿದ ಪ್ರಸಂಗವನ್ನು ಯೋಗ್ಯ ರೀತಿಯಲ್ಲಿ ಉಲ್ಲೇಖಿಸಲಾಗಿದೆಯೇ ? ಎಂಬುದನ್ನು ನೋಡುವುದು ಮಹತ್ವದ್ದಾಗಿದೆ. ಸೂಚನೆಯ ಜೊತೆಗೆ ಯೋಗ್ಯ ದೃಷ್ಟಿಕೋನ ವನ್ನು ನೀಡಿದರೆ ಅದು ಅಂತರ್ಮನಸ್ಸಿನವರೆಗೆ ಹೋಗಿ ಸ್ವಭಾವದೋಷವನ್ನು ತೆಗೆದುಹಾಕಲು ಸಹಾಯವಾಗುತ್ತದೆ. ತುಂಬಾ ಆವರಣವಿದ್ದಾಗ ಸೂಚನೆಗಳನ್ನು ನೀಡಿದರೆ ಹೆಚ್ಚು ಉಪಯೋಗವಾಗುವುದಿಲ್ಲ. ಆದ್ದರಿಂದ ಆವರಣವನ್ನು ತೆಗೆದೇ ಸೂಚನೆಗಳನ್ನು ಕೊಡಬೇಕು. ಅಂತರ್ಮನಸ್ಸಿನಲ್ಲಿರುವ ಸಂಸ್ಕಾರಗಳು ಬಾಹ್ಯಮನಸ್ಸಿಗೆ ತಿಳಿಯುವುದಿಲ್ಲ. ಅದಕ್ಕಾಗಿ ಸ್ವಯಂಸೂಚನೆಗಳನ್ನೇ ಕೊಡಬೇಕು. ಬಾಹ್ಯಮನಸ್ಸು ಸ್ವೀಕರಿಸುತ್ತದೆ; ಆದರೆ ಅಂತರ್ಮನಸ್ಸು ಸ್ವೀಕರಿಸಲು ಬಿಡುವುದಿಲ್ಲ. ಅದಕ್ಕಾಗಿಯೇ ಸ್ವಯಂಸೂಚನೆಗಳನ್ನು ಅಂತರ್ಮನಸ್ಸಿಗೆ ತಲುಪುವವರೆಗೆ ಹೆಚ್ಚೆಚ್ಚು ಕೊಡಬೇಕು. ಸ್ವಯಂಸೂಚನೆಗಳು ಉತ್ತಮ ರೀತಿಯಲ್ಲಿ ಆದರೆ ಮನಸ್ಸು ಶುದ್ಧ ಮತ್ತು ಸ್ಥಿರವಾಗಿ ಆನಂದದ ಅನುಭೂತಿ ಬರುತ್ತದೆ. ಸ್ವಯಂಸೂಚನೆಗಳು ಅಂತರ್ಮನಸ್ಸನ್ನು ಶುದ್ಧಗೊಳಿಸುತ್ತವೆ. ಶುದ್ಧೀಕರಣವಾದ ಚಿತ್ತದಲ್ಲಿ ಗುರುಗಳ ವಾಸವಿರುತ್ತದೆ. ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯಾದ ನಂತರ ಗುಣಸಂವರ್ಧನೆ ಆಗಲು ಸಹಾಯವಾಗುತ್ತದೆ. ಮನಸ್ಸಿಗೆ ಯೋಗ್ಯ ದೃಷ್ಟಿಕೋನ ಸಿಗುವವರೆಗೆ ಅದು ಅಸ್ಥಿರ ಮತ್ತು ಅಸ್ವಸ್ಥವಾಗಿರುತ್ತದೆ. ಬುದ್ಧಿಯಿಂದ ಎಷ್ಟು ಹೇಳಿದರೂ ಸ್ವಭಾವದೋಷಗಳು ಹೋಗುವುದಿಲ್ಲ.

೧೦. ನಮ್ಮಲ್ಲಿ ಬದಲಾವಣೆಯಾಗಲು ಇತರ ಪದ್ಧತಿಗಳನ್ನು ಅವಲಂಬಿಸುವುದರ ಮಹತ್ವ : ಚಿಕ್ಕ-ಚಿಕ್ಕ ತಪ್ಪುಗಳಿಗಾಗಿಯೂ ಪ್ರಾಯಶ್ಚಿತ್ತ ಮತ್ತು ಶಿಕ್ಷಾಪದ್ಧತಿಯನ್ನು ಉಪಯೋಗಿಸಿದರೆ ಅಂತರ್ಮನಸ್ಸಿನ ಮೇಲೆ ಪರಿಣಾಮವಾಗಲು ಸಹಾಯವಾಗುತ್ತದೆ. ತಖ್ತೆ ಬರೆಯುವುದು, ಸ್ವಯಂಸೂಚನೆಗಳನ್ನು ಕೊಡುವುದು, ಕ್ಷಮಾಯಾಚನೆ ಮಾಡುವುದು, ಪ್ರಾಯಶ್ಚಿತ್ತವನ್ನು ತೆಗೆದು ಕೊಳ್ಳುವುದು ಮತ್ತು ಫಲಕದ ಮೇಲೆ ತಪ್ಪುಗಳನ್ನು ಬರೆಯುವುದು, ಇವು ಸ್ಥೂಲದಲ್ಲಿನ ಪ್ರಕ್ರಿಯೆಗಳಾಗಿವೆ. ಆದ್ದರಿಂದ ನಮ್ಮ ಅಹಂ ಜಾಗೃತವಾಗದಂತೆ ಎಚ್ಚರ ವಹಿಸಬೇಕು. ಮೇಲಿನ ಅಂಶಗಳು (ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ) ಸಾಧನೆಯ ಪ್ರಾಣವಾಯು ಆಗಿದ್ದು ಖಂಡಿತವಾಗಿಯೂ ಸೂಕ್ಷ್ಮದಿಂದ ಇದರ ಪರಿಣಾಮವಾಗುತ್ತದೆ.

ಸಾಧಕರು ತಿಳಿದುಕೊಳ್ಳಬೇಕಾದ ಅಂಶವೆಂದರೆ, ಎಲ್ಲಿ ಯವರೆಗೆ ನಮ್ಮ ಅಂತರ್ಮನಸ್ಸಿನಲ್ಲಿನ ಸಂಸ್ಕಾರಗಳ ನಿರ್ಮೂಲನೆ ಆಗುವುದಿಲ್ಲವೋ, ಅಲ್ಲಿಯವರೆಗೆ ನಮಗೆ ಸಿಗುವ ಪ್ರತಿಯೊಂದು ಜನ್ಮದಲ್ಲಿ ಅದೇ ಲಿಂಗದೇಹವನ್ನು ತೆಗೆದುಕೊಂಡು ನಾವು ಪುನಃ ಪುನಃ ಜನ್ಮ ಪಡೆಯುತ್ತೇವೆ, ಎಂಬುದನ್ನು ಮರೆಯಬಾರದು.

೧೧. ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅತ್ಯಾವಶ್ಯಕ : ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತವಾಗುವ ಪದ್ಧತಿಯನ್ನು ಗುರುದೇವರು ನಮಗೆ ಎಷ್ಟೊಂದು ಸುಲಭ ರೀತಿಯಲ್ಲಿ ಹೇಳಿದ್ದಾರೆ. ಈ ಪ್ರಕ್ರಿಯೆಯ ಫಲವೆಂದರೆ ಸನಾತನ ಸಂಸ್ಥೆಯ ಸಾವಿರಾರು ಸಾಧಕರು ಗುರುದೇವರ (ಪರಾತ್ಪರ ಗುರು ಡಾಕ್ಟರರ) ಕೃಪೆಯಿಂದ ಶೇ. ೬೦ ಕ್ಕಿಂತಲೂ ಹೆಚ್ಚು ಸಾತ್ತ್ವಿಕತೆ ಪಡೆದು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಿದ್ದಾರೆ. ನೂರಾರು ಸಾಧಕರು ಸಂತರು, ಹಾಗೆಯೇ ಸದ್ಗುರು ಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಇದೆಲ್ಲವು ಗುರುಗಳ ಸಂಕಲ್ಪ ಮತ್ತು ಅವರು ನಮಗಾಗಿ ಹಗಲಿರುಳು ಮಾಡುತ್ತಿರುವ ಪ್ರಯತ್ನಗಳ ಫಲವಾಗಿದೆ.

೧೨. ಸಹಸಾಧಕರನ್ನು ‘ಅವರು ಇದ್ದ ಹಾಗೆ ಸ್ವೀಕರಿಸುವುದು’ ಮಹತ್ವದ್ದಾಗಿದೆ : ಗುರುದೇವರು ಹೇಳಿದಂತೆ ‘ಮನಸ್ಸಿನ ವಿರುದ್ಧ ಹೋಗುವುದು’, ಇದುವೇ ಸಾಧನೆಯಾಗಿದೆ. ಆದ್ದರಿಂದ ಸಾಧಕರು ಇತರ ಸಾಧಕರನ್ನು ಅವರು ಇದ್ದಹಾಗೆ ಸ್ವೀಕರಿಸಿ ಅವರೊಂದಿಗೆ ಸಕಾರಾತ್ಮಕ ಮತ್ತು ಪ್ರೀತಿಯಿಂದ ನಡೆದುಕೊಂಡರೆ’ ನಮ್ಮ ಅಂತರ್ಮನಸ್ಸಿನಲ್ಲಿರುವ ಎಷ್ಟೋ ಸ್ವಭಾವದೋಷಗಳು ಮತ್ತು ಅಹಂ ನಿರ್ಮೂಲನೆಯಾಗಲು ಸಹಾಯವಾಗುತ್ತದೆ. ‘ಸಾಧಕರೊಂದಿಗೆ ವ್ಯವಹರಿಸುವಾಗ, ಅವರೊಂದಿಗೆ ಸೇವೆಯನ್ನು ಮಾಡುವಾಗ ನಮ್ಮ ಮನಸ್ಸಿನಲ್ಲಿ ಅವರ ಬಗ್ಗೆ ಯಾವ ವಿಚಾರಗಳು ಬರುತ್ತವೆ ?’, ಎಂಬುದರ ವಿಚಾರ ಮಾಡಬೇಕು. ಬಿಂಬ-ಪ್ರತಿಬಿಂಬ ನ್ಯಾಯದಿಂದ ಸಾಧಕರ ವಿಚಾರ ಮತ್ತು ಕೃತಿಗಳಿಂದ ನಮ್ಮ ಮೇಲೆ ಪರಿಣಾಮವಾಗುತ್ತದೆ. ಆ ವಿಚಾರಗಳು ನಕಾರಾತ್ಮಕವಾಗಿವೆಯೋ ಅಥವಾ ಸಕಾರಾತ್ಮಕ ವಾಗಿವೆಯೋ, ಇದರ ಕಡೆಗೆ ಗಮನ ಕೊಡಬೇಕು. ಯಾವುದೇ ಕಾರಣದಿಂದ ಅಯೋಗ್ಯ ವಿಚಾರ ಅಥವಾ ಪ್ರತಿಕ್ರಿಯೆ ಬಂದಾಗ ನಮ್ಮ ಮನಸ್ಸಿನಲ್ಲಿ ಇನ್ನೂ ಅವರ ಬಗ್ಗೆ ಯೋಗ್ಯ ಸ್ಪಂದನಗಳು ಬರುವುದಿಲ್ಲ, ಎಂಬುದನ್ನು ತಿಳಿದುಕೊಂಡು ನಾವು ಅವರೊಂದಿಗೆ ಇನ್ನೂ ಹೆಚ್ಚೆಚ್ಚು ಬೆರೆತು ನಮ್ಮ ನಕಾರಾತ್ಮಕ ಮತ್ತು ಪ್ರತಿಕ್ರಿಯಾತ್ಮಕ ಸ್ಪಂದನಗಳನ್ನು ಸಕಾರಾತ್ಮಕ ಮಾಡಿ ಅಂತರ್ಮನಸ್ಸಿನಲ್ಲಿ ಅವರ ಬಗ್ಗೆ ಇರುವ ಸಂಸ್ಕಾರ ಕೇಂದ್ರವನ್ನು ನಾಶ ಮಾಡಬೇಕು.

೧೩. ಸ್ವೇಚ್ಛೆಯಿಂದ ಪರೇಚ್ಛೆಯ ಕಡೆಗೆ ಮತ್ತು ನಂತರ ಈಶ್ವರೇಚ್ಛೆಯ ಕಡೆಗೆ ಹೋದ ನಂತರ ಅಂತರ್ಮನಸ್ಸಿನಲ್ಲಿರುವ ಅನೇಕ ಸಂಸ್ಕಾರಗಳು ನಾಶವಾಗುವವು : ಗುರುದೇವರು ಹೇಳಿದಂತೆ ಸ್ವೇಚ್ಛೆಯಿಂದ ಪರೇಚ್ಛೆಯ ಕಡೆಗೆ ಮತ್ತು ನಂತರ ಈಶ್ವರೇಚ್ಛೆಯ ಕಡೆಗೆ ಹೋದನಂತರ ನಮ್ಮ ಅಂತರ್ಮನಸ್ಸಿನಲ್ಲಿರುವ ಅನೇಕ ಸಂಸ್ಕಾರಗಳು ನಾಶವಾಗುವವು. ಆದ್ದರಿಂದ ‘ಪ್ರತಿಯೊಬ್ಬ ಸಾಧಕನ ಕಡೆಗೆ ನೋಡುವಾಗ ನಮ್ಮಲ್ಲಿ ಸಕಾರಾತ್ಮಕ ಸ್ಪಂದನಗಳು ಬಂದರೆ ನಮ್ಮ ಅಂತರ್ಮನಸ್ಸಿನಲ್ಲಿನ ತುಂಬಾ ಕೇಂದ್ರಗಳು ನಾಶವಾಗಿವೆ’, ಎಂದು ತಿಳಿಯಬಹುದು. ಗುರುದೇವರ ಸಾನಿಧ್ಯದಲ್ಲಿರುವಾಗ ಗುರುದೇವರಿಗೆ ನಮ್ಮ ಪ್ರತಿಯೊಂದು ಆಚಾರ-ವಿಚಾರ, ಪ್ರಸಂಗ, ನಡೆ-ನುಡಿ ಇತ್ಯಾದಿಗಳು ತಕ್ಷಣ ತಿಳಿಯುತ್ತವೆ.

೧೪. ಅಂತರ್ಮನಸ್ಸಿನ ಶುದ್ಧೀಕರಣವಾಗಿ ಮನೋದೇಹ, ಕಾರಣದೇಹ ಮತ್ತು ಮಹಾಕಾರಣದೇಹ ಇವುಗಳ ಶುದ್ಧೀಕರಣ ತಾನಾಗಿಯೇ ಆಗುವುದು : ಪ್ರತಿಯೊಬ್ಬ ಸಾಧಕ ಮತ್ತು ನಮ್ಮ ಜೀವನದಲ್ಲಿ ಘಟಿಸುವ ಪ್ರತಿಯೊಂದು ಪ್ರಸಂಗವು ನಮ್ಮ ಪ್ರಗತಿಗಾಗಿ ಗುರುದೇವರು ನೀಡಿದ ಪ್ರಸಾದವೇ ಆಗಿದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯಾದ ನಂತರ ಅಂತರ್ಮನಸ್ಸು ಶುದ್ಧವಾಗಿ ಮನೋದೇಹ, ಕಾರಣದೇಹ ಮತ್ತು ಮಹಾಕಾರಣದೇಹ ಇವು ತಾನಾಗಿಯೇ ಶುದ್ಧವಾಗುವವು. ಶುದ್ಧವಾದ ಅಂತರ್ಮನಸ್ಸಿ ನಲ್ಲಿ ಭಗವಂತನ ವಿಚಾರಗಳು ಸತತವಾಗಿ ಬರತೊಡಗುತ್ತವೆ. ಗುರುದೇವರು ಹೇಳಿದಂತೆ ಅಧ್ಯಾತ್ಮ ಕೇವಲ ನೋಡುವ, ಕೇಳುವ ಅಥವಾ ಓದುವ ಶಾಸ್ತ್ರವಾಗಿರದೇ, ಅದು ಕೃತಿಯ ಶಾಸ್ತ್ರವಾಗಿದೆ. ಕೃತಿಯನ್ನು ಮಾಡದಿದ್ದರೆ ಅನುಭೂತಿಗಳು ಬರುವುದಿಲ್ಲ ಮತ್ತು ಅನುಭೂತಿಗಳು ಬರದಿದ್ದರೆ ನಮ್ಮ ಶ್ರದ್ಧೆ ಹೆಚ್ಚಾಗುವುದಿಲ್ಲ. ಮೇಲೆ ಹೇಳಿದ ವಿಚಾರಗಳು ಗುರುಕೃಪೆಯಿಂದ ಮತ್ತು ಆಶ್ರಮದಲ್ಲಿ ವಿರಾಜಮಾನವಾಗಿರುವ ಸದ್ಗುರುಗಳ ಮತ್ತು ಸಂತರ ಮಾರ್ಗದರ್ಶನದಿಂದ ಲಭಿಸಿವೆ, ಹಾಗೆಯೇ ಆಶ್ರಮದಲ್ಲಿನ ಸಾಧಕರ ಜೊತೆಗೆ ಲಭಿಸಿದ ಸಂವಾದದಿಂದ ಪ್ರಾಪ್ತವಾಗಿವೆ. ಇದರಲ್ಲಿ ನನ್ನದೇನೂ ಇಲ್ಲ; ಆದ್ದರಿಂದ ಈ ಬರವಣಿಗೆಯನ್ನು ಗುರುಚರಣಗಳಲ್ಲಿ ಅರ್ಪಿಸುತ್ತಿದ್ದೇನೆ. (ಮುಕ್ತಾಯ)

– (ಪೂ.) ಉಮೇಶ ಶೆಣೈ, ಸನಾತನ ಆಶ್ರಮ, ದೇವದ, ಪನವೇಲ. (೬.೩.೨೦೨೩)