ಪುರಾಣಕಾಲದಲ್ಲಿ ಭಾರತದಲ್ಲಿ ವಿಮಾನಗಳು ಹಾಗೂ ಇತರ ವಾಹನಗಳು ಆಕಾಶದಲ್ಲಿ ಹಾರುತ್ತಿರುವುದರ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ !

‘ಚಂದ್ರಯಾನ-3’ ಅಭಿಯಾನದ ಯಶಸ್ಸನ್ನು ವಿದ್ಯಾರ್ಥಿಗಳಿಗೆ ಹೇಳಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ಪ್ರಶಿಕ್ಷಣ ಪರಿಷತ್ತಿನಿಂದ ಪುಸ್ತಕ ಪ್ರಕಾಶನ !

ನವ ದೆಹಲಿ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ತಿನಿಂದ (ಎನ್.ಸಿ.ಇ.ಆರ್.ಟಿ. ಇಂದ) ಇತ್ತೀಚಿಗೆ ಒಂದು ಪುಸ್ತಕ ಪ್ರಕಾಶಿತಗೊಳಿಸಲಾಗಿದ್ದು, ‘ಚಂದ್ರಯಾನ-3’ ಅಭಿಯಾನಕ್ಕೆ ದೊರೆತಿರುವ ಯಶಸ್ಸಿನ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಪುಸ್ತಕದಲ್ಲಿ ಹಿಂದೂ ಧರ್ಮದಲ್ಲಿನ ಪುರಾಣಗಳ ಆಧಾರ ನೀಡಲಾಗಿದೆ. ಇದರಲ್ಲಿ ‘ಪುರಾಣ ಕಾಲದಲ್ಲಿನ ವಿಮಾನಗಳು ಮತ್ತು ಇತರ ವಾಹನಗಳು ಹಾರುತ್ತಿದ್ದವು’, ಎಂದು ಹೇಳಲಾಗಿದೆ.

ಚಂದ್ರಯಾನ 3 ಅಭಿಯಾನದ ಯಶಸ್ಸು ಶಾಲೆ ಮತ್ತು ಕಾಲೇಜುಗಳಲ್ಲಿ ಆಚರಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಸೂಚನೆ ನೀಡಿದ ನಂತರ ಈ ಪುಸ್ತಕ ಪ್ರಕಾಶನಗೊಳಿಸಲಾಗಿದೆ. ಇದರಲ್ಲಿ ‘ಪುರಾಣ ಕಾಲದಿಂದ ಭಾರತದಲ್ಲಿ ವಿಮಾನ ಮತ್ತು ವಾಯುವಿನಲ್ಲಿ ಹಾರುವ ವಾಹನಗಳು ಇದರ ಬಗ್ಗೆ ಸಂಶೋಧನೆ ಮಾಡಲಾಗಿದೆ. ಇದರ ಸಂದರ್ಭದ ವಿಮಾನ ಶಾಸ್ತ್ರ’ ಈಗ ಗ್ರಂಥದಲ್ಲಿ ಕಂಡು ಬರುತ್ತಿದೆ. ವೇದ ಭಾರತದಲ್ಲಿ ಎಲ್ಲಕ್ಕಿಂತ ಪ್ರಾಚೀನ ಗ್ರಂಥವಾಗಿದೆ. ಅದರಲ್ಲಿ ದೇವತೆಗಳು ರಥದ ಉಪಯೋಗ ಮಾಡುತ್ತಿದ್ದರು ಮತ್ತು ಆ ರಥಗಳು ಹಾರುತ್ತಿದ್ದವು. ರಥದ ಉಪಯೋಗ ದೇವರು ಪೃಥ್ವಿ, ಸ್ವರ್ಗ, ಅಂತರಿಕ್ಷದಲ್ಲಿ ಹೋಗಲು ಉಪಯೋಗ ಮಾಡುತ್ತಿದ್ದರು. ರಾವಣನ ಪುಷ್ಪಕ ವಿಮಾನದ ಉಲ್ಲೇಖ ರಾಮಾಯಣದಲ್ಲಿ ಇದೆ. ವಿಶ್ವಕರ್ಮನು ಪುಷ್ಪಕ ವಿಮಾನ ಸೂರ್ಯನ ಧೂಳಿಕಣದಿಂದ ನಿರ್ಮಿಸಿದ್ದನು, ಎಂದು ಈ ರೀತಿಯ ಲೇಖನ ಈ ಪುಸ್ತಕದಲ್ಲಿದೆ.

ಸಂಪಾದಕೀಯ ನಿಲುವು

ಕೇಂದ್ರ ಸರಕಾರದ ಶೈಕ್ಷಣಿಕ ಪರಿಷತ್ತಿನಿಂದ ಈ ರೀತಿಯ ಪುಸ್ತಕ ಪ್ರಕಾಶಿತ ಮಾಡುವುದು ಶ್ಲಾಘನೀಯವಾಗಿದೆ. ಈಗ ಈ ಶೈಕ್ಷಣಿಕ ಪರಿಷತ್ತಿನಿಂದ ಭಾರತದ ಯೋಗ್ಯ ಇತಿಹಾಸ ಮತ್ತು ಜ್ಞಾನ  ವಿದ್ಯಾರ್ಥಿಗಳಿಗೆ ಕಲಿಸುವುದಕ್ಕಾಗಿ ಅದರ ಪುಸ್ತಕದಲ್ಲಿ ಬದಲಾವಣೆ ಮಾಡುವುದು ಅವಶ್ಯಕವಾಗಿದೆ.