ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ರಘುನಾಥ ಕರ್ವೆ (೮೧ ವರ್ಷ) ಇವರ ಬಗ್ಗೆ ಸನಾತನದ ಮೊದಲ ಬಾಲಕ ಸಂತ ಪೂ. ಭಾರ್ಗವರಾಮ ಪ್ರಭು (೬ ವರ್ಷ) ಇವರ ಭಾವ ಮತ್ತು ಪ್ರೀತಿ ತೋರಿಸುವ ಕೆಲವು ಭಾವಸ್ಪರ್ಶಿ ಕ್ಷಣಗಳು

ಪೂ. ವಿನಾಯಕ ರಘುನಾಥ ಕರ್ವೆ ಇವರ ೮೧ ನೇ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು

ಆಶ್ವಯುಜ ಕೃಷ್ಣ ಚತುರ್ಥಿ (೧.೧೧.೨೦೨೩) ಈ ದಿನದಂದು ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ರಘುನಾಥ ಕರ್ವೆ (ಪೂ. ಕರ್ವೆಮಾಮಾ) ಇವರ ೮೧ ನೇ ಹುಟ್ಟುಹಬ್ಬ ಇದೆ. ಆ ನಿಮಿತ್ತ ಮಂಗಳೂರಿನ ಸನಾತನದ ಮೊದಲ ಬಾಲಕ ಸಂತ ಪೂ. ಭಾರ್ಗವರಾಮ ಪ್ರಭು (೬ ವರ್ಷ) ಇವರಿಗೆ ಅವರ ಬಗ್ಗೆ ಇರುವ ಭಾವ ಮತ್ತು ಪ್ರೀತಿ ತೋರಿಸುವ ಕೆಲವು ಪ್ರಸಂಗಗಳನ್ನು ಮುಂದೆ ನೀಡುತ್ತಿದ್ದೇವೆ.

ಪೂ. ಭಾರ್ಗವರಾಮ ಭರತ ಪ್ರಭು

ಎಲ್ಲ ಸಂತರು ನನ್ನ ಹೃದಯದಲ್ಲಿದ್ದು ಅವರ ನೆನಪಾಗುತ್ತಲೇ ಅವರು ಸೂಕ್ಷ್ಮದಿಂದ ನನ್ನೆದುರು ಬರುತ್ತಾರೆ’, ಎಂದು ಪೂ. ಭಾರ್ಗಗವರಾಮ ಹೇಳುವುದು

ಸೌ. ಭವಾನಿ ಭರತ ಪ್ರಭು

ಪೂ. ಭಾರ್ಗವರಾಮ ಹೀಗೆ ಹೇಳುತ್ತಾರೆ, ”ಗುರುದೇವರು (ಪರಾತರ ಗುರು ಡಾ, ಆಠವಲೆ), ಪೂ. ಮಾಮಾ (ಸನಾತನದ ೨೩ ನೇ ಸಂತ ಪೂ. ವಿನಾಯಕ ಕರ್ವೆ (ವಯಸ್ಸು ೮೧ ವರ್ಷ), ಪೂ. ಅಣ್ಣ (ಪೂ. ರಮಾನಂದ ಗೌಡ, ಸನಾತನದ ೭೫ ನೇ ಸಂತರು), ಪೂ. ಅಜಮ್ಮ (ಪೂ. (ಶ್ರೀಮತಿ) ರಾಧಾ ಪ್ರಭು (ಪೂ. ಭಾರ್ಗವರಾಮ ಇವರ ಮುತ್ತಜ್ಜಿ), ಸನಾತನದ ೪೪ ನೇ ಸಂತರು, ವಯಸ್ಸು ೮೬ ವರ್ಷ) ಎಲ್ಲರೂ ನನ್ನ ಹೃದಯದಲ್ಲಿ ಇದ್ದಾರೆ. ನನಗೆ ಅವರ ನೆನಪಾದರೆ ಸಾಕು ಅವರು ನನ್ನ ಮುಂದೆ ಸೂಕ್ಷ್ಮದಲ್ಲಿ ಬಂದಿರುತ್ತಾರೆ. ಸಂತರಿಗೆ ಎಲ್ಲವೂ ತಿಳಿಯುತ್ತದೆ’’, ಎಂದರು.

೧. ಪೂ. ಭಾರ್ಗವರಾಮ ಇವರಿಗೆ ಪೂ. ಕರ್ವೆಮಾಮಾ ಇವರ ಬಗ್ಗೆ ಇರುವ ಪ್ರೀತಿ

ನಾವು (ನಾನು ಮತ್ತು ಪೂ. ಭಾರ್ಗವರಾಮ) ಒಮ್ಮೆ ಅಂಗಡಿಯಲ್ಲಿ ೧ ಪೆಟ್ಟಿಗೆ ಮಾವಿನ ಹಣ್ಣನ್ನು ಖರೀದಿಸಲು ಹೋಗಿದ್ದೆವು. ಆಗ ಪೂ. ಭಾರ್ಗವರಾಮ ಇವರು, ‘ಅಮ್ಮ, ಈ ಮಾವಿನ ಹಣ್ಣನ್ನು ತೆಗೆದುಕೊಳ್ಳೋಣ. ಪ್ರತಿನಿತ್ಯ ಪೂ. ಮಾಮಾ ಮತ್ತು ನಾನು ಸೇರಿ ಎಲ್ಲಾ ಹಣ್ಣು ತಿನ್ನುತ್ತೇವೆ. ಪೂ. ಮಾಮಾರವರಿಗೆ ಮಾವಿನ ಹಣ್ಣು ತುಂಬಾ ಇಷ್ಟ’, ಎಂದರು. (ಪೂ. ಭಾರ್ಗವರಾಮ ಇವರು ಪೂ. ಕರ್ವೆಮಾಮಾ ಇವರನ್ನು ‘ಪೂ. ಮಾಮಾ’, ಎಂದು ಕರೆಯುತ್ತಾರೆ.) ‘ಪೂ. ಮಾಮಾರಿಗೆ ಮಾವಿನ ಹಣ್ಣು ತುಂಬಾ ಇಷ್ಟ’, ಎಂಬುದನ್ನು ಪೂ. ಭಾರ್ಗವರಾಮರು ಗಮನಿಸಿ ಅದನ್ನು ನೆನಪಿಟ್ಟಿದ್ದು ನೋಡಿ ನನಗೆ ಆಶ್ಚರ್ಯವಾಯಿತು ಮತ್ತು ಒಬ್ಬ ಸಂತರಿಗೆ ಇನ್ನೊಬ್ಬರ ಸಂತರ ಬಗೆಗಿನ ಪ್ರೀತಿಯು ಅನುಭವಿಸಲು ಸಿಕ್ಕಿತು.

೨. ಪೂ. ಭಾರ್ಗವರಾಮ ಇವರಿಗೆ ಪೂ. ಕರ್ವೆ ಮಾಮಾ ಇವರ ಬಗ್ಗೆ ಇರುವ ಭಾವ !

೨ ಅ. ೧. ‘ಪೂ. ಕರ್ವೆಮಾಮಾನವರು ತುಳಸಿವಿವಾಹದ ಪೂಜೆಯ ಸಮಯದಲ್ಲಿ ಆವಾಹನೆ ಮಾಡಿದಾಗ ಎಲ್ಲ ದೇವತೆಗಳು ಬರುತ್ತಾರೆ’, ಎಂದು ಪೂ. ಭಾರ್ಗವರಾಮ ಇವರು ಹೇಳುವುದು : ನಮ್ಮ ಮನೆಯಲ್ಲಿ ನಡೆಯುವ ತುಳಸಿ ವಿವಾಹದ ಪೂಜೆಯ ಸಮಯದಲ್ಲಿ ಗಣಪತಿ, ಶ್ರೀಕೃಷ್ಣನ ಆವಾಹನೆ ಮಾಡಿದಾಗ ಪೂ. ಭಾರ್ಗವರಾಮ ಇವರು, ”ಪೂ. ಮಾಮಾನವರು ಆವಾಹನೆ ಮಾಡಿದಾಗ ಎಲ್ಲ ದೇವತೆಗಳು ಬರುತ್ತಾರೆ”, ಎಂದರು. ಅನಂತರ ‘ಅಮ್ಮ ನೋಡು ! ಈಗ ಗಣಪತಿ ಮತ್ತು ಶ್ರೀಕೃಷ್ಣ ಇಲ್ಲಿ ಬರುತ್ತಾರೆ. ನಿನಗೆ ಶ್ರೀಕೃಷ್ಣನು ಬಂದಿದ್ದು ಕಾಣಿಸುತ್ತದೆಯಾ ?’ ಎಂದರು.

೨ ಆ. ಪೂ. ಮಾಮಾನವರು ಮಾಡಿದ ಭಾವಪೂರ್ಣ ಪ್ರಾರ್ಥನೆಯನ್ನು ಕೇಳಿದಾಗ ಪೂ. ಭಾರ್ಗವರಾಮ ಇವರು ತೆಗೆದ ಉದ್ಗಾರ ! : ‘ಯುಗಾದಿ’ಯ ಸಮಯದಲ್ಲಿ ಪೂ. ಮಾಮಾರವರು ಧ್ವಜದ ಪೂಜೆಯನ್ನು ಮಾಡಿದರು ಮತ್ತು ಅತ್ಯಂತ ಭಾವಪೂರ್ಣವಾಗಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥನೆಯನ್ನು ಕೂಡ ಮಾಡಿದರು. ಪೂ. ಮಾಮಾನವರು ಮಾಡಿದ ಪ್ರಾರ್ಥನೆಯನ್ನು ಕೇಳಿದ ನಂತರ ಪೂ. ಭಾರ್ಗವರಾಮ ತುಂಬಾ ಆನಂದದಿಂದ, ”ಪೂ. ಮಾಮಾನವರು ಎಷ್ಟು ಭಾವಪೂರ್ಣವಾಗಿ ಪ್ರಾರ್ಥನೆಯನ್ನು ಮಾಡಿದರು ! ಎಲ್ಲ ಸಾಧಕರಿಗೆ ಭಾವಜಾಗೃತಿ ಆಯಿತು. ಬೇಗ ಹಿಂದೂ ರಾಷ್ಟ್ರ ಬರುತ್ತದೆ, ಅವರ ಪ್ರಾರ್ಥನೆ ಕೇಳಿ ನನಗೂ ಭಾವಜಾಗೃತಿ ಆಯಿತು. ಪೂ. ಮಾಮಾನವರಲ್ಲಿ ಎಷ್ಟು ಭಾವವಿದೆಯಲ್ಲ”, ಎಂದು ಹೇಳಿದರು.

೨ ಇ. ಪೂ. ಕರ್ವೆಮಾಮಾರಿಗೆ ಪ್ರವೇಶದ್ವಾರ ತೆರೆಯುವಂತಾಗ ಬಾರದೆಂದು ಪೂ. ಭಾರ್ಗವರಾಮ ಇವರು ಚತುಷ್ಚಕ್ರ ವಾಹನದಿಂದ ಸ್ವಲ್ಪ ಬೇಗೆ ಇಳಿದು ಪ್ರವೇಶದ್ವಾರ ತೆಗೆಯುವುದು : ಪೂ. ಮಾಮಾರವರು ಸ್ವಾಗತಕಕ್ಷೆಯಲ್ಲಿ ಸೇವೆ ಮಾಡುತ್ತಿರುತ್ತಾರೆ. ನಾವು ಚತುಷ್ಚಕ್ರ ವಾಹನದಲ್ಲಿ ಪ್ರವೇಶದ್ವಾರದ ಬಳಿ ತಕ್ಷಣ ಅವರು ಬಂದು ಪ್ರವೇಶದ್ವಾರ ತೆಗೆಯುತ್ತಾರೆ. ಇದನ್ನು ನೋಡಿ ಪೂ. ಭಾರ್ಗವರಾಮ ಇವರು, ”ಅಮ್ಮ ಇನ್ನು ಮುಂದೆ ಮಾಮಾನವರು ನಮಗಾಗಿ ಪ್ರವೇಶದ್ವಾರ ತೆರೆಯುವುದು ಯೋಗ್ಯವಲ್ಲ. ನನಗೆ ನಾಚಿಕೆ ಆಗುತ್ತದೆ. ನಾವು ಏನಾದರೂ ಯುಕ್ತಿ ಮಾಡೋಣ. ಚತುಷ್ಚಕ್ರ ವಾಹನ ಸ್ವಲ್ಪ ಹಿಂದೆ ನಿಲ್ಲಿಸು. ನಾನೇ ಹೋಗಿ ಪ್ರವೇಶದ್ವಾರ ತೆಗೆಯುತ್ತೇನೆ”, ಎಂದರು. ಅನಂತರ ಪೂ. ಭಾರ್ಗವರಾಮ ಪ್ರತಿ ದಿನ ಶಾಲೆಗೆ ಹೋಗುವ ಮೊದಲು ಅವರೇ ಸ್ವತಃ ಮುಂದೆ ಹೋಗಿ ಬಾಗಿಲು ತೆಗೆಯುತ್ತಾರೆ.

೨ ಈ. ಪೂ ಭಾರ್ಗವರಾಮ ಹೀಗೆ ಹೇಳುತ್ತಾರೆ, ”ಪೂ. ಮಾಮಾರವರು ನನ್ನತ್ತ ನೋಡಿ ನಕ್ಕರೂ ‘ಅವರು ತುಂಬಾ ಪ್ರೀತಿಯನ್ನು ನೀಡಿದರು’, ಎಂದು ನನಗೆ ಅನಿಸುತ್ತದೆ. ಅವರ ದೃಷ್ಟಿಯಲ್ಲಿ ತುಂಬಾ ಪ್ರೀತಿ ಮತ್ತು ಕಾಳಜಿ ಇರುತ್ತದೆ.”

೨ ಉ. ‘ಪೂ. ಕರ್ವೆಮಾಮಾ ಇವರು ಡಬ್ಬಿಯಲ್ಲಿ ತುಂಬಿದ ಕುಂಕುಮಕ್ಕೆ ಸುಗಂಧ ಬರುತ್ತದೆ ಹಾಗೂ ಅದರಲ್ಲಿ ಚೈತನ್ಯ ಇರುವುದರಿಂದ ‘ಅದನ್ನು ದೇಹಕ್ಕೆ ಹಚ್ಚಬೇಕು’, ಎಂದೆನಿಸುತ್ತದೆ, ಎಂದು ಪೂ. ಭಾರ್ಗವರಾಮರು ಇವರು ಹೇಳುವುದು : ಪೂ. ಭಾರ್ಗವರಾಮರು ಪೂ. ಮಾಮಾರೊಂದಿಗೆ ‘ಡಬ್ಬಿಗೆ ಕುಂಕುಮ ತುಂಬಿಸುವ ಮತ್ತು ಆ ಡಬ್ಬಿಗಳನ್ನು ಪೆಟ್ಟಿಗೆಯಲ್ಲಿ ‘ಪ್ಯಾಕ್’ ಮಾಡಿ ಇತರ ಸ್ಥಳಗಳಿಗೆ ಕಳುಹಿಸು ವುದು’, ಈ ಸೇವೆಗಳನ್ನು ಮಾಡಿದರು. ಅನಂತರ ಅವರು, ”ಅಮ್ಮಾ ಪೂ. ಮಾಮಾರವರು ನನಗೆ ಸೇವೆಗಳನ್ನು ಚೆನ್ನಾಗಿ ಹೇಳಿ ಕೊಡುತ್ತಾರೆ”, ಎಂದರು. ಪೂ. ಭಾರ್ಗವರಾಮ ಇವರು ಕೈಯಲ್ಲಿ ಕುಂಕುಮ ತಂದಿದ್ದರು. ಅವರು ಆ ಬಗ್ಗೆ ಹೇಳುತ್ತಾ, ‘ಈ ಕುಂಕುಮದ ಪರಿಮಳ ತೆಗೆದುಕೋ. ಎಷ್ಟು ಪರಿಮಳ ಇದೆ ಅಲ್ಲ? ಇದನ್ನು ಪೂ. ಮಾಮಾರವರು ‘ಪ್ಯಾಕ್’ ಮಾಡುತ್ತಾರೆ; ಅದರಿಂದ ಸಾಧಕರಿಗೆ ತುಂಬಾ ಚೈತನ್ಯ ಸಿಗುತ್ತದೆ. ‘ಈ ಕುಂಕುಮವನ್ನು ಇಡೀ ಮೈಗೆ ಹಚ್ಚಿಕೊಳ್ಳೋಣ’ ಎಂದೆನಿಸುತ್ತದೆ”, ಎಂದರು.

೩. ಒಮ್ಮೆ ಪೂ. ಭಾರ್ಗವರಾಮ ಇವರು, ”ಪೂ. ಮಾಮಾ ಅಖಂಡ ಜಪ ಮಾಡುತ್ತಾರೆ. ನಾನೂ ಹಾಗೆ ಮಾಡಬೇಕು”, ಎಂದರು.

‘ಸಂತರ ಪ್ರತಿಯೊಂದು ಕೃತಿ ಮತ್ತು ವಿಚಾರ ಆಧ್ಯಾತ್ಮಿಕ ಸ್ತರದಲ್ಲಿರುತ್ತದೆ’, ಇದನ್ನು ಅನುಭವಿಸಲು ಅವಕಾಶ ಕೊಟ್ಟಿರುವ ಗುರುದೇವರ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು.

– ಸೌ. ಭವಾನಿ ಭರತ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ), ಮಂಗಳೂರು ಸೇವಾಕೇಂದ್ರ (೧೧.೧೦.೨೦೨೩)